Asianet Suvarna News Asianet Suvarna News

ಜಲಪಾತದ ಅಂಚಿನಲ್ಲಿ ಮಸ್ತಿ, ಕಾರಿನ ಸಮೇತ ಮೂವರು ಕೆಳಕ್ಕೆ ಬಿದ್ದ ಭಯಾನಕ ವಿಡಿಯೋ ವೈರಲ್!

ಜಲಪಾತದ ಅಂಚಿನಲ್ಲಿ ಕಾರು ನಿಲ್ಲಿಸಿ ಮೋಜು ಮಸ್ತಿ ಮಾಡುತ್ತಿದ್ದಾಗ ದುರ್ಘಟನೆ ಸಂಭವಿಸಿದೆ. ಕಾರಿನೊಳಗೆ ಮೂವರು ಇದ್ದರೆ, ಹೊರಭಾಗದಲ್ಲಿ ಮಸ್ತಿ ಜೋರಾಗಿತ್ತು. ಆದರೆ ಒಂದೇ ಸಮನೆ ಕಾರು ಜಲಪಾತದ ಮೇಲಿನಿಂದ ಕೆಳಕ್ಕೆ ಬಿದ್ದಿದೆ. ಕಾರಿನಲ್ಲಿದ್ದ ಮೂವರರನ್ನು ರಕ್ಷಿಸಲಾಗಿದೆ. ಈ ಭಯಾನಕ ವಿಡಿಯೋ ವೈರಲ್ ಆಗಿದೆ.

Car falls into waterfall father and daughter saved by other tourist in Madhya Pradesh ckm
Author
First Published Aug 7, 2023, 7:58 PM IST

ಇಂದೋರ್(ಆ.07)  ಮಳೆಗಾಲದ ಕಾರಣ ಹಲವು ನದಿಗಳು, ತೊರೆಗಳು ಜಲಪಾತಗಳು ನಯನಮನೋಹರವಾಗಿ ಕಾಣುತ್ತಿದೆ. ಆದರೆ ಅಷ್ಟೇ ಅಪಾಯಕಾರಿ ಅನ್ನೋದು ಮರೆಯಬಾರದು. ಈಗಾಗಲೇ ಸೆಲ್ಫಿ ಕ್ಲಿಕ್ಕಿಸಲು ಹೋಗಿ, ರೀಲ್ಸ್ ಮಾಡುವ ಪ್ರಯತ್ನದಲ್ಲಿ ಹಲವರು ಪ್ರಾಣ ಕಳೆದುಕೊಂಡಿದ್ದಾರೆ. ಇದೀಗ ಜಲಪಾತದ ಅಂಚಿನಲ್ಲಿ ಕಾರು ನಿಲ್ಲಿಸಿ ಮೋಜು ಮಸ್ತಿ ಮಾಡುತ್ತಿದ್ದ ತಂಡವೊಂದು ಸಂಕಷ್ಟಕ್ಕೆ ಸಿಲುಕಿದೆ. ಕಾರಿನೊಳಗೆ ಮೂವರು ಕುಳಿತಿದ್ದರೆ, ಕಾರಿನ ಹೊರಭಾಗದಲ್ಲಿ ಹಲವರು ಮಸ್ತಿ ಶುರುಮಾಡಿದ್ದರು. ಆದರೆ ಜಲಪಾತದ ಅಂಚಿನಲ್ಲಿದ್ದ ಕಾರು ಒಂದೇ ಸಮನೆ ಮೇಲಿನಿಂದ ಕೆಳಕ್ಕೆ ಉರುಳಿದೆ. ಕಾರಿನಲ್ಲಿದ್ದ ಮೂವರನ್ನು ರಕ್ಷಿಸಲಾಗಿದೆ. ಈ ಭಯಾನಕ ವಿಡಿಯೋ ವೈರಲ್ ಆಗಿದೆ.

ಮಧ್ಯಪ್ರದೇಶದ ಇಂದೋರ್‌ ಸಿಮ್ರೋನ್ ಏರಿಯಾದಲ್ಲಿರುವ ಸಣ್ಣ ಜಲಪಾತದಲ್ಲಿ ಈ ಘಟನೆ ನಡೆದಿದೆ. ಕುಟುಂಬವೊಂದು ಕಾರಿನಲ್ಲಿ ಜಲಪಾತಕ್ಕೆ ವೀಕ್ಷಿಸಲು ತೆರಳಿದೆ. ಹಲವು ಪ್ರವಾಸಿಗರು ಈ ಸ್ಥಳಕ್ಕೆ ಆಗಮಿಸಿದ್ದಾರೆ. ಇನ್ನು ಜಲಾಪತದ ಕೆಲ ದೂರದಲ್ಲೂ ಪ್ರವಾಸಿಗರು ಸಂತಸದ ಕ್ಷಣ ಕಳೆಯುತ್ತಿದ್ದರು. ಆದರೆ ಜಲಪಾತದ ಅಂಚಿನಲ್ಲಿ ನಿಲ್ಲಿಸಿದ್ದ ಕಾರು ಏಕಾಏಕಿ ಕೆಳಕ್ಕೆ ಉರುಳಿದೆ.

 

Kodagu: ಸೆಲ್ಫಿ ತೆಗೆದುಕೊಳ್ಳುವಾಗ ಹಾರಂಗಿ ನದಿಗೆ ಬಿದ್ದು ಬೆಂಗಳೂರಿನ ಟ್ಯಾಟೂ ಕಲಾವಿದ ಸಾವು

ಕಾರಿನೊಳಗೆ ಕುಟುಂಬದ ಮೂವರು ಸದಸ್ಯರು ಕುಳಿತಿದ್ದರು. ಇತ್ತ ಹೊರಭಾಗದಲ್ಲೂ ಕೆಲವರು ನಿಂತಿದ್ದರು. ಕಾರು ದಿಢೀರ್ ಜಲಾಪತದ ಕೆಳಭಾಗಕ್ಕೆ ಉರುಳಿದೆ. ಈ ವೇಳೆ ಆಗಮಿಸಿದ್ದ ಪ್ರವಾಸಿಗರು ಗಾಬರಿಯಾಗಿದ್ದಾರೆ. ಚೀರಾಟ ಆರಂಭಗೊಂಡಿದೆ. ಇದೇ ವೇಳೆ ಪ್ರವಾಸಿಗರು ತಮ್ಮ ಪ್ರಾಣ ಪಣಕ್ಕಿಟ್ಟು ನೀರಿಗೆ ಹಾರಿ ಕಾರಿನಲ್ಲಿದ್ದ ಮೂವರನ್ನು ರಕ್ಷಿಸಿದ್ದಾರೆ.

 

 

ಕಾರು ನೀರಿನಲ್ಲಿ ಮುಳುಗಿದೆ. ಇತ್ತ ಕಾರಿನಲ್ಲಿದ್ದ ಮೂವರಿಗೆ ಸಣ್ಣ ಪುಟ್ಟ ಗಾಯಗಳಾಗಿವೆ. ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಜಲಪಾತದ ಅಂಚಿನಲ್ಲಿ ಕಾರು ನಿಲ್ಲಿಸುವಾಗ ಹ್ಯಾಂಡ್ ಬ್ರೇಕ್ ಹಾಕಿಲ್ಲ. ಹೀಗಾಗಿ ಕಾರು ಕೆಳಕ್ಕೆ ಉರುಳಿದೆ. ಮಾಹಿತಿ ತಿಳಿದು ರಕ್ಷಣಾ ತಂಡ ಹಾಗೂ ಪೊಲೀಸ್ ತಂಡ ಸ್ಥಳಕ್ಕೆ ಆಗಮಿಸಿದೆ. ಕಾರನ್ನು ನೀರಿನಿಂದ ಮೇಲಕ್ಕೆತ್ತಲಾಗಿದೆ. ಇದೀಗ ಪ್ರಕರಣ ದಾಖಲಾಗಿದೆ.

ಅರಶಿನಗುಂಡಿ ಜಲಪಾತ ದುರಂತ, ಕೊನೆಗೂ 1 ವಾರದ ಬಳಿಕ ಶರತ್ ಮೃತದೇಹ ಪತ್ತೆ

ಜಲಪಾತದ ಬಳಿ ಕಾರು ನಿಲ್ಲಿಸಿ ನಿಯಮ ಉಲ್ಲಂಘನೆ, ಅಪಾಯಕಾರಿ ಸ್ಥಳದಲ್ಲಿ ಕಾರು ನಿಲ್ಲಿಸಿರುವುದು, ನಿರ್ಲಕ್ಷ್ಯ ಸೇರಿದಂತೆ ಹಲವು ಆರೋಪಗಳನ್ನು ಪ್ರಕರಣದಲ್ಲಿ ಉಲ್ಲೇಖಿಸಲಾಗಿದೆ. ಜಲಾಪತದ ಸವಿ ಅನುಭವಿಸಲು ಹೋದ ಕುಟುಂಬ ಪ್ರಾಣಾಪಾಯದಿಂದ ಪಾರಾಗಿ ಬಂದಿದ್ದೇ ಅದಷ್ಟ. ಈ ವಿಡಿಯೋ ಭಾರಿ ವೈರಲ್ ಆಗಿದೆ. ಈ ಕುರಿತು ಹಲವರು ಪ್ರವಾಸಿಗರು ಎಚ್ಚರಿಕೆ ಸಂದೇಶ ನೀಡಿದ್ದರೆ.

ಜಲಪಾತದ ಅಂಚಿನಲ್ಲಿ ಮಸ್ತಿ ಮಾಡುವಾಗ ಎಚ್ಚರಿಕೆ ವಹಿಸಬೇಕು. ನಿರ್ಬಂಧಿತ ಪ್ರದೇಶದಲ್ಲಿ ವಾಹನವನ್ನು ಚಲಾಯಿಸಿರುವುದು, ಅಪಾಯಕಾರಿ ಪ್ರದೇಶದಲ್ಲಿ ವಾಹನ ನಿಲುಗಡೆ ಮಾಡಿರುವುದು ತಪ್ಪ. ಪ್ರಕೃತಿಯ ಸೌಂದರ್ಯವನ್ನು ಸವಿಯಬೇಕು. ಆದರೆ ಹಾಳುಮಾಡಬೇಡಿ. ಯಾವುದೇ ಜಲಪಾತ ಅಥವಾ ಪ್ರಕೃತಿ ಸವಿ ಅನುಭವಿಸಲು ತೆರಳುವಾಗ ನೀವು ಮಾತ್ರ ತೆರಳಿ ನಿಮ್ಮೊಂದಿಗೆ ಪ್ಲಾಸ್ಚಿಕ್, ಆಹಾರ, ವಾಹನ, ಮೊಬೈಲ್ ಒಯ್ದು ಪರಿಸರ ಹಾಗೂ ನೀವು ನಾಶವಾಗಬೇಡಿ  ಎಂದು ಸಲಹೆ ನೀಡಿದ್ದಾರೆ.

Follow Us:
Download App:
  • android
  • ios