ನವದೆಹಲಿ[ಮಾ.12]: ಸೋಶಿಯಲ್ ಮಿಡಿಯಾದಲ್ಲಿ ವಿಡಿಯೋ ಒಂದು ಭಾರೀ ವೈರಲ್ ಆಗುತ್ತಿದೆ. ಯುವತಿಯೊಬ್ಬಳು ಗೊಂದಲಕ್ಕೀಡಾಗಿ ಬ್ರೇಕ್ ಬದಲು ಎಕ್ಸಿಲಿರೇಟರ್ ತಿರುಗಿಸಿದ್ದಾಳೆ. ಪರಿಣಾಮ ಎಂಬಂತೆ ಆಕೆಯಿಂದ ಗಾಡಿ ಗಾಳಿಯಲ್ಲಿ ಹಾರಿ ರಸ್ತೆಗೆ ಅಪ್ಪಳಿಸಿದ್ದಾಳೆ. ಈ ವಿಡಿಯೋ ವೀಕ್ಷಿಸಿದ ಕೆಲವರು ಯುವತಿ ಕುರಿತು ಕನಿಕರ ತೋರಿದ್ದರೆ ಇನ್ನು ಕೆಲವರು ಹೆಚ್ಚು ಗಾಯಗಳಾಗಿಲ್ಲ ಎಂಬದು ಕಮೆಂಟ್ ಮಾಡಿದ್ದಾರೆ.

ಹೊರಗಿಂದ್ಲೇ ದೇವರಿಗೆ ಕೈ ಮುಗಿದು ಹೊರಟಾಕೆಗೆ ಸಿಕ್ತು 'VIP' ಎಂಟ್ರಿ!

ವಿಡಿಯೋದಲ್ಲೇನಿದೆ?

ಯುವತಿ ಗಾಡಿ ಟರ್ನ್ ಮಾಡಲು ಎಕ್ಸಿಲಿರೇಟರ್ ತಿರುಗಿಸುತ್ತಾಳೆ. ಆಕೆ ಅದೆಷ್ಟು ಫಾಸ್ಟ್ ಆಗಿ ತಿರುಗಿಸುತ್ತಾಳೆಂದರೆ ಮೊದಲು ಎದುರಿದ್ದ ಗೇಟ್ ಗೆ ಗಾಡಿ ಅಪ್ಪಳಿಸುತ್ತದೆ. ಇದರಿಂದ ಭಯಬಿದ್ದ ಯುವತಿ ಬ್ರೇಕ್ ಹಾಕುವ ಬದಲು ಮತ್ತೆ ಎಕ್ಸಿಲಿರೇಟರ್ ಕೊಡುತ್ತಾಳೆ. ಇದರಿಂದ ಗಾಡಿ ಗಾಳಿಯಲ್ಲಿ ಹಾರಿ, ರಸ್ತೆಗಪ್ಪಳಿಸುತ್ತದೆ. ಗಾಡಿ ಜೊತೆ ಯುವತಿ ಕೂಡಾ ದೊಪ್ಪನೆಂದು ಬಿದ್ದಿದ್ದಾಳೆ. ಘಟನೆ ನಡೆದ ಬೆನ್ನಲ್ಲೇ ಸ್ಥಳೀಯರು ಆಕೆಯ ರಕ್ಷಣೆಗೆ ಧಾವಿಸುತ್ತಾರೆ. 

ಫೇಸ್ ಬುಕ್ ನಲ್ಲಿ ಭಾರೀ ಶೇರ್ ಆಗುತ್ತಿರುವ ಈ ವಿಡಿಯೋಗೆ ಭಿನ್ನ ವಿಭಿನ್ನ ಕಮೆಂಟ್ ಗಳು ಬಂದಿವೆ. ಕೆಲವರು ಅಪ್ಪನ ಮುದ್ದಿನ ರಾಜಕುಮಾರಿ ರಸ್ತೆಯಲ್ಲಿ ಬಿದ್ದಳು ಎಂದು ಕಮೆಂಟ್ ಮಾಡಿದರೆ, ಇನ್ನು ಕೆಲವರು ಆಕೆಯ ಪ್ರತಿ ಕರುಣೆಯ ನೋಟ ಬೀರಿದ್ದಾರೆ.