ದೆಹಲಿಯಲ್ಲಿ ಯುವತಿಯನ್ನು 12 ಕಿ.ಮೀ.ವರೆಗೆ ಕಾರೊಂದು ಎಳೆದೊಯ್ದ ಆಕೆ ಸಾವನ್ನಪ್ಪಿದ್ದ ಘಟನೆ ನಡೆದ ದಿನದಂದೇ ಅಂತದ್ದೇ ಘಟನೆ ಉತ್ತರ ಪ್ರದೇಶದ ನೊಯ್ಡಾದಲ್ಲಿ ನಡೆದಿದೆ.

ನೋಯ್ಡಾ: ದೆಹಲಿಯಲ್ಲಿ ಯುವತಿಯನ್ನು 12 ಕಿ.ಮೀ.ವರೆಗೆ ಕಾರೊಂದು ಎಳೆದೊಯ್ದ ಆಕೆ ಸಾವನ್ನಪ್ಪಿದ್ದ ಘಟನೆ ನಡೆದ ದಿನದಂದೇ ಅಂತದ್ದೇ ಘಟನೆ ಉತ್ತರ ಪ್ರದೇಶದ ನೊಯ್ಡಾದಲ್ಲಿ ನಡೆದಿದೆ. ಬೈಕ್‌ನಲ್ಲಿ ಸ್ವಿಗ್ಗಿ ಡೆಲಿವರಿ ಬಾಯ್‌ ಕೌಶಲ್‌ ಯಾದವ್‌ ಹೊಸ ವರ್ಷದ ಮಧ್ಯ ರಾತ್ರಿ 1 ಗಂಟೆಗೆ ನೊಯ್ಡಾದ ಫ್ಲೈ ಓವರ್‌ ಮೇಲೆ ಹಾದು ಹೋಗುತ್ತಿದ್ದಾಗ ಅಪರಿಚಿತ ಕಾರೊಂದು ಆತನ ಬೈಕ್‌ಗೆ ಡಿಕ್ಕಿ ಹೊಡೆದಿದೆ. ಬಳಿಕ 1 ಕಿ.ಮೀ. ವರೆಗೆ ಆತನನ್ನು ಎಳೆದುಕೊಂಡು ಹೋಗಿ ಶನಿ ಮಹಾತ್ಮನ ದೇವಸ್ಥಾನದ ಬಳಿ ಬಿಟ್ಟು ಹೋಗಿದೆ.

ಅಪಘಾತದ ತೀವ್ರತೆಗೆ ಕೌಶಲ್‌ ಮೃತಪಟ್ಟಿದ್ದಾನೆ. ಆಗ ಕ್ಯಾಬ್‌ ಚಾಲಕನೊಬ್ಬ ರಿಂಗ್‌ ಆಗುತ್ತಿದ್ದ ಕೌಶಲ್‌ ಮೊಬೈಲನ್ನು ಎತ್ತಿಕೊಂಡು ಆತ ಶವವಾಗಿ ಬಿದ್ದಿರುವ ವಿಷಯವನ್ನು ಮನೆಗೆ ತಿಳಿಸಿದ್ದಾನೆ. ಘಟನೆ ಕುರಿತು ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಲಾಗುತ್ತಿದ್ದು ಕೌಶಲ್‌ ಮನೆಯವರಿಗೆ ಮಾಹಿತಿ ನೀಡಿದ ಕ್ಯಾಬ್‌ ಚಾಲಕನನ್ನು ವಿಚಾರಣೆ ನಡೆಸಲಾತ್ತಿದೆ. ಕೌಶಲ್‌ ಮನೆಯವರು ನೀಡಿದ ದೂರಿನ ಆಧಾರದ ಮೇಲೆ ಹಿಟ್‌ ಅಂಡ್‌ ರನ್‌ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಮುಂದುವರೆಸಿದ್ದಾರೆ.

ಯುವತಿಯ ಕಾರು ಎಳೆದೊಯ್ದ ಪ್ರಕರಣ: ಅಪಘಾತದ ತೀವ್ರತೆಗೆ ಮೆದುಳು, ಶ್ವಾಸಕೋಶ ಹೊರಕ್ಕೆ

ದೆಹಲಿಯಲ್ಲಿ ಕಾರು ಎಳೆದೊಯ್ದು ಯುವತಿ ಬಲಿ: ಲೆಫ್ಟಿನೆಂಟ್‌ ಗವರ್ನರ್‌ ರಾಜೀನಾಮೆಗೆ ಆಗ್ರಹಿಸಿ ಆಪ್‌ ಪ್ರೊಟೆಸ್ಟ್‌

ಸ್ಕೂಟರ್‌ಗೆ ಡಿಕ್ಕಿ ಹೊಡೆದು, ಯುವತಿಯನ್ನು ಎಳೆದೊಯ್ದ ಕಾರು: ಬೆತ್ತಲೆ ಸ್ಥಿತಿಯಲ್ಲಿ ಶವ ಪತ್ತೆ..!