ಕೌಕೆಶಿಯನ್ ಶೆಫರ್ಡ್ ಭಾರತದಲ್ಲಿರುವ ಅತೀ ದುಬಾರಿ ನಾಯಿ,ಇದ್ರ ಮೌಲ್ಯ 20 ಬೆಂಜ್ ಕಾರಿಗೆ ಸಮ
ಭಾರತದ ಅತ್ಯಂತ ದುಬಾರಿ ನಾಯಿ ಯಾವುದು? ವಿಶೇಷ ಅಂದರೆ ಈ ದುಬಾರಿ ಬೆಲೆಯ ನಾಯಿ ಬೆಂಗಳೂರಿನಲ್ಲಿದೆ. ಈ ನಾಯಿಯ ಮಹತ್ವವನ್ನು ನೀವು ಈ ವಿಷಯದಿಂದಲೇ ಅಂದಾಜಿಸಬಹುದು, ಅದರ ಬೆಲೆಯಲ್ಲಿ 20 ಮರ್ಸಿಡಿಸ್ ಕಾರುಗಳನ್ನು ಸುಲಭವಾಗಿ ಖರೀದಿಸಬಹುದು.

ಬೆಂಗಳೂರು(ಫೆ.04) ನಾಯಿ ಕೇವಲ ಸಾಕು ಪ್ರಾಣಿಯಲ್ಲ. ಕುಟುಂಬ ಒಬ್ಬ ಸದಸ್ಯನಿದ್ದಂತೆ ಹಲವರು ನಾಯಿ ಆರೈಕೆಗಾಗಿ ಭಾರಿ ಶ್ರಮಹಿಸುತ್ತಾರೆ. ಮನುಷ್ಯನ ನಂಬಿಕಸ್ಥ ಮಿತ್ರ ಎಂದೇ ಗುರುತಿಸಿಕೊಂಡಿರುವ ನಾಯಿ ಸಾಕುವಿಕೆ ಟ್ರೆಂಡ್ ಇತ್ತೀಚೆಗೆ ಹೆಚ್ಚಾಗಿದೆ. ಹಲವರು ವಿದೇಶಿ ತಳಿಗಳ ನಾಯಿಗಳನ್ನು ತಂದು ಸಾಕುತ್ತಾರೆ. ಅಕ್ಕರೆಯಿಂದ, ಪ್ರೀತಿಯಿಂದ ಸಾಕಿ ಸಲಹುತ್ತಾರೆ. ಭಾರತದಲ್ಲಿ ಅತೀ ದುಬಾರಿ ಬೆಲೆಯ ಹಲವು ಪ್ರಬೇಧದ ನಾಯಿಗಳಿವೆ. ಈ ಪೈಕಿ ಅತೀ ದುಬಾರಿ ನಾಯಿ ಎಂದರೆ ಕೌಕೆಶಿಯನ್ ಶೆಫರ್ಡ್. ಇದರ ಬೆಲೆ 20 ಮರ್ಸಿಡೀಸ್ ಬೆಂಜ್ ಕಾರಿಗೆ ಸಮವಾಗಿದೆ.
ಪ್ರಪಂಚದಾದ್ಯಂತ ಹಲವು ನಾಯಿ ತಳಿಗಳಿವೆ, ಅವುಗಳ ಬೆಲೆ ಲಕ್ಷಾಂತರ ರೂಪಾಯಿಗಳಲ್ಲಿ ಇರುತ್ತದೆ. ಆದರೆ ಭಾರತದ ಅತ್ಯಂತ ದುಬಾರಿ ಸಾಕು ನಾಯಿಯ ಬಗ್ಗೆ ನಿಮಗೆ ತಿಳಿದಿದೆಯೇ? ಭಾರತದ ಅತ್ಯಂತ ದುಬಾರಿ ನಾಯಿಯ ಹೆಸರು ಕೌಕೆಶಿಯನ್ ಶೆಫರ್ಡ್. ಶೆಫರ್ಡ್ ತಳಿಯ ಈ ನಾಯಿಯ ಬೆಲೆ ಕೇಳಿದರೆ ನೀವು ಆಶ್ಚರ್ಯಚಕಿತರಾಗುವಿರಿ. ಈ ದುಬಾರಿ ನಾಯಿ ಬೆಂಗಳೂರಿನಲ್ಲಿದೆ ಅನ್ನೋದು ಮತ್ತೊಂದು ವಿಶೇಷ.
ಡ್ಯೂಟಿ ಟೈಮಲ್ಲಿ ನಿದ್ದೆ ಮಾಡಿದ ಪೊಲೀಸ್ ಡಾಗ್‌ಗೆ ಇಯರೆಂಡ್ ಬೋನಸ್ ಕಟ್ ...!
ಒಂದು ನಾಯಿಯ ಬೆಲೆಯಲ್ಲಿ 20 ಮರ್ಸಿಡಿಸ್ ಬೆಂಜ್ ಕಾರುಗಳು
ಭಾರತದ ಅತ್ಯಂತ ದುಬಾರಿ ನಾಯಿ 'ಕ್ಯಾಡ್ಬೋಮ್ ಹೈದರ್' ನ ಬೆಲೆ 20 ಕೋಟಿ ರೂಪಾಯಿಗಳು. ಅಂದರೆ, 1 ಕೋಟಿ ರೂಪಾಯಿ ಮೌಲ್ಯದ 20 ಮರ್ಸಿಡಿಸ್ ಬೆಂಜ್ ಇ-ಕ್ಲಾಸ್ ಕಾರುಗಳನ್ನು ಸುಲಭವಾಗಿ ಖರೀದಿಸಬಹುದು. ವರದಿಗಳ ಪ್ರಕಾರ, 'ಕೌಕೆಶಿಯನ್ ಶೆಫರ್ಡ್' ಇಲ್ಲಿಯವರೆಗೆ 32 ಪದಕಗಳನ್ನು ಗೆದ್ದಿದೆ.
ಭಾರತದ ಅತ್ಯಂತ ದುಬಾರಿ ನಾಯಿ ಯಾರ ಬಳಿ ಇದೆ
ಭಾರತದ ಅತ್ಯಂತ ದುಬಾರಿ ನಾಯಿಯ ಮಾಲೀಕರು ಬೆಂಗಳೂರು ನಿವಾಸಿ ಎಸ್. ಸತೀಶ್ ಬಳಿ ಇದೆ. ಇದಕ್ಕೆ ಕ್ಯಾಡ್ಬೋಮ್ ಹೈದರ್ ಎಂದು ಹೆಸರಿಟ್ಟಿದ್ದಾರೆ. ಸ್ವಭಾವತಃ ನಿರ್ಭೀತ ಕೊಕೇಶಿಯನ್ ಶೆಫರ್ಡ್ ತಳಿಯ ನಾಯಿಗಳು ರಷ್ಯಾ, ಜಾರ್ಜಿಯಾ, ಅರ್ಮೇನಿಯಾ ಮತ್ತು ಅಜೆರ್ಬೈಜಾನ್‌ನಂತಹ ಶೀತ ದೇಶಗಳಲ್ಲಿ ಮಾತ್ರ ಕಂಡುಬರುತ್ತವೆ. ಭಾರತೀಯ ನಾಯಿ ತಳಿ ಸಂಘಟನೆ ಅಧ್ಯಕ್ಷರಾಗಿರುವ ಬೆಂಗಳೂರಿನ ಸತೀಶ್ 20 ಕೋಟಿ ರೂಪಾಯಿ ನೀಡಿ ಖರೀದಿಸಿದ್ದಾರೆ. ಈ ಮೊತ್ತವು ಹಲವು ದೊಡ್ಡ ಕಂಪನಿಗಳ ಸಿಇಒಗಳ ವಾರ್ಷಿಕ ವೇತನಕ್ಕಿಂತ ಹೆಚ್ಚಾಗಿದೆ.
50 ರಿಂದ 75 ಕೆಜಿ ತೂಕವಿರುವ ಕೊಕೇಶಿಯನ್ ಶೆಫರ್ಡ್ ತಳಿಯ ನಾಯಿಗಳು
ಕೊಕೇಶಿಯನ್ ಶೆಫರ್ಡ್ ತಳಿಯ ನಾಯಿಗಳು 50 ರಿಂದ 75 ಕೆಜಿ ತೂಕವಿರುತ್ತವೆ. ಈ ತಳಿಯ ನಾಯಿಗಳ ಎತ್ತರ ಸುಮಾರು 30 ಇಂಚು ಅಂದರೆ ಎರಡೂವರೆ ಅಡಿ. ವಿದೇಶಗಳಲ್ಲಿ ಈ ನಾಯಿಗಳು ತೋಳಗಳಿಂದ ಸಾಕುಪ್ರಾಣಿಗಳನ್ನು ರಕ್ಷಿಸುತ್ತವೆ. ಇವುಗಳ ಸರಾಸರಿ ಜೀವಿತಾವಧಿ 10 ರಿಂದ 12 ವರ್ಷಗಳು. ಈ ತಳಿಯ ಒಂದೂವರೆ ವರ್ಷದ ನಾಯಿಯನ್ನು ಸಾಕಲು ಸಹ ಸಾಕಷ್ಟು ಹಣ ಖರ್ಚಾಗುತ್ತದೆ.
ಎಸ್. ಸತೀಶ್ ಅವರ ಬಳಿ 2 ಕೊರಿಯನ್ ಮಾಸ್ಟಿಫ್‌ಗಳೂ ಇವೆ
ಬೆಂಗಳೂರಿನಲ್ಲಿ ವಾಸಿಸುವ ಪ್ರಾಣಿ ಪ್ರೇಮಿ ಎಸ್. ಸತೀಶ್ ಅವರ ಬಳಿ ಕೊರಿಯನ್ ತಳಿಯ 2 ಮಾಸ್ಟಿಫ್ ನಾಯಿಗಳೂ ಇವೆ, ಅವುಗಳನ್ನು ಅವರು 2016 ರಲ್ಲಿ ತಂದರು. ಈ ಎರಡೂ ನಾಯಿಗಳ ಬೆಲೆ ತಲಾ 1 ಕೋಟಿ ರೂಪಾಯಿಗಳು. ಸತೀಶ್ ಈ ನಾಯಿಗಳನ್ನು ವಿಶೇಷವಾಗಿ ಚೀನಾದಿಂದ ತರಿಸಿಕೊಂಡರು. ನಂತರ ಅವರು ವಿಮಾನ ನಿಲ್ದಾಣದಿಂದ ತಮ್ಮ ಮನೆಗೆ ರೋಲ್ಸ್ ರಾಯ್ಸ್ ಕಾರಿನಲ್ಲಿ ಕರೆತಂದಿದ್ದರು. ಈ ನಾಯಿಗಳಿಗೆ ರಾಜಾತಿಥ್ಯ ನೀಡಲಾಗುತ್ತದೆ. ಇದಕ್ಕಾಗಿ ಆಳುಗಳಿದ್ದಾರೆ.
'ನಾಯಿ ಜೊತೆಗೆ ಸ್ನೇಹ ಮಾಡಿದ ಹುಲಿ'ಯ ವಿಡಿಯೋ ವೈರಲ್; ಇದು ಸಸ್ಯಾಹಾರಿ ಹುಲಿಯೇ?