Asianet Suvarna News Asianet Suvarna News

ಮಳೆಗೆ ಕೊಚ್ಚಿ ಹೋದ ಕಾರು ಬೈಕ್‌: ವಿಡಿಯೋ ವೈರಲ್

ರಾಜಸ್ತಾನದ ಜೋಧ್‌ಪುರದಲ್ಲಿ ಸುರಿದ ಮಳೆ ಇಡೀ ಜೋಧ್‌ಪುರ ನಗರದಲ್ಲಿ ಪ್ರವಾಹ ಸ್ಥಿತಿ ನಿರ್ಮಾಣ ಮಾಡಿತ್ತು. ಮಳೆಯಲ್ಲಿ ವಾಹನಗಳು ಕೊಚ್ಚಿ ಹೋಗುತ್ತಿರುವ ದೃಶ್ಯಗಳು ಅನೇಕರ ಫೋನ್‌ಗಳಲ್ಲಿ ಸೆರೆಯಾಗಿದ್ದವು. ಆ ದೃಶ್ಯದ ವಿಡಿಯೋಗಳು ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಅಗುತ್ತಿವೆ.

car bike washed away watch viral videos of jodhpura rain akb
Author
Jodhpur, First Published Jul 31, 2022, 7:10 PM IST

ಜೋಧ್‌ಪುರ: ರಾಜಸ್ತಾನದ ಜೋಧ್‌ಪುರದಲ್ಲಿ ಸುರಿದ ಮಳೆ ಇಡೀ ಜೋಧ್‌ಪುರ ನಗರದಲ್ಲಿ ಪ್ರವಾಹ ಸ್ಥಿತಿ ನಿರ್ಮಾಣ ಮಾಡಿತ್ತು. ಮಳೆಯಲ್ಲಿ ವಾಹನಗಳು ಕೊಚ್ಚಿ ಹೋಗುತ್ತಿರುವ ದೃಶ್ಯಗಳು ಅನೇಕರ ಫೋನ್‌ಗಳಲ್ಲಿ ಸೆರೆಯಾಗಿದ್ದವು. ಆ ದೃಶ್ಯದ ವಿಡಿಯೋಗಳು ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಅಗುತ್ತಿವೆ. ಕೇವಲ ಎರಡು ಗಂಟೆಗಳ ಕಾಲ ಸುರಿದ ನಿರಂತರ ಮಳೆಯಿಂದ ನಗರದ ರಸ್ತೆಗಳೆಲ್ಲಾ ನದಿಗಳಾಗಿ ಮಾರ್ಪಟ್ಟಿದ್ದವು. ಗೋಡೆಗಳ ನಗರ ಹೊಳೆಯಾಗಿ ಬದಲಾಗಿತ್ತು. ಚರಂಡಿ ವ್ಯವಸ್ಥೆಯೂ ಸಂಪೂರ್ಣ ಹದಗೆಟ್ಟಿತ್ತು. ಮಳೆಯ ಈ ಅವಾಂತರದಿಂದ ಪಾರ್ಕಿಂಗ್‌ನಲ್ಲಿ ನಿಲ್ಲಿಸಿದ್ದ ಕಾರುಗಳು ಬೈಕ್‌ಗಳು ನೀರಿನಲ್ಲಿ ಕೊಚ್ಚಿ ಹೋಗಿದ್ದವು. 

ಅಲ್ಲದೇ ಜೋಧ್‌ಪುರದ ರೈಲ್ವೆ ಸ್ಟೇಷನ್‌ಗೂ ನುಗ್ಗಿದ ನೀರು ಫ್ಲಾಟ್‌ಫಾರ್ಮ್‌ಗಳನ್ನೇ ಮುಳುಗಿಸಿತ್ತು, ವಿಶ್ರಾಂತಿ ಕೊಠಡಿಗಳು ಕೂಡ ರೈಲ್ವೆ ಹಳಿಗಳು ಜಲಾವೃತವಾಗಿದ್ದವು. ಇದರೊಂದಿಗೆ ನಗರದ ತಗ್ಗು ಪ್ರದೇಶಗಳೆಲ್ಲವೂ ಬಹುತೇಕ ಜಲಾವೃತವಾಗಿದ್ದವು. ರೈ ಕಾ ಭಾಗ್‌ ರೈಲ್ವೆ ಸ್ಟೇಷನ್ ಅಂತೂ ಸಂಪೂರ್ಣವಾಗಿ ಜಲಾವೃತವಾಗಿತ್ತು. ಹೀಗಾಗಿ ರೈಲ್ವೆ ನಿರ್ವಹಣಾ ತಂಡ ಹಲವು ರೈಲುಗಳ ಪ್ರಯಾಣವನ್ನು ಸ್ಥಗಿತಗೊಳಿಸಿತ್ತು. 

Karnataka Rain; ರಾಜ್ಯದಲ್ಲಿ ಇನ್ನೂ 5 ದಿನ ಮುಂದುವರೆಯಲಿದೆ ಮಳೆ!

ನಗರದ ಆಸ್ಪತ್ರೆ, ಸರ್ಕಾರಿ ಕಚೇರಿ, ಸಬ್ಜಿ ಮಂಡಿ ಮುಂತಾದ ಪ್ರಮುಖ ಮಾರುಕಟ್ಟೆಗಳು ಮಳೆನೀರಿನಿಂದಾಗಿ ತುಂಬಿ ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿತ್ತು. ನಗರಾಡಳಿತ ಸಿಬ್ಬಂದಿ ಪರಿಸ್ಥಿತಿಯನ್ನು ತರಲು ಹರಸಾಹಸ ಪಟ್ಟಿದ್ದರು. ಶಾಲಾ ಕಾಲೇಜುಗಳಿಗೆ ರಜಾ ಘೋಷಿಸಲಾಗಿತ್ತು. ಕಾರು ತರಕಾರಿ ಬೈಕ್ ಸಿಲಿಂಡರ್ ಸೇರಿದಂತೆ ಬಹುತೇಕ ಎಲ್ಲಾ ವಸ್ತುಗಳು ನೀರಿನಲ್ಲಿ ಕೊಚ್ಚಿ ಹೋಗುತ್ತಿರುವ ದೃಶ್ಯದ ವಿಡಿಯೋಗಳು ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ. ಆ ದೃಶ್ಯಗಳನ್ನು ನೀವು ನೋಡಿ.

ಮಂಗಳೂರಲ್ಲಿ ಮತ್ತೆ ಕೃತಕ ‘ಜಲಪ್ರಳಯ’: ನರಕಯಾತನೆ ಪಟ್ಟ ಜನತೆ

Follow Us:
Download App:
  • android
  • ios