Asianet Suvarna News Asianet Suvarna News

ಜಾತಿ ಗಣತಿ, ಶೇ.50ರ ಮೀಸಲು ಮಿತಿ ತೆರವಿಗೆ ಆಗ್ರಹ: ಕೇಂದ್ರಕ್ಕೆ ವಿಪಕ್ಷ ನಾಯಕರ ಒತ್ತಾಯ

ದೇಶದಲ್ಲಿ ಜಾತಿ ಆಧಾರಿತ ಗಣತಿ ನಡೆಸಬೇಕು ಮತ್ತು ಮೀಸಲಾತಿಗೆ ಹೇರಲಾಗಿರುವ ಶೇ.50ರಷ್ಟು ಮಿತಿಯನ್ನು ತೆಗೆದು ಹಾಕಬೇಕು. ಅಲ್ಲದೇ ದಲಿತರು ಮತ್ತು ಹಿಂದುಳಿದ ವರ್ಗಗಳಿಗೆ ಜನಸಂಖ್ಯೆಯ ಆಧಾರದಲ್ಲಿ ಮೀಸಲಾತಿ ನೀಡಬೇಕು ಎಂದು ವಿಪಕ್ಷ ನಾಯಕರು ಸೋಮವಾರ ಕೇಂದ್ರ ಸರ್ಕಾರಕ್ಕೆ ಆಗ್ರಹಿಸಿದ್ದಾರೆ.

Caste census, Opposition leaders demand for removal of 50 percent reservation limit  urges to Centre akb
Author
First Published Apr 18, 2023, 9:15 AM IST | Last Updated Apr 18, 2023, 9:15 AM IST

ನವದೆಹಲಿ: ದೇಶದಲ್ಲಿ ಜಾತಿ ಆಧಾರಿತ ಗಣತಿ ನಡೆಸಬೇಕು ಮತ್ತು ಮೀಸಲಾತಿಗೆ ಹೇರಲಾಗಿರುವ ಶೇ.50ರಷ್ಟು ಮಿತಿಯನ್ನು ತೆಗೆದು ಹಾಕಬೇಕು. ಅಲ್ಲದೇ ದಲಿತರು ಮತ್ತು ಹಿಂದುಳಿದ ವರ್ಗಗಳಿಗೆ ಜನಸಂಖ್ಯೆಯ ಆಧಾರದಲ್ಲಿ ಮೀಸಲಾತಿ ನೀಡಬೇಕು ಎಂದು ವಿಪಕ್ಷ ನಾಯಕರು ಸೋಮವಾರ ಕೇಂದ್ರ ಸರ್ಕಾರಕ್ಕೆ ಆಗ್ರಹಿಸಿದ್ದಾರೆ.

ಹಿಂದುಳಿದವರಿಗೆ ಆರ್ಥಿಕ ಮತ್ತು ರಾಜಕೀಯ ಶಕ್ತಿಯ ಅಗತ್ಯವಿದೆಯೇ ಹೊರತು ಖಾಲಿ ಮಾತುಗಳಲ್ಲ ಎಂದು ಹೇಳಿರುವ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ, ‘2011ರ ಜನಗಣತಿಯ ಅಂಕಿಅಂಶಗಳನ್ನು ಬಹಿರಂಗಗೊಳಿಸಿ. ದೇಶದಲ್ಲಿ ಎಷ್ಟುಮಂದಿ ಹಿಂದುಳಿದ ವರ್ಗದವರಿದ್ದಾರೆ ಎಂಬುದನ್ನು ತಿಳಿಸಿ. ಮೀಸಲಾತಿ ಕೋಟಾದಲ್ಲಿರುವ ಶೇ.50ರಷ್ಟುಮಿತಿಯನ್ನು ತೆಗೆದುಹಾಕಿ ಮತ್ತು ದಲಿತರು ಹಾಗೂ ಹಿಂದುಳಿದ ವರ್ಗಗಳಿಗೆ ಅವರ ಜನಸಂಖ್ಯೆಯ ಆಧಾರದ ಮೇಲೆ ಮೀಸಲಾತಿ ನೀಡಿ’ ಎಂದು ಒತ್ತಾಯಿಸಿದ್ದಾರೆ. ಹಾಗೆಯೇ ನವೀಕೃತ ಜಾತಿಗಣತಿಗೆ ಒತ್ತಾಯಿಸಿ ಕಾಂಗ್ರೆಸ್‌ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಪ್ರಧಾನಿ ಮೋದಿ ಅವರಿಗೆ ಪತ್ರ ಬರೆದಿದ್ದಾರೆ.

ಕಾಂಗ್ರೆಸ್‌ ಜೊತೆಗೆ ಜೆಡಿಯು (JDU), ಆರ್‌ಜೆಡಿ (RJD), ಸಮಾಜವಾದಿ ಪಕ್ಷ, ಬಹುಜನ ಸಮಾಜ ಪಕ್ಷಗಳ ನಾಯಕರು ಸಹ ಜಾತಿ ಗಣತಿಗೆ ಒತ್ತಾಯಿಸಿದ್ದಾರೆ. ಅಲ್ಲದೇ ಈ ಮೊದಲು ತಮಿಳುನಾಡು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್‌ (MK Stalin) ಸಹ ಇದಕ್ಕೆ ಬೆಂಬಲ ವ್ಯಕ್ತಪಡಿಸಿದ್ದರು.

ತಾಕತ್ತಿದ್ದರೆ ಒಳ ಮೀಸಲಾತಿ ತೆಗೆಯಲಿ: ಕಾಂಗ್ರೆಸ್‌ಗೆ ಬಿಜೆಪಿ ಸಂಸದ ಎಸ್‌.ಮುನಿಸ್ವಾಮಿ ಸವಾಲು

ನಿಮಗೆ ಮೀಸಲಾತಿ ಕೊಡುವವರು ಬೇಕೋ; ತೆಗೆಯುವವರು ಬೇಕೋ?: ಜೋಶಿ ಪ್ರಶ್ನೆ

Latest Videos
Follow Us:
Download App:
  • android
  • ios