ಪುಟಿನ್ ದಂಡು ದಾಳಿಗೆ ಬೆದರದ ಬೆಕ್ಕು ವಿಮಾನವೇರಿ ದೆಹಲಿಗೆ ಬಂತು ಬೆಕ್ಕಿನ ಪ್ರಯಾಣಕ್ಕೆ ಅನುಮತಿ ನಿರಾಕರಿಸಿದ ಏರ್‌ಲೈನ್ಸ್

ಮೈಸೂರು/ದೆಹಲಿ(ಮಾ.4): ಪುಟಿನ್ ದಂಡು ದಾಳಿಗೆ ಬೆದರದ ಉಕ್ರೇನ್‌ ಬೆಕ್ಕೊಂದು ವಿದ್ಯಾರ್ಥಿಗಳ ಜೊತೆ ವಿಮಾನ ಏರಿ ದೆಹಲಿಗೆ ಬಂದಿಳಿದಿದೆ. ಕಾರ್ಕಿವ್‌ನಿಂದ ಬಂದ ಮೈಸೂರು ಮೂಲದ ವಿದ್ಯಾರ್ಥಿನಿ ಜೊತೆ ಬೆಕ್ಕೊಂದು ಬಂದಿದ್ದು ಎಲ್ಲರ ಗಮನ ಸೆಳೆಯುತ್ತಿದೆ. ಉಕ್ರೇನ್‌ ಮೇಲೆ ರಷ್ಯಾ ಸಮರ 9ನೇ ದಿನವೂ ಮುಂದುವರೆದಿದ್ದು, ಉಕ್ರೇನ್‌ನಲ್ಲಿ ಸಿಲುಕಿರುವ ಅನೇಕ ಭಾರತೀಯ ವಿದ್ಯಾರ್ಥಿಗಳು ಸ್ಥಳಾಂತರ ಕಾರ್ಯ ಮುಂದುವರೆದಿದೆ. ಹೀಗೆ ಬಂದ ಕೆಲವು ವಿದ್ಯಾರ್ಥಿಗಳು ತಾವು ಅಲ್ಲಿ ತಮ್ಮ ಜೊತೆಗಿದ್ದ ಪ್ರಾಣಿಗಳನ್ನು ಕೂಡ ಜೊತೆಯಲ್ಲೇ ವಿಮಾನದಲ್ಲಿ ಕರೆ ತಂದಿದ್ದಾರೆ. ಎರಡು ದಿನದ ಹಿಂದಷ್ಟೇ ವಿದ್ಯಾರ್ಥಿಯೋರ್ವ ಶ್ವಾನದೊಂದಿಗೆ ಉಕ್ರೇನ್‌ನಿಂದ ಬಂದಿದ್ದ. ಕೇರಳದ ವಿದ್ಯಾರ್ಥಿನಿಯೊಬ್ಬಳು ಬೆಕ್ಕಿನೊಂದಿಗೆ ದೆಹಲಿಗೆ ಬಂದಿದ್ದು, ನಂತರ ಆಕೆಗೆ ದೆಹಲಿಯಿಂದ ಕೇರಳಕ್ಕೆ ಬೆಕ್ಕನ್ನು ಸಾಗಿಸಲು ಏರ್‌ಲೈನ್ಸ್ ನಿರಾಕರಿಸಿದೆ. 

ಈ ಮಧ್ಯೆ ಮೈಸೂರಿನ ವಿದ್ಯಾರ್ಥಿಯೊಬ್ಬಳು ಬೆಕ್ಕಿನೊಂದಿಗೆ ದೆಹಲಿಗೆ ಬಂದಿಳಿದಿದ್ದಾಳೆ. ಉಕ್ರೇನ್‌ನಲ್ಲಿ ನಾಲ್ಕನೇ ವರ್ಷದ ಮೆಡಿಕಲ್ ವ್ಯಾಸಂಗ ಮಾಡುತ್ತಿರುವ ಮೈಸೂರಿನ ಶರಣ್ಯ ಎಂಬಾಕೆಯೇ ಉಕ್ರೇನ್‌ನೊಂದಿಗೆ ಬೆಕ್ಕನ್ನು ಕೂಡ ಕರೆತಂದಾಕೆ. ಮಾರ್ಜಾಲ ಪ್ರಿಯೆ ಶರಣ್ಯ ಜೊತೆ ಅವರ ಪ್ರೀತಿಯ ಸಾಕುಬೆಕ್ಕು ಕ್ರಿಸ್ಲರ್ ಆಗಮಿಸಿದೆ. ಎರಡು ವರ್ಷ ಪ್ರಾಯದ ಈ ಬೆಕ್ಕು ನೋಡಲು ತುಂಬಾ ಮುದ್ದಾಗಿದೆ. ಪ್ರಸ್ತುತ ಶರಣ್ಯ ಕರ್ನಾಟಕದತ್ತ ಪ್ರಯಾಣ ಬೆಳೆಸಿದ್ದಾರೆ.

Russia Ukraine Crisis: ಪ್ರಾಣ ಉಳಿಸಿಕೊಳ್ಳುವ ಪಲಾಯನದಲ್ಲಿ ಪ್ರಾಣಿಗಳನ್ನು ಮರೆಯದ ಉಕ್ರೇನಿಯನ್ನರು

ನಿನ್ನೆ ಕೇರಳದ ಅಂಜುದಾಸ್‌ (Anju Das) ಎಂಬ ವಿದ್ಯಾರ್ಥಿನಿ, ಬೆಕ್ಕಿನೊಂದಿಗೆ ಉಕ್ರೇನ್‌ನಿಂದ ದೆಹಲಿಗೆ ಬಂದಿಳಿದಿದ್ದಳು. ಆದರೆ ದೆಹಲಿಯಿಂದ ಕೇರಳಕ್ಕೆ ತೆರಳುವ ಮುಂದಾದ ಆಕೆಗೆ ಶಾಕ್‌ ಆಗಿದೆ. ಏಕೆಂದರೆ ಪ್ರಾಣಿಗಳನ್ನು ವಿಮಾನದಲ್ಲಿ ಪ್ರಯಾಣಿಸಲು ಅವಕಾಶವಿಲ್ಲ ಎಂದು ಹೇಳಿ ಆಕೆಯ ಬೆಕ್ಕಿಗೆ ಏರ್‌ಲೈನ್ಸ್‌ವೊಂದು ಪ್ರಯಾಣಕ್ಕೆ ಅನುಮತಿ ನಿರಾಕರಿಸಿದೆ. ವಿಮಾನದಲ್ಲಿ ಸಾಕುಪ್ರಾಣಿಗಳ ಸಾಗಣೆಗೆ ಅವಕಾಶ ಇಲ್ಲ ಎಂದು ಏರ್‌ಲೈನ್ಸ್ ಹೇಳಿದೆ.

ತಮ್ಮ ಪ್ರೀತಿಯ ಸಾಕುಬೆಕ್ಕು ಲೋಕಿ(Locky) ಜೊತೆ ವಿದ್ಯಾರ್ಥಿನಿ ಅಂಜುದಾಸ್‌ (Anju Das) ಉಕ್ರೇನ್‌ನಿಂದ ಪ್ರಯಾಣ ಬೆಳೆಸಿದ್ದಳು. ಭಾರತಕ್ಕೆ ಬರುವ ಸಲುವಾಗಿ ರೊಮೇನಿಯನ್ ಗಡಿಯನ್ನು(Romanian border) ತಲುಪಲು ಇಬ್ಬರೂ ಬಹಳ ದೂರ ನಡೆದಿದ್ದರು. ಅಲ್ಲಿ ಅಂಜು ದಾಸ್ ಅವರು ಭಾರತೀಯ ರಾಯಭಾರಿ ಕಚೇರಿಯ (Indian Embassy) ಸಿಬ್ಬಂದಿಯನ್ನು ಭೇಟಿಯಾದರು, ಅವರು ಲಾಕಿಯನ್ನು ಭಾರತೀಯ ವಾಯುಪಡೆಯ ವಿಶೇಷ ವಿಮಾನದಲ್ಲಿ ಹತ್ತಲು ಅನುಮತಿಸಿದರು. ವಿಮಾನವು ಬುಧವಾರ ರಾತ್ರಿ ದೆಹಲಿ (Delhi) ತಲುಪಿತು.

ದೆಹಲಿ ತಲುಪಿದ ನಂತರ ಆಕೆಗೆ ನಿಜವಾದ ಸಮಸ್ಯೆ ಶುರುವಾಗಿದೆ. ಈಕೆ ಯುದ್ಧಪೀಡಿತ ಉಕ್ರೇನ್‌ನಲ್ಲಿ ತನ್ನ ಅತ್ಯುತ್ತಮ ಸಂಗಾತಿಯನ್ನು ಬಿಟ್ಟು ಬರುವುದನ್ನು ಯೋಚಿಸಲು ಸಾಧ್ಯವಿಲ್ಲ ಎಂದು ಹೇಳಿದರು. ಮತ್ತು ಅದನ್ನು ತನ್ನೊಂದಿಗೆ ತರಲು ನಿರ್ಧರಿಸಿದಳು. ಆದರೆ ಕಠಿಣ ಪರಿಸ್ಥಿತಿಯಲ್ಲೂ ಉಕ್ರೇನ್‌ನಿಂದ ಕರೆತಂದ ಈ ಬೆಕ್ಕಿಗೆ ಭಾರತದಲ್ಲಿ ವಿಮಾನದಲ್ಲಿ ಪ್ರಯಾಣಿಸಲು ಅನುಮತಿ ನಿರಾಕರಿಸಲಾಗಿದೆ. ವಿದ್ಯಾರ್ಥಿನಿ ಅಂಜುದಾಸ್‌ ಈ ಬೆಕ್ಕನ್ನು ಕೇರಳದ (Kerala) ಚೆಂಗನ್ನೂರಿನಲ್ಲಿರುವ (Chengannur) ತನ್ನ ಮನೆಗೆ ಕೊಂಡೊಯ್ಯಲು ಎಂದು ನಿರ್ಧರಿಸಿದ್ದಳು.

ಸಿಂಕ್‌ನ್ನೇ ಬಾತ್‌ಟಬ್‌ ಆಗಿಸಿಕೊಂಡ ಸ್ಮಾರ್ಟ್‌ ಬೆಕ್ಕು: ನಲ್ಲಿ ತಿರುಗಿಸಿ ಸ್ನಾನ... ವಿಡಿಯೋ

ಇತ್ತ ಏರ್‌ಲೈನ್ಸ್‌ ಅನುಮತಿ ನಿರಾಕರಿಸಿದ ವಿಚಾರವಾಗಿ ಮಾಧ್ಯಮಗಳೊಂದಿಗೆ ಮಾತನಾಡಿದ ಆಕೆ ಏರ್‌ಲೈನ್, ಆರಂಭದಲ್ಲಿ ಒಪ್ಪಿಕೊಂಡ ನಂತರ ನಾನು ಬೋರ್ಡಿಂಗ್ ಪಾಸ್ ಪಡೆದುಕೊಂಡೆ ಆದರೆ ನಂತರ ಅವರು ಅವಕಾಶ ನಿರಾಕರಿಸಿದರು. ಅಲ್ಲದೇ ಅವರು ನನ್ನ ಮಾತನ್ನು ಕೇಳುವ ಸ್ಥಿತಿಯಲ್ಲಿ ಇರಲಿಲ್ಲ. ಅವರು ಸಾಕುಪ್ರಾಣಿಗಳನ್ನು ವಿಮಾನದಲ್ಲಿ ಸಾಗಿಸಲು ಅನುಮತಿ ಇಲ್ಲ ಎಂದು ಮಾತ್ರ ಹೇಳುತ್ತಿದ್ದರು. ನಂತರ ನಾನು ವಿಮಾನದಿಂದ ಹೊರಗುಳಿಯಲು ನಿರ್ಧರಿಸಿದೆ. ನಾನು ಉಕ್ರೇನ್‌ನಿಂದ ನನ್ನ ಬೆಕ್ಕನ್ನು ಸಾಕಷ್ಟು ಕಷ್ಟಗಳೊಂದಿಗೆ ತರಲು ಸಾಧ್ಯವಾಗಿದೆ ಎಂದ ಮೇಲೆ ನಾನು ಅದನ್ನು ನನ್ನ ಮನೆಗೆ ಕರೆದುಕೊಂಡು ಹೋಗಲು ನನಗೆ ಸಾಧ್ಯವಾಗಬಹುದು ಎಂದು ಆಕೆ ಹೇಳಿದಳು. 
"