Asianet Suvarna News Asianet Suvarna News

ಪಶ್ಚಿಮ ಬಂಗಾಳದ 42 ಜಾತಿಗೆ ಒಬಿಸಿ ಮೀಸಲು ರದ್ದು: ಕಲ್ಕತಾ ಹೈಕೋರ್ಟ್‌

ಈ ಸಮುದಾಯಗಳಿಗೆ ಒಬಿಸಿ ಮೀಸಲನ್ನು ನೀಡಬೇಕು ಎಂಬುದಾಗಿ ಸರ್ಕಾರಕ್ಕೆ ಸಮಿತಿ ನೀಡಿದ ಶಿಫಾರಸಿನಲ್ಲಿ ಲೋಪಗಳು ಕಂಡು ಬಂದ ಹಿನ್ನೆಲೆಯಲ್ಲಿ ಈ ತೀರ್ಮಾನಕ್ಕೆ ಬರಲಾಗಿದೆ. ಆದರೆ 2010ಕ್ಕಿಂತ ಮೊದಲು ಒಬಿಸಿ ಮೀಸಲು ಪಟ್ಟಿಗೆ ಸೇರಿದ್ದ 66 ಸಮುದಾಯಗಳನ್ನು ಹಾಲಿ ಅರ್ಜಿಯಲ್ಲಿ ಉಲ್ಲೇಖಿಸದ ಕಾರಣ ಅವುಗಳನ್ನು ಹಾಗೆಯೇ ಮುಂದುವರೆಸಲಾಗಿದೆ ಎಂದು ತೀರ್ಪು ನೀಡಿದ ಕಲ್ಕತಾ ಹೈಕೋರ್ಟ್‌ 

Cancellation of OBC Reservation for 42 Castes in West Bengal Says Calcutta High Court grg
Author
First Published May 23, 2024, 5:53 AM IST

ಕೋಲ್ಕತಾ(ಮೇ.23):  ಇತ್ತೀಚೆಗಷ್ಟೇ ಶಿಕ್ಷಕರ ನೇಮಕಾತಿಯಲ್ಲಿ ಅಕ್ರಮವಾಗಿ ಎಂದು ಹೇಳಿ 26000 ಶಿಕ್ಷಕರ ನೇಮಕಾತಿ ರದ್ದುಗೊಳಿಸಿದ್ದ ಕಲ್ಕತಾ ಹೈಕೋರ್ಟ್‌ ಇದೀಗ, 2010-2012ರ ಅವಧಿಯಲ್ಲಿ 42ಕ್ಕೂ ಹೆಚ್ಚು ಸಮುದಾಯಗಳನ್ನು ಒಬಿಸಿ ಮೀಸಲು ಪಟ್ಟಿಗೆ ಸೇರಿಸಿದ್ದ ಆದೇಶವನ್ನು ರದ್ದುಪಡಿಸಿದೆ. ಆದರೆ ಈ ಮೀಸಲಾತಿಯಡಿ ಉದ್ಯೋಗದಲ್ಲಿ ನೇಮಕಾತಿ ಅಥವಾ ಮುಂಬಡ್ತಿ ಹೊಂದಿದವರನ್ನು ಕೆಲಸದಿಂದ ತೆಗೆಯುವುದಾಗಲೀ, ಹಿಂಬಡ್ತಿ ನೀಡುವುದಾಗಲೀ ಮಾಡುವಂತಿಲ್ಲ ಎಂದು ಸ್ಪಷ್ಟಪಡಿಸಿದೆ.

ಈ ತೀರ್ಪಿನಿಂದಾಗಿ 5 ಲಕ್ಷಕ್ಕೂ ಅಧಿಕ ಒಬಿಸಿ ಪ್ರಮಾಣಪತ್ರಗಳು ಅಸಿಂಧು ಆಗಲಿದ್ದು, ರಾಜ್ಯದಲ್ಲಿ ಇದನ್ನು ವಿರೋಧಿಸಿ ಭಾರೀ ಪ್ರತಿಭಟನೆ ನಡೆಯುವ ಸಾಧ್ಯತೆ ದಟ್ಟವಾಗಿದೆ. ಈ ಕುರಿತು ತೀರ್ಪು ನೀಡಿದ ನ್ಯಾ. ತಾಪವ್ರತ ಚಕ್ರವರ್ತಿ ನೇತೃತ್ವದ ಪೀಠ, ‘ಪಶ್ಚಿಮ ಬಂಗಾಳ ಹಿಂದುಳಿದ ವರ್ಗಗಳ ಕಾಯ್ದೆ-2012ರ ಪ್ರಕಾರ ಮಾ.5, 2010ರಿಂದ ಮೇ 11, 2012ರವರೆಗೆ ನೀಡಲಾಗಿದ್ದ 42ಕ್ಕೂ ಅಧಿಕ ಸಮುದಾಯಗಳ ಒಬಿಸಿ ಮೀಸಲಾತಿಯನ್ನು ರದ್ದುಪಡಿಸಲಾಗಿದೆ.

ಮಮತಾ ರೇಟ್‌ ಎಷ್ಟು ಎಂದಿದ್ದ ನಿವೃತ್ತ ಜಡ್ಜ್‌ಗೆ ಚುನಾವಣಾ ಆಯೋಗ ತರಾಟೆ

ಈ ಸಮುದಾಯಗಳಿಗೆ ಒಬಿಸಿ ಮೀಸಲನ್ನು ನೀಡಬೇಕು ಎಂಬುದಾಗಿ ಸರ್ಕಾರಕ್ಕೆ ಸಮಿತಿ ನೀಡಿದ ಶಿಫಾರಸಿನಲ್ಲಿ ಲೋಪಗಳು ಕಂಡು ಬಂದ ಹಿನ್ನೆಲೆಯಲ್ಲಿ ಈ ತೀರ್ಮಾನಕ್ಕೆ ಬರಲಾಗಿದೆ. ಆದರೆ 2010ಕ್ಕಿಂತ ಮೊದಲು ಒಬಿಸಿ ಮೀಸಲು ಪಟ್ಟಿಗೆ ಸೇರಿದ್ದ 66 ಸಮುದಾಯಗಳನ್ನು ಹಾಲಿ ಅರ್ಜಿಯಲ್ಲಿ ಉಲ್ಲೇಖಿಸದ ಕಾರಣ ಅವುಗಳನ್ನು ಹಾಗೆಯೇ ಮುಂದುವರೆಸಲಾಗಿದೆ’ ಎಂದು ತೀರ್ಪು ನೀಡಿತು.

ಇದೇ ವೇಳೆ ಹಿಂದುಳಿದ ವರ್ಗಗಳ ಆಯೋಗವು ರಾಜ್ಯ ಸರ್ಕಾರಕ್ಕೆ ಒಬಿಸಿ ಮೀಸಲು ಪಟ್ಟಿಗೆ ಸಮುದಾಯಗಳನ್ನು ಸೇರಿಸುವ ಮತ್ತು ಹೊರತೆಗೆಯುವ ಕುರಿತು ಹೊಸದಾಗಿ ಅಧ್ಯಯನ ನಡೆಸಿ ಶೀಘ್ರದಲ್ಲಿ ವರದಿ ತಯಾರಿಸಿ ಸಲ್ಲಿಸುವಂತೆ ಸಲಹೆ ನೀಡಿದೆ.

ತೀರ್ಪನ್ನು ಒಪ್ಪಲ್ಲ- ಬಿಜೆಪಿ ಷಡ್ಯಂತ್ರ: ಮಮತಾ:

ಇದೇ ವೇಳೆ ಪಶ್ಚಿಮ ಬಂಗಾಳ ನ್ಯಾಯಾಲಯದ ತೀರ್ಪಿಗೆ ಆಕ್ರೋಶ ವ್ಯಕ್ತಪಡಿಸಿದ್ದು, ‘ಮನೆ ಮನೆ ಸಮೀಕ್ಷೆ ನಡೆಸಿ ತಯಾರಿಸಿದ ವರದಿಯನ್ನು ನ್ಯಾಯಾಲಯ ಕಾನೂನುಬಾಹಿರ ಎಂದಿದೆ. ಈ ತೀರ್ಪನ್ನು ಒಪ್ಪಲು ಸಾಧ್ಯವಿಲ್ಲ. ಬಿಜೆಪಿಯೇ ಕೇಂದ್ರೀಯ ತನಿಖಾ ಸಂಸ್ಥೆಗಳ ಮೂಲಕ ಈ ರೀತಿ ತೀರ್ಪು ಬರುವಂತೆ ಷಡ್ಯಂತ್ರ ರೂಪಿಸಿರುವ ಸಾಧ್ಯತೆ ಇದೆ’ ಎಂದು ಆರೋಪಿಸಿದ್ದಾರೆ.

Latest Videos
Follow Us:
Download App:
  • android
  • ios