ಮಾಜಿ ಸಿಎಂ ಮನೆಯಲ್ಲಿ ರದ್ದಾದ 26 ಲಕ್ಷ ನೋಟು ಪತ್ತೆ!| 332 ಕೋಟಿ ರು. ಹಣ ದುರುಪಯೋಗಪಡಿಸಿಕೊಂಡ ಆರೋಪ
ಇಂಫಾಲ್[ನ.23]: ಮಣಿಪುರ ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ 332 ಕೋಟಿ ರು. ಹಣ ದುರುಪಯೋಗಪಡಿಸಿಕೊಂಡಿದ್ದಾರೆ ಎಂಬ ಆರೋಪ ಸಂಬಂಧ ಪ್ರತಿಪಕ್ಷ ನಾಯಕ ಒಕ್ರಂ ಇಬೋಬಿ ಸಿಂಗ್ ಅವರಿಗೆ ಸಂಬಂಧಿಸಿದ 9 ಕಡೆಗಳಲ್ಲಿ ಸಿಬಿಐ ಏಕಕಾಲದಲ್ಲಿ ದಾಳಿ ನಡೆಸಿದೆ.
ಈ ಸಂದರ್ಭದಲ್ಲಿ ಒಕ್ರಂ ಅವರ ನಿವಾಸದಲ್ಲಿ 26.49 ಲಕ್ಷ ರು. ಮೌಲ್ಯದ ಅಪನಗದೀಕರಣಗೊಂಡ ನೋಟುಗಳು ಪತ್ತೆಯಾಗಿದೆ.
ಅಯ್ಯಯ್ಯಪ್ಪಾ: 2 ಸಾವಿರ ನೋಟ್ ಬ್ಯಾನ್ ಅಂದಿದ್ಯಾರಪ್ಪಾ?
ಕಾನೂನು ಪ್ರಕಾರ ಅಪನಗದೀಕರಣದ ನೋಟು ಇಟ್ಟುಕೊಳ್ಳುವುದು ಅಪರಾಧವಾಗಿದ್ದು, ಪತ್ತೆಯಾದ ಹಣದ ಐದು ಪಟ್ಟು ದಂಡ ವಿಧಿಸುವ ಸಾಧ್ಯತೆಯಿದೆ. ಮಣಿಪುರ, ಮೇಘಾಲಯ ಮತ್ತು ಹರಾರಯಣದಲ್ಲಿನ ಇಬೋಬಿ ಅವರಿಗೆ ಸಂಬಂಧಿಸಿದ ಆಸ್ತಿಗಳ ಮೇಲೆ ಸಿಬಿಐ ಶುಕ್ರವಾರ ಏಕಕಾಲದಲ್ಲಿ ದಾಳಿ ನಡೆಸಿದೆ.
ದೇಶಕ್ಕಾಗಿ ಕಷ್ಟ ಇಷ್ಟ ಎಂದ ಭಾರತೀಯ: ಅಪನಗದೀಕರಣಕ್ಕೆ 3 ವರ್ಷದ ಐತಿಹ್ಯ!
