14 ಸಾವಿರ ಅಡಿ ಎತ್ತರದ ಲಡಾಖ್ ಗಡಿಯಲ್ಲಿ ಮೊಳಗಿದ ಜೈ ಹಿಂದ್ ಘೋಷಣೆ!
ಲಡಾಖ್ ಗಡಿಯಲ್ಲಿ ಮೊಳಗಿದ ಭಾರತ್ ಮಾತಾ ಕೀ ಜೈ ಹಾಗೂ ಜೈ ಹಿಂದ್ ಘೋಷಣೆ| ITBP ಯೋಧರಿಂದ ಸ್ವಾತಂತ್ರ್ಯ ದಿನಾಚರಣೆ| ಲಡಾಖ್ ಗಡಿಯಲ್ಲಿ ಚೀನಾದ ಗಡಿ ಕ್ಯಾತೆಗೆ ದಿಟ್ಟ ಉತ್ತರ ನೀಡಿರುವ ಭಾರತೀಯ ಸೇನೆ
ಲಡಾಖ್(ಆ.15): ಕೊರೋನಾತಂಕ ನಡುವೆಯೂ ದೇಶಾದ್ಯಂತ 74ನೇ ಸ್ವಾತಂತ್ರ್ಯ ದಿನಾಚರಣೆ ಆಚರಿಸಲಾಗಿದೆ. ಪ್ರಧಾನಿ ಮೋದಿ ದೆಹಲಿಯ ಕೆಂಪು ಕೋಟೆಯಲ್ಲಿ ಧ್ವಜಾರೋಹಣ ನೆರವೇರಿಸಿ ದೇಶವನ್ನುದ್ದೇಶಿಸಿ ಭಾಷಣ ಮಾಡಿದ್ದಾರೆ, ಈ ವೇಳೆ ಕಾಲು ಕರೆದು ಜಗಳಕ್ಕೆ ನಿಂತ ಚೀನಾಗೂ ಗುದ್ದು ನೀಡಿದ್ದಾರೆ. ಇನ್ನು ಲಡಾಖ್ ಗಡಿ ರಕ್ಷಣೆಯಲ್ಲಿ ತೊಡಗಿರುವ ಐಟಿಬಿಪಿ ಯೋಧರು 16 ಸಾವಿರ ಅಡಿ ಎತ್ತರದಲ್ಲಿ ತ್ರಿವರ್ಣ ಧ್ವಜ ಹಾರಿಸುವ ಮೂಲಕ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸಿದ್ದಾರೆ.
ಕೊರೋನಾ ಅಟ್ಟಹಾಸದ ನಡುವೆ ಮಾಸ್ಕ್ ಧರಿಸಿ ಸರತಿ ಸಾಲಿನಲ್ಲಿ ನಿಂತು ಐಟಿಬಿಪಿ ಯೋಧರು ಸ್ವಾತಂತ್ರ್ಯ ದಿನವನ್ನಾಚರಿಸಿದ್ದಾರೆ. ಲಡಾಖ್ ಗಡಿಯಲ್ಲಿ 14 ಸಾವಿರ ಅಡಿ ಎತ್ತರದಲ್ಲಿ ಕೈಯಲ್ಲಿ ತ್ರಿವರ್ಣ ಧ್ವಜ ಹಿಡಿದು ಐಟಿಬಿಪಿ ಯೋಧರು ಭಾರತ್ ಮಾತಾ ಕೀ ಜೈ ಹಾಗೂ ಜೈ ಹಿಂದ್ ಘೋಷಣೆಗಳನ್ನು ಮೊಳಗಿಸಿದ್ದಾರೆ.
ಕೆಂಪುಕೋಟೆಯಿಂದ ಮೋದಿ ಕೊರೋನಾ ಲಸಿಕೆ ಸುಳಿವು, ಡ್ರ್ಯಾಗನ್‌ಗೂ ಗುದ್ದು!
ಲಡಾಖ್ ಗಡಿಯಲ್ಲಿ ಚೀನಾದ ಗಡಿ ಕ್ಯಾತೆಗೆ ದಿಟ್ಟ ಉತ್ತರ ನೀಡಿರುವ ಭಾರತೀಯ ಸೇನೆ ಹಾಗೂ ಐಟಿಬಿಪಿ ಯೋಧರು, ಲಡಾಖ್ ಗಡಿಯಲ್ಲಿ ತ್ರಿವರ್ಣ ಧ್ವಜವನ್ನು ರಾರಾಜಿಸುವ ಮೂಲಕ ನಮ್ಮ ಗಡಿಗಳು ಸುರಕ್ಷಿತ ಎಂಬ ಸಂದೇಶವನ್ನು ದೇಶವಾಸಿಗಳಿಗೆ ರವಾನಿಸಿದ್ದಾರೆ. ಸದ್ಯ ಈ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗಿದೆ.