ಜೈಪುರದಲ್ಲಿ ಕಾರು ಚಾಲಕನ ಅಜಾಗರೂಕತೆಯಿಂದ ಇಬ್ಬರು ಬೈಕ್ ಸವಾರರು ಮೃತಪಟ್ಟು ಹಲವರು ಗಾಯಗೊಂಡಿದ್ದಾರೆ. ವಿರುದ್ಧ ದಿಕ್ಕಿನಲ್ಲಿ ಬಂದ ಕಾರು ಹಲವು ಬೈಕ್‌ಗಳಿಗೆ ಡಿಕ್ಕಿ ಹೊಡೆದಿದೆ. ಈ ಘಟನೆ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.

ಸಂಚಾರ ನಿಯಮವನ್ನು ಎಷ್ಟೇ ಚೆನ್ನಾಗಿ ಪಾಲಿಸಿದರೂ ಇನ್ಯಾರೋ ಮಾಡುವ ಅನಾಹುತಕ್ಕೆ ಮತ್ತಿನ್ಯಾರೋ ಬಲಿಯಾಗುತ್ತಾರೆ. ಹೆಲ್ಮೆಟ್ ಧರಿಸಿಲ್ಲ, ಸೀಟ್ ಬೆಲ್ಟ್ ಧರಿಸಿಲ್ಲ ಎಂದು ಟ್ರಾಫಿಕ್ ಪೊಲೀಸರು ಪ್ರತಿದಿನವೂ ವಾಹನ ಸವಾರರಿಗೆ ದಂಡ ವಿಧಿಸುತ್ತಾರೆ. ಆದರೆ ಸಂಚಾರ ನಿಯಮವನ್ನು ಸರಿಯಾಗಿ ಪಾಲಿಸುವ ಜನರೇ ಇನ್ಯಾರದ್ದೋ ತಪ್ಪಿನ ಕಾರಣಕ್ಕೆ ಜೀವ ಕಳೆದುಕೊಳ್ಳುತ್ತಿದ್ದಾರೆ. ಈಗ ಅದೇ ರೀತಿಯ ಘಟನೆಯೊಂದು ಜೈಪುರದಲ್ಲಿ ನಡೆದಿದೆ. ಕಾರು ಚಾಲಕನ ಅಜಾಗರೂಕ ಚಾಲನೆಯಿಂದ ಇಬ್ಬರು ಬೈಕ್ ಸವಾರರು ಮೃತಪಟ್ಟು ಹಲವರು ಗಾಯಗೊಂಡಿದ್ದಾರೆ. ಹಿಟ್ & ರನ್ ಪ್ರಕರಣ ಇದಾಗಿದ್ದು, ಘಟನೆಯ ಭಯಾನಕ ದೃಶ್ಯಾವಳಿ ಸ್ಥಳೀಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ.

ವಿರುದ್ಧ ದಿಕ್ಕಿನಲ್ಲಿ ಎರ್ರಾಬಿರ್ರಿಯಾಗಿ ಕಾರು ಓಡಿಸಿಕೊಂಡು ಬಂದ ಚಾಲಕನೋರ್ವ ಎದುರಿನಿಂದ ಬರುತ್ತಿದ್ದ 4ಕ್ಕೂ ಹೆಚ್ಚು ಬೈಕುಗಳನ್ನು ಗುದ್ದಿಕೊಂಡು ಹೋಗಿದ್ದಾನೆ. ಪರಿಣಾಮ ಇಬ್ಬರು ಸಾವನ್ನಪ್ಪಿ ಹಲವರು ಗಾಯಗೊಂಡಿದ್ದಾರೆ. ಯಮರಾಜನಂತೆ ಬಂದ ಕಾರು ತನ್ನ ಎದುರಿನಿಂದ ಬಂದ ಮೂರಕ್ಕೂ ಹೆಚ್ಚು ಬೈಕ್ಕುಗಳನ್ನು ತೀರದಲ್ಲಿರುವವರನ್ನು ಅಲೆ ತೊಳೆದುಕೊಂಡು ಹೋಗುವಂತೆ ಗುದ್ದಿಕೊಂಡು ಹೋಗಿದ್ದಾನೆ. ಕಾರು ಗುದ್ದಿದ ರಭಸಕ್ಕೆ ಮೂರಕ್ಕೂ ಹೆಚ್ಚು ಬೈಕ್‌ನಲ್ಲಿ ಇದ್ದವರೆಲ್ಲರೂ ಅತ್ತಿತ್ತ ಹೋಗಿ ಬಿದ್ದಿದ್ದಾರೆ, ಅವರ ಬೈಕ್‌ಗಳು ಮತ್ತೊಂದು ಕಡೆ ಬಿದ್ದಿವೆ. ರಾಜಸ್ಥಾನದ ಜೈಪುರದಲ್ಲಿ ಈ ಘಟನೆ ನಡೆದಿದೆ. ಇಲ್ಲಿನ ನಹರ್‌ಘರ್‌ ಪ್ರದೇಶದಲ್ಲಿ ಈ ಘಟನೆ ನಡೆದಿದೆ. ಘಟನೆಯಲ್ಲಿ ಇಬ್ಬರು ಸಾವನ್ನಪ್ಪಿ 9 ಜನ ಗಾಯಗೊಂಡಿದ್ದಾರೆ. 

ರೋಲರ್ ಕೋಸ್ಟರ್‌ ರೈಡ್ ವೇಳೆ ರಾಡ್ ಕಟ್ ಆಗಿ ಯುವತಿ ಸಾವು

ಇಷ್ಟೊಂದು ದೊಡ್ಡ ಅನಾಹುತದ ನಂತರವೂ ಕಾರು ಚಾಲಕ ಕಾರು ನಿಲ್ಲಿಸದೇ ಪರಾರಿಯಾಗಿದ್ದಾನೆ. ನಹರ್‌ಗರ್‌ ಪ್ರದೇಶದಲ್ಲಿ ಹಿಟ್‌ & ರನ್ ಪ್ರಕರಣವೊಂದು ನಡೆದಿದ್ದು, ಘಟನೆಯಲ್ಲಿ ಇಬ್ಬರು ಸಾವನ್ನಪ್ಪಿದ್ದಾರೆ. 9 ಜನರು ಗಂಭೀರ ಗಾಯಗೊಂಡಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಎಸ್‌ಎಂಎಸ್ ಪೊಲೀಸ್ ಠಾಣೆ ಸಬ್ ಇನ್ಸ್‌ಪೆಕ್ಟರ್ ಕನ್ಹೇಯಲಾಲ್ ಮಾಹಿತಿ ನೀಡಿದ್ದಾರೆ. 

ಪತ್ನಿಯ ಆಸ್ಪತ್ರೆಗೆ ದಾಖಲಿಸಿ 2 ವರ್ಷವಾದರೂ ಬಾರದ ಪತಿ: ಕೋಟಿ ಮೊತ್ತದ ಬಿಲ್‌ಗಾಗಿ ಕೋರ್ಟ್ ಮೆಟ್ಟಿಲೇರಿದ ಆಸ್ಪತ್ರೆ

ಅಪಘಾತದ ಬೀಕರ ದೃಶ್ಯಾವಳಿಯ ವೀಡಿಯೋ ಇಲ್ಲಿದೆ ನೋಡಿ:

Scroll to load tweet…