ಬಿಜೆಪಿ ಮತ ಹಾಕೋರು ರಾಕ್ಷಸರು: ಸುರ್ಜೇವಾಲಾ ಹೇಳಿಕೆ ವಿರುದ್ಧ ಕೇಸ್
ಹರಾರಯಣದಲ್ಲಿ ಭಾಷಣ ಮಾಡುವಾಗ ರಣದೀಪ್ ಸುರ್ಜೇವಾಲಾ ನೀಡಿದ ವಿವಾದಾತ್ಮಕ ಹೇಳಿಕೆ ಆಕ್ಷೇಪಾರ್ಹ ಮತ್ತು ಸ್ವೀಕಾರಾರ್ಹವಲ್ಲದ ಹೇಳಿಕೆಯಾಗಿದೆ. ಈ ಬಗ್ಗೆ ತನಿಖೆ ನಡೆಸಬೇಕು ಹಾಗೂ ಸುರ್ಜೇವಾಲಾ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು’ ಎಂದು ಪೊಲೀಸರಲ್ಲಿ ದೂರು ದಾಖಲಿಸಿದ್ದ ದೂರುದಾರ ಸಂಜಯ್ ಗುಪ್ತಾ
ನವದೆಹಲಿ(ಆ.19): ಬಿಜೆಪಿ ಮತ್ತು ಬಿಜೆಪಿಗೆ ಮತ ಹಾಕುವವರು ರಾಕ್ಷಸರು ಎಂದು ಹೇಳಿಕೆ ನೀಡಿದ್ದಕ್ಕೆ ಕಾಂಗ್ರೆಸ್ ನಾಯಕ ರಣದೀಪ್ ಸುರ್ಜೇವಾಲಾ ವಿರುದ್ಧ ದೆಹಲಿಯ ರೋಹಿಣಿ ಪೊಲೀಸ್ ಠಾಣೆಯಲ್ಲಿ ವ್ಯಕ್ತಿಯೊಬ್ಬರು ದೂರು ದಾಖಲಿಸಿದ್ದಾರೆ.
ದೂರುದಾರ ಸಂಜಯ್ ಗುಪ್ತಾ ಅವರು ‘ಹರಾರಯಣದಲ್ಲಿ ಭಾಷಣ ಮಾಡುವಾಗ ರಣದೀಪ್ ಸುರ್ಜೇವಾಲಾ ನೀಡಿದ ವಿವಾದಾತ್ಮಕ ಹೇಳಿಕೆ ಆಕ್ಷೇಪಾರ್ಹ ಮತ್ತು ಸ್ವೀಕಾರಾರ್ಹವಲ್ಲದ ಹೇಳಿಕೆಯಾಗಿದೆ. ಈ ಬಗ್ಗೆ ತನಿಖೆ ನಡೆಸಬೇಕು ಹಾಗೂ ಸುರ್ಜೇವಾಲಾ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು’ ಎಂದು ಪೊಲೀಸರಲ್ಲಿ ದೂರು ದಾಖಲಿಸಿದ್ದಾರೆ. ಈ ಪ್ರಕರಣದಲ್ಲಿ ಪೊಲೀಸರು ಇನ್ನಷ್ಟೇ ಎಫ್‌ಐಆರ್ ದಾಖಲಿಸಬೇಕಿದೆ.
ಸಚಿವರಿಗೆ ಸುರ್ಜೇವಾಲಾ ಟಾಸ್ಕ್: ಪಕ್ಷದ ಅಭ್ಯರ್ಥಿಗೆ ಸೋಲಾದ್ರೆ ಸಚಿವ ಸ್ಥಾನಕ್ಕೆ ಕುತ್ತು ಬರುತ್ತಾ?
ಹರಾರಯಣದಲ್ಲಿ ಸಾರ್ವಜನಿಕ ಭಾಷಣ ಮಾಡುತ್ತಿದ್ದ ವೇಳೆ ಸುರ್ಜೇವಾಲಾ ‘ಬಿಜೆಪಿಯನ್ನು ಬೆಂಬಲಿಸುವವರಿಗೆ ರಾಕ್ಷಸ ಸ್ವಭಾವವಿದೆ. ಮಹಾಭಾರತದ ಭೂಮಿಯಿಂದ ನಾನು ಅವರನ್ನು ಶಪಿಸುತ್ತೇನೆ. ಬಿಜೆಪಿ ಮತ್ತು ಅದಕ್ಕೆ ಮತ ಹಾಕುವವರು ರಾಕ್ಷಸರು’ ಎಂದಿದ್ದರು. ಈ ಹೇಳಿಕೆ ವಿರುದ್ಧ ಬಿಜೆಪಿ ಭಾರೀ ಆಕ್ರೋಶ ಹೊರಹಾಕಿತ್ತು.