Asianet Suvarna News Asianet Suvarna News

‘ಚಳಿಗಾಲ ರಜೇಲಿ ನಿನ್ನ ಮಿಸ್‌ ಮಾಡಿಕೊಳ್ತೇನೆ’ ಎಂದು 8ನೇ ತರಗತಿ ವಿದ್ಯಾರ್ಥಿನಿಗೆ ಲವ್‌ ಲೆಟರ್‌ ಬರೆದ ಶಿಕ್ಷಕ..!

ಶಿಕ್ಷಕನು ತಾನು ಅವಳನ್ನು ತುಂಬಾ ಪ್ರೀತಿಸುತ್ತೇನೆ ಮತ್ತು ಚಳಿಗಾಲದ ರಜೆಯಲ್ಲಿ ಅವಳನ್ನು ಮಿಸ್‌ ಮಾಡಿಕೊಳ್ಳುತ್ತೇನೆ ಎಂದು ಬರೆದಿದ್ದಾರೆ. ಅಲ್ಲದೆ, ತನಗೆ ಸಾಧ್ಯವಾದಾಗ ತನಗೆ ಕರೆ ಮಾಡುವಂತೆಯೂ ಪತ್ರದಲ್ಲಿ ತಿಳಿಸಿದ್ದಾರೆ ಎಂದು ವರದಿಯಾಗಿದೆ.

case against uttar pradesh teacher for writing love letter to class 8 student cops ash
Author
First Published Jan 7, 2023, 10:13 PM IST

ಉತ್ತರ ಪ್ರದೇಶದ (Uttar Pradesh) ಕನೌಜ್‌ (Kannauj) ಜಿಲ್ಲೆಯ ಬಳ್ಳಾರ್‌ಪುರದ ಸರ್ಕಾರಿ ಶಾಲೆಯ ಶಿಕ್ಷಕರೊಬ್ಬರು (Government School Teacher) 8 ನೇ ತರಗತಿಯ ವಿದ್ಯಾರ್ಥಿನಿಯೊಬ್ಬಳಿಗೆ (Student) ಪ್ರೇಮ ಪತ್ರವನ್ನು (Love Letter) ನೀಡಿರುವ ಆಘಾತಕಾರಿ ಘಟನೆ ನಡೆದಿದೆ. ಮತ್ತು ಈ ಪತ್ರದ ಬಗ್ಗೆ ಯಾರಿಗೂ ಹೇಳಬೇಡಿ ಎಂದು ಶಿಕ್ಷಕರು ಹೇಳಿದ್ದಾರೆಂದು ಆರೋಪಿಸಲಾಗಿದೆ. ಅಪ್ರಾಪ್ತ (Minor) ವಿದ್ಯಾರ್ಥಿನಿಗೆ ಡಿಸೆಂಬರ್ 30, 2022 ರಂದು ಶಾಲೆಯ ಚಳಿಗಾಲದ ರಜೆಯ ಮೊದಲು ಶಿಕ್ಷಕರು ಲವ್‌ ಲೆಟರ್‌ ನೀಡಿದ್ದಾರೆ ಎಂದು ಹೇಳಲಾಗಿದೆ. ಇನ್ನು, ಸೋಷಿಯಲ್ ಮೀಡಿಯಾ (Social Media) ಪ್ಲಾಟ್‌ಫಾರ್ಮ್‌ಗಳಲ್ಲಿ ವೈರಲ್ (Viral) ಆಗುತ್ತಿರುವ ಪತ್ರದಲ್ಲಿ, ಶಿಕ್ಷಕನು ತಾನು ಅವಳನ್ನು ತುಂಬಾ ಪ್ರೀತಿಸುತ್ತೇನೆ ಮತ್ತು ಚಳಿಗಾಲದ ರಜೆಯಲ್ಲಿ ಅವಳನ್ನು ಮಿಸ್‌ ಮಾಡಿಕೊಳ್ಳುತ್ತೇನೆ ಎಂದು ಬರೆದಿದ್ದಾರೆ ಎಂದು ಹೇಳಲಾಗಿದೆ. ಅಲ್ಲದೆ, ತನಗೆ ಸಾಧ್ಯವಾದಾಗ ತನಗೆ ಕರೆ ಮಾಡುವಂತೆಯೂ ಪತ್ರದಲ್ಲಿ ತಿಳಿಸಿದ್ದಾರೆ ಎಂದು ವರದಿಯಾಗಿದೆ.

ಈ ಘಟನೆ ಸಂಬಂಧ 47 ವರ್ಷದ ಶಿಕ್ಷಕನ ಮೇಲೆ ಕಿರುಕುಳ ಮತ್ತು ಬೆದರಿಕೆಯ ಆರೋಪದ ಮೇಲೆ ಕುಟುಂಬದವರು ಸದರ್ ಕೊತ್ವಾಲಿ ಪೊಲೀಸರಿಗೆ ದೂರು ನೀಡಿದ್ದಾರೆ ಎಂದು ವರದಿಯಾಗಿದೆ. ಈ ಕುರಿತು ಮಾತನಾಡಿದ ಕನೌಜ್ ಎಸ್ಪಿ ಕುನ್ವರ್ ಅನುಪಮ್ ಸಿಂಗ್, ಪೊಲೀಸರು ಪ್ರಕರಣದ ತನಿಖೆ ನಡೆಸುತ್ತಿದ್ದಾರೆ ಮತ್ತು ರಾಜ್ಯ ಶಿಕ್ಷಣ ಇಲಾಖೆಯು ವಿಚಾರಣೆ ನಡೆಸಿ ವರದಿಯನ್ನು ಪೊಲೀಸರೊಂದಿಗೆ ಹಂಚಿಕೊಳ್ಳಲು ಕೇಳಿದೆ ಎಂದೂ ಹೇಳಿದ್ದಾರೆ. 

ಇದನ್ನು ಓದಿ: Chamarajanagara: ದೇವರೇ ನನ್ನ ಮೂರ್ತಿಯೇ ನನ್ನ ಕುತ್ತಿಗೆಗೆ ತಾಳಿ ಕಟ್ಟಲಿ: ದೇವರ ಹುಂಡಿಯಲ್ಲಿ ವಿಚಿತ್ರ ಹರಕೆ ಪತ್ರ

ಇನ್ನು, ಈ ಪತ್ರದಲ್ಲಿನ ಕೈಬರಹವನ್ನು ಶಿಕ್ಷಕರ ಕೈಬರಹದೊಂದಿಗೆ ಮ್ಯಾಚ್‌ ಮಾಡಲು ನಾವು ಪೊಲೀಸರಿಗೆ ವಿನಂತಿಸಿದ್ದೇವೆ ಎಂದು ಮೂಲ ಶಿಕ್ಷಣ ಅಧಿಕಾರಿ ಕೌಸ್ತುಭ್ ಸಿಂಗ್ ಉಲ್ಲೇಖಿಸಿದ್ದಾರೆ. ತಪ್ಪಿತಸ್ಥರೆಂದು ಕಂಡುಬಂದಲ್ಲಿ ಶಿಕ್ಷಕರ ವಿರುದ್ಧ ಕಠಿಣ ಕ್ರಮ ಜರುಗಿಸಲಾಗುವುದು ಎಂದೂ ಅವರು ಹೇಳಿದ್ದರು.

 ಇನ್ನೊಂದೆಡೆ, 8ನೇ ತರಗತಿಯ ವಿದ್ಯಾರ್ಥಿನಿಯೊಬ್ಬಳಿಗೆ ಪ್ರೇಮ ಪತ್ರ ಬರೆದಿದ್ದಕ್ಕಾಗಿ ಆರೋಪಿ ಶಿಕ್ಷಕನನ್ನು ಅಮಾನತುಗೊಳಿಸಲಾಗಿದ್ದು, ಪ್ರಕರಣ ದಾಖಲಿಸಲಾಗಿದೆ ಎಂದೂ ಪೊಲೀಸರು ಶನಿವಾರ ತಿಳಿಸಿದ್ದಾರೆ. ಬಾಲಕಿಯ ತಂದೆ ನೀಡಿದ ದೂರಿನ ಮೇರೆಗೆ ಶುಕ್ರವಾರ ಶಿಕ್ಷಕ ಹರಿಓಂ ಸಿಂಗ್ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ ಎಂದು ಪೊಲೀಸ್ ವರಿಷ್ಠಾಧಿಕಾರಿ (ಎಸ್‌ಪಿ) ಕುನ್ವರ್ ಅನುಪಮ್ ಸಿಂಗ್ ತಿಳಿಸಿದ್ದಾರೆ. ಡಿಸೆಂಬರ್ 30 ರಂದು 8 ನೇ ತರಗತಿಯ ವಿದ್ಯಾರ್ಥಿನಿಯೊಬ್ಬರಿಗೆ ಲವ್‌ ಲೆಟರ್‌ ನೀಡಿದ ಆರೋಪವನ್ನು ಹರಿಓಂ ಸಿಂಗ್ ಅವರು ಎದುರಿಸುತ್ತಿದ್ದಾರೆ.

ಇದನ್ನೂ ಓದಿ: ವಿದ್ಯಾರ್ಥಿನಿಗೆ ಲವ್  ಲೆಟರ್ ಬರೆದ ಶಿಕ್ಷಕ, ರೊಚ್ಚಿಗೆದ್ದ ಗ್ರಾಮಸ್ಥರು ಮಾಡಿದ ಕೆಲಸ

ವಿದ್ಯಾರ್ಥಿಯು ಮನೆಗೆ ತಲುಪಿದಾಗ, ಕಾರ್ಡ್‌ನಲ್ಲಿ 12 ಸಾಲುಗಳ ಕೈಬರಹದ ಪತ್ರವನ್ನು ನೋಡಿದ್ದು, ತನ್ನ ಮೇಲೆ ಶಿಕ್ಷಕ ಪ್ರೀತಿಯ ನಿವೇದನೆ ಮಾಡಿರುವುದನ್ನು ವಿದ್ಯಾರ್ಥಿನಿ ಕಂಡುಕೊಂಡಿದ್ದಾಳೆ. ಈ ವಿಷಯ ಬೆಳಕಿಗೆ ಬರುತ್ತಿದ್ದಂತೆ ಜಿಲ್ಲಾ ಮೂಲ ಶಿಕ್ಷಣ ಅಧಿಕಾರಿ ಕೌಸ್ತುಭ್ ಸಿಂಗ್ ಶಿಕ್ಷಕನನ್ನು ಅಮಾನತುಗೊಳಿಸಿದ್ದಾರೆ ಎಂದು ಎಸ್‌ಪಿ ತಿಳಿಸಿದ್ದಾರೆ. ಅಲ್ಲದೆ, ಈ ಪ್ರಕರಣದ ತನಿಖೆಯನ್ನು ಬ್ಲಾಕ್ ಶಿಕ್ಷಣಾಧಿಕಾರಿ ವಿಪಿನ್ ಕುಮಾರ್ ಅವರಿಗೆ ವಹಿಸಲಾಗಿದೆ ಎಂದೂ ತಿಳಿದುಬಂದಿದೆ. 

ಇದನ್ನೂ ಓದಿ: 16ರ ಬಾಲಕಿಗೆ ಲವ್ ‌ಲೆಟರ್‌ ಕೊಟ್ಟ 66ರ ವೃದ್ಧ ಅರೆಸ್ಟ್‌!

Follow Us:
Download App:
  • android
  • ios