ವಿಶ್ವದ ಅತೀ ದೊಡ್ಡ ಬೆಕ್ಕು ಎಂದೇ ಹೇಳಲಾದ ಬೆಕ್ಕೊಂದರ ವೀಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ರಷ್ಯಾದ ಮಹಿಳೆಯೊಬ್ಬರ ಬೆಕ್ಕು ಇದಾಗಿದ್ದು, ಇದರ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ಸಂಚಲನ ಸೃಷ್ಟಿಸಿದೆ.
ವಿಶ್ವದ ಅತೀ ದೊಡ್ಡ ಬೆಕ್ಕು ಎಂದೇ ಹೇಳಲಾದ ಬೆಕ್ಕೊಂದರ ವೀಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ರಷ್ಯಾದ ಮಹಿಳೆಯೊಬ್ಬರ ಬೆಕ್ಕು ಇದಾಗಿದ್ದು, ಇದರ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ಸಂಚಲನ ಸೃಷ್ಟಿಸಿದೆ. yuliyamnn ಎಂಬ ಇನ್ಸ್ಟಾಗ್ರಾಮ್ ಪೇಜ್‌ನಲ್ಲಿ ಈ ಬೆಕ್ಕಿನ ಹಲವು ವೀಡಿಯೋಗಳಿದ್ದು, ಬೆಕ್ಕು ಆಟವಾಡುವ ಬಾಗಿಲನ್ನು ತೆರೆಯುವ ಕುಳಿತು ಬಿಂದಾಸ್ ಆಗಿ ಕಾರ್ಟೂನ್ ನೋಡುವ ಹಲವು ವೀಡಿಯೋಗಳು ಈ ಖಾತೆಯಲ್ಲಿವೆ.
ಯೂಲಿಯ ಮಿನಿನ ಎಂಬ ಮಹಿಳೆ ಈ ವೀಡಿಯೋವನ್ನು ಪೋಸ್ಟ್ ಮಾಡಿದ್ದು, ಈ ಬೆಕ್ಕಿನ ಹೆಸರು ಕೆಫಿರ್, ಈ ಬೆಕ್ಕಿನ ಫೋಟೋಗಳನ್ನು ಯೂಲಿಯ ಆಗಾಗ ಪೋಸ್ಟ್ ಮಾಡುತ್ತಿದ್ದು, ಬೆಕ್ಕು ಎಷ್ಟು ಎತ್ತರ ಬೆಳೆದಿದೆ ಎಂಬುದು ವೀಡಿಯೋದಲ್ಲಿ ಕಾಣಿಸುತ್ತಿದೆ. ಯೂಲಿಯ ಅವರ 4 ವರ್ಷದ ಮಗಳು ಅನೇಚ್ಕಾಳಷ್ಟೇ ಉದ್ದ ಬೆಕ್ಕು ಕೆಫಿರ್ ಬೆಳೆದಿರುವುದು ಕಂಡು ಬಂದಿದೆ. ಇತ್ತೀಚೆಗೆ ವೈರಲ್ ಆಗಿರುವ ವೀಡಿಯೋದಲ್ಲಿ ಬೆಕ್ಕು ತನ್ನ ಹಿಂಗಾಲಿನ ಮೇಲೆ ನಿಂತು ಮುಂಗಾಲೆರಡನ್ನು ಮೇಜಿನ ಮೇಲೆ ಇರಿಸಿದೆ. ಪಕ್ಕದಲ್ಲೇ ಯೂಲಿಯ ಅವರ ಮಗಳು ಅನೇಚ್ಕಾ ನಿಂತಿದ್ದು, ಎತ್ತರದಲ್ಲೇ ಅವಳಷ್ಟೇ ಉದ್ದವಿದೆ ಈ ಬೆಕ್ಕು. ಹಾಗೆಯೇ ಮತ್ತೊಂದು ವೀಡಿಯೋದಲ್ಲಿ ಬೆಕ್ಕು ಹಿಂಗಾಲಿನ ಮೇಲೆ ನಿಂತು ಬಾಗಿಲನ್ನು ತೆರೆಯುವುದನ್ನು ಕಾಣಬಹುದಾಗಿದೆ. ಹಾಗೆಯೇ ಮತ್ತೊಂದು ವೀಡಿಯೋದಲ್ಲಿ ಬೆಕ್ಕು ಹಸಿರು ಲಾನ್‌ನಲ್ಲಿ ಆಟವಾಡುವ ವೀಡಿಯೋ ವೈರಲ್ ಆಗಿದೆ.
Viral Video: ಬೆಕ್ಕು – ಬಾತುಕೋಳಿ ಕಚ್ಚಾಟ ನೋಡಿ ಭಯವಾದ್ರೆ ಕಣ್ಮುಚ್ಚಿಕೊಳ್ಳಿ!
ಸ್ವೀಟ್ ಕಪಲ್ ಅನೇಚ್ಕಾ ಹಾಗೂ ಕೆಫಿರ್ ಇವರಿಗೆ ಯಾವತ್ತೂ ಬೋರ್ ಎಂಬುದಿಲ್ಲ ಎಂದು ಬರೆದು ವೀಡಿಯೋವನ್ನು ಪೋಸ್ಟ್ ಮಾಡಲಾಗಿದೆ. ಬೆಕ್ಕಿನ ಅಗಲವಾದ ಕಾಳು ಹಾಗೂ ಕುತ್ತಿಗೆ ನೋಡುಗರನ್ನು ಅಚ್ಚರಿಗೆ ದೂಡಿದೆ. ಈ ವೀಡಿಯೋ ನೋಡಿದ ಅನೇಕರು ಬೆಕ್ಕಿನ ಬಗ್ಗೆ ಹಲವು ಕಾಮೆಂಟ್‌ಗಳನ್ನು ಮಾಡಿದ್ದಾರೆ. ಕಫೀರ ಅನೇಚ್ಕಾಳಷ್ಟೇ ಉದ್ದ ಇದ್ದು, ಇವರನ್ನು ನೀವು ಜೋಡಿ ಎಂದು ಕರೆಯಬಹುದು ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ. ಓ ದೇವರೇ ನಾನಿದನ್ನು ಶ್ವಾನ ಎಂದು ಭಾವಿಸಿದೆ ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ. ಒಳ್ಳೆಯ ಸ್ನೇಹ ಎಷ್ಟೊಂದು ಮುದ್ದಾಗಿದ್ದಾರೆ ಇಬ್ಬರೂ ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ.
ಈ ಉದ್ದದ ಬೆಕ್ಕಿನ ಬಗ್ಗೆ ಮಾಲಕರು ವಿವರಣೆ ನೀಡಿದ್ದು, ಈ ಬೆಕ್ಕು ನೋಡುವುದಕ್ಕೆ ಮಾತ್ರ ಉದ್ದ ಬೆಳೆದಿಲ್ಲ, ಬುದ್ಧಿವಂತಿಕೆಯಲ್ಲೂ ಇದು ಸ್ಮಾರ್ಟ್ ಆಗಿದೆ. ಅಲ್ಲದೇ ಯಾವಾಗಲೂ ಶಾಂತವಾಗಿ ಇರುತ್ತದೆ,ತುಂಬಾ ಪ್ರೀತಿಯಿಂದ ತುಂಬಿದ ಬುದ್ಧಿವಂತ ಆತ ಎಂದು ತಮ್ಮ ಪ್ರೀತಿಯ ಬೆಕ್ಕಿನ ಬಗ್ಗೆ ಗುಣಗಾನ ಮಾಡಿದ್ದಾರೆ. maine coon ತಳಿಯ ಈ ಭಾರಿ ಗಾತ್ರದ ಬೆಕ್ಕುಗಳ ಮೂಲ ಅಮೆರಿಕಾ ಆಗಿದ್ದು, ಅಲ್ಲಿನ ಅತ್ಯಂತ ಹಳೆಯ ನೈಸರ್ಗಿಕ ತಳಿ ಎನಿಸಿದೆ.
ಬೆಕ್ಕಿಗೇನು ಸಿಟ್ಟಿತ್ತೋ ಏನೋ: ಕದ್ದು ಕುಳಿತು ಮಾಲೀಕನ ಕೆನ್ನೆಗೆ ಬಾರಿಸಿದ ಮರ್ಜಾಲ: ವೈರಲ್ ವೀಡಿಯೋ