ಸಂಸದೆ ಮಹುವಾ ಮೊಯಿತ್ರಾ ಲೋಕಸಭೆ ಸದಸ್ಯತ್ವ ರದ್ದು, ಶಿಸ್ತು ಸಮಿತಿ ಶಿಫಾರಸು ಅಂಗೀಕಾರ!
ಟಿಎಂಸಿ ಸಂಸದೆ ಮಹುವಾ ಮೊಯಿತ್ರಾ ಲೋಕಸಭೆ ಸದಸ್ಯತ್ವ ರದ್ದಾಗಿದೆ. ಶಿಸ್ತು ಸಮಿತಿ ಮಾಡಿದ ಶಿಫಾರಸನ್ನು ಲೋಕಸಭೆ ಬಹುಮತದಿಂದ ಅಂಗೀಕರಿಸಿದೆ. ಇದರ ಬೆನ್ನಲ್ಲೇ ಮಹುವಾ ಮೊಯಿತ್ರಾ ಕೇಂದ್ರ ಬಿಜೆಪಿ ಸರ್ಕಾರಕ್ಕೆ ನಿಮ್ಮ ಅಂತ್ಯ ಇಲ್ಲಿಂದ ಆರಂಭ ಎಂಬ ಎಚ್ಚರಿಕೆ ನೀಡಿದ್ದಾರೆ
ನವದೆಹಲಿ(ಡಿ.08)ಟಿಎಂಸಿ ಸಂಸದೆ ಮಹುವಾ ಮೊಯಿತ್ರಾ ಅವರ 17ನೇ ಲೋಕಸಭೆ ಸದಸ್ಯತ್ವ ರದ್ದಾಗಿದೆ. ಲೋಕಸಭೆ ಶಿಸ್ತು ಸಮಿತಿ ವರದಿಯ ಶಿಫಾಸರನ್ನು ಲೋಕಸಭೆ ಬಹುಮತದಿಂದ ಅಂಗೀಕರಿಸಿದೆ. ವಿಪಕ್ಷಗಳ ತೀವ್ರ ಗದ್ದಲ ಹಾಗೂ ಪ್ರತಿಭಟನೆ ನಡುವೆಯೂ ಇದೀಗ ಮೊಯಿತ್ರಾ ಸದಸ್ಯತ್ವ ಕಳೆದುಕೊಂಡಿದ್ದಾರೆ. ಹೀರಾನಂದನಿ ಕಂಪನಿ ಮುಖ್ಯಸ್ಥ, ಉದ್ಯಮಿ ದರ್ಶನ್ ಹೀರಾನಂದನಿಗೆ ಲೋಕಸಭೆಯ ಲಾಗಿನ್ ವಿವರ ನೀಡಿದ ಕಾರಣಕ್ಕೆ ಮಹುವಾ ಮೊಯಿತ್ರಾ ಲೋಕಸಭೆ ಸದಸ್ಯತ್ವ ರದ್ದಾಗಿದೆ.
ಕೇಂದ್ರ ಬಿಜೆಪಿ ಹಾಗೂ ಪ್ರಧಾನಿ ಮೋದಿ ವಿರುದ್ಧ ಆಕ್ರಮಣಕಾರಿ ಭಾಷಣ ಮಾಡುತ್ತಿದ್ದ ಮಹುವಾ ಮೊಯತ್ರಾ ಪ್ರಶ್ನೆಗಾಗಿ ಲಂಚ ಪಡೆದ ಗಂಭೀರ ಆರೋಪ ಎದುರಿಸಿದ್ದರು. ಹಣ, ಇತರ ಸೌಕರ್ಯಗಳನ್ನು ಪಡೆದು ಮೊಹುವಾ ಮೊಯಿತ್ರಾ ಲೋಕಸಭೆಯಲ್ಲಿ ಪ್ರಶ್ನೆ ಕೇಳುತ್ತಿದ್ದಾರೆ ಅನ್ನೋ ಗಂಭೀರ ಆರೋಪವನ್ನು ಬಿಜೆಪಿ ಸಂಸದ ನಿಶಿಕಾಂತ್ ದುಬೆ ಮಾಡಿದ್ದರು. ಈ ಕುರಿತು ವಿಚಾರಣೆ ನಡೆಸಲು ಲೋಕಸಭಾ ಸಭಾಪತಿ 6 ಸದಸ್ಯರ ಸಮಿತಿ ನೇಮಕ ಮಾಡಿತ್ತು. ಈ ಸಮಿತಿ ವಿಚಾರಣೆ ನಡೆಸಿ ವರದಿ ಸಲ್ಲಿಸಿತ್ತು. ಈ ವರದಿಯನ್ನು ಇಂದು ಸಂಸದ ವಿನೋದ್ ಕುಮಾರ್ ಸೋನ್‌ಕರ್ ಲೋಕಸಭೆಯಲ್ಲಿ ಮಂಡಿಸಿದ್ದರು.
ಟಿಎಂಸಿ ಸಂಸದೆ ಮಹುವಾ ಮೊಯಿತ್ರಾಗೆ ಹೆಚ್ಚಿದ ಸಂಕಷ್ಟ, ಉಚ್ಚಾಟನೆಗೆ ನೈತಿಕ ಸಮಿತಿ ಶಿಫಾರಸು!
ಈ ವರದಿ ಮಂಡನೆ ವೇಳೆ ತೀವ್ರ ಗದ್ದಲ ಏರ್ಪಟ್ಟಿತ್ತು. ಹೀಗಾಗಿ 2 ಗಂಟೆ ಕಾಲ ಸದನ ಮುಂದೂಡಲಾಗಿತ್ತು. ಮತ್ತೆ ಕಲಾಪ ಆರಂಭಗೊಳ್ಳುತ್ತಿದ್ದಂತೆ ಗದ್ದಲ ಆರಂಭಗೊಂಡಿತು. ಚರ್ಚೆಗೆ ಅವಕಾಶ ನೀಡಲಾಗಿತ್ತು. ಕಾಂಗ್ರೆಸ್ ಸಂಸದ ಮನೀಶ್ ತಿವಾರಿ, ಟಿಎಂಸಿ ಸಂಸದ ಕಲ್ಯಾಣ್ ಬ್ಯಾನರ್ಜಿ, ಸುದೀಪ್ ಬಂಡೋಪಾದ್ಯಾಯ್, ಜೆಡಿಯು ಸಂಸದ ಗಿರಿಧರಿ ಯಾದವ್ ಸೇರಿದಂತೆ ವಿಪಕ್ಷಗಳ ಸದಸ್ಯರು ಸಮಿತಿ ಶಿಫಾರಸನ್ನು ವಿರೋಧಿಸಿದ್ದಾರೆ. ಬಿಜೆಪಿ ನಾಯಕರು ಸಮಿತಿ ಶಿಫಾರಸನ್ನು ಬೆಂಬಲಿಸಿದ್ದಾರೆ.
ಲೋಕಸಭೆಯಲ್ಲಿ ಬಹುಮತದ ಮೂಲಕ ಲೋಕಸಭೆ ಶಿಸ್ತು ಸಮಿತಿ ಮಾಡಿದ ಶಿಫಾರಸನ್ನು ಲೋಕಸಭೆ ಅಂಗೀಕರಿಸಿತು. ಈ ಕುರಿತು ಖುದ್ದ ಮೊಹುವ ಮೊಯಿತ್ರಾ ಪ್ರತಿಕ್ರಿಯೆ ನೀಡಿದ್ದಾರೆ. ಸೂಕ್ತ ತನಿಖೆ ನಡೆಸಿಲ್ಲ, ಪಕ್ಷಪಾತದ ನಿರ್ಣಯ ತೆಗೆದುಕೊಳ್ಳಲಾಗಿದೆ. ನನ್ನ ವಿರುದ್ಧ ಪ್ರಶ್ನೆಗಾಗಿ ಲಂಚ ಸ್ವೀಕರಿಸಿದ ಯಾವುದೇ ದಾಖಲೆ ಇಲ್ಲದೆ ಕ್ರಮ ಕೈಗೊಳ್ಳಲಾಗಿದೆ. ಇದು ಮೋದಿ ಸರ್ಕಾರದ ಅವನತಿಗೆ ಕಾರಣವಾಗಲಿದೆ ಎಂದು ಎಚ್ಚರಿಸಿದ್ದಾರೆ.
ಇದು ಬಿಜೆಪಿಯ ಅಂತ್ಯದ ಆರಂಭ, ಲೋಕಸಭೆಯ ಹೊರಗೆ ಗುಡುಗಿದ ಮಹುವಾ ಮೊಯಿತ್ರಾ!
ಶಿಸ್ತು ಸಮಿತಿ ಸಲ್ಲಿಸಿದ ವರದಿಯಲ್ಲಿ ಮಹುವಾ ಮೊಯಿತ್ರಾ ಲೋಕಸಭೆ ಸದಸ್ಯರ ಪೋರ್ಟಲ್‌ನ ಲಾಗಿನ್ ಐಡಿ,ಪಾಸ್‌ವರ್ಡ್ ಸೇರಿದಂತೆ ಕೆಲ ಮಹತ್ವದ ಮಾಹಿತಿಗಳನ್ನು ಅಧಿಕೃತವಲ್ಲದ ವ್ಯಕ್ತಿಗಳ ಜೊತೆಗೆ ಹಂಚಿಕೊಂಡಿದ್ದಾರೆ. ಇದು ಅನೈತಿಕ ನಡವಳಿೆ ಹಾಗೂ ಅಸಂವಿಧಾನಿಕವಾಗಿದೆ. ರಾಷ್ಟ್ರೀಯ ಭದ್ರತೆಗೆ ಸವಾಲೆಸೆದಿದ್ದಾರೆ. ಮೊಯಿತ್ರಾ ಈ ಕೃತ್ಯ ಗಂಭೀರವಾದದ್ದು, ಹೀಗಾಗಿ ಶಿಕ್ಷೆಗೆ ಗುರಿಪಡಿಸಬಹದು. ಇದೇ ವೇಳೆ ಮೊಹುವಾ ಅವರನ್ನು 17ನೇ ಲೋಕಸಭೆಯ ಸದಸ್ಯತ್ವದಿಂದ ಉಚ್ಚಾಟಿಸಬಹುದು ಎಂದು ಶಿಫಾಸರು ಮಾಡಿತ್ತು.