ನವದೆಹಲಿ[ಮಾ.06]: ಹಲವಾರು ಬಾರಿ ಅನೇಕ ಮಂದಿ ದೇವಸ್ಥಾನದ ಒಳ ಹೋಗದೇ, ಹೊರಗಿನಿಂದಲೇ ದೇವರಿಗೆ ಕೈಮುಗಿದು ಹೋಗುತ್ತಾರೆ. ಸಮಯ ಉಳಿಸಲು ಹೀಗೆ ಹೊರಗಿನಿಂದಲೇ ದೇವರ ದರ್ಶನ ಪಡೆಯುತ್ತಾರೆ. ಸದ್ಯ ಸೋಶಿಯಲ್ ಮೀಡಿಯಾದಲ್ಲಿ ವಿಡಿಯೋ ಒಂದು ವೈರಲ್ ಆಗುತ್ತಿದ್ದು, ಇದೇ ರೀತಿ ನಡೆದುಕೊಂಡ ಯುವತಿಯೊಬ್ಬಳಿಗೆ ಎದುರಾದ ಪರಿಸ್ಥಿತಿ ಇದರಲ್ಲಿ ಸೆರೆಯಾಗಿದೆ.

ನಿದ್ದೆಗೆ ಜಾರಿದ ಉಬರ್ ಚಾಲಕ, ಪುಣೆಯಿಂದ ಮುಂಬೈಗೆ ತಾನೇ ಕಾರು ಚಲಾಯಿಸಿದ ಮಹಿಳೆ!

ದ್ವಿಚಕ್ರ ವಾಹನದಲ್ಲಿ ಬಂದ ಯುವತಿಯೊಬ್ಬಳು ದೇವಸ್ಥಾನದ ಬಾಗಿಲಿನೆದುರು ವಾಹನ ನಿಲ್ಲಿಸಿ, ಕೆಳಗಿಳಿಯದೆಯೇ ಅಲ್ಲಿಂದಲೇ ದೇವರಿಗೆ ಕೈಮುಗಿಯುತ್ತಾಳೆ. ಬಳಿಕ ಅಲ್ಲಿಂದಲೇ ಅವಸರದಲ್ಲಿ ಹೊರಡಲು ಅನುವಾಗುತ್ತಾಳೆ. ಆದರತೆ ನೋಡ ನೋಡುತ್ತಿದ್ದಂತೆಯೇ ಕ್ಲಚ್ ಆಕೆಯ ಕೈಯ್ಯಿಂದ ಜಾರಿಕೊಳ್ಳುತ್ತದೆ. ಮುಂದೇನು...? ಮರುಕ್ಷಣವೇ ವಾಹನ ದೇಗುಲದೊಳಗೆ ನುಗ್ಗಿದ್ದು, ಯುವತಿ ನಂದಿ ವಿಗ್ರಹದೆದುರು ಬಿದ್ದಿದ್ದಾಳೆ.

ಘಟನೆ ಬೆನ್ನಲ್ಲೇ ದೇಗುಲದ ಆವರಣದಲ್ಲಿದ್ದ ಜನರು ಅಲ್ಲಿ ಸೇರಿದ್ದಾರೆ. ಕೂಡಲೇ ಸಾವರಿಸಿಕೊಂಡ ಯುವತಿ ಎದ್ದು, ವಾಹನವನ್ನು ಹೊರಗೊಯ್ದಿದ್ದಾಳೆ. 

ಸೋಶಿಯಲ್ ಮೀಡಿಯಾದಲ್ಲಿ ಈ ವಿಡಿಯೋ ಭಾರೀ ಚರ್ಚೆ ಹುಟ್ಟು ಹಾಕಿದೆ. ಭಿನ್ನ ವಿಭಿನ್ನ ಕಮೆಂಟ್ ಕೂಡಾ ಬಂದಿದ್ದು, ಒಬ್ಬಾತ 'ಹೊರಗಿನಿಂದಲೇ ದರ್ಶನ ಪಡೆದು ಹೋಗುತ್ತಿದ್ದವಳನ್ನು ದೇವರೇ ಒಳಗೆ ಕರೆಸಿಕೊಂಡಿದ್ದಾನೆ' ಎಂದು ಬರೆದಿದ್ದಾನೆ.