Asianet Suvarna News Asianet Suvarna News

ಕೆನಡಾ ಚುನಾ​ವ​ಣೆ: ಪ್ರಧಾನಿ ಟ್ರುಡೋಗೆ ಹಿನ್ನಡೆ ಸಾಧ್ಯ​ತೆ!

* ಅವಧಿಪೂರ್ವ ಚುನಾವಣೆ ಘೋಷಿಸಿ, ಬಹುಮತದೊಂದಿಗೆ ಅಧಿಕಾರಕ್ಕೆ ಬರುವ ಉತ್ಸಾಹ

* ಕೆನಡಾ ಚುನಾ​ವ​ಣೆ: ಪ್ರಧಾನಿ ಟ್ರುಡೋಗೆ ಹಿನ್ನಡೆ ಸಾಧ್ಯ​ತೆ!

Canada Justin Trudeau Trailing In Polls Defends Call For Early Election pod
Author
Bangalore, First Published Sep 12, 2021, 10:13 AM IST
  • Facebook
  • Twitter
  • Whatsapp

ಹ್ಯಾಮಿಲ್ಟನ್‌(ಸೆ.12): ಅವಧಿಪೂರ್ವ ಚುನಾವಣೆ ಘೋಷಿಸಿ, ಬಹುಮತದೊಂದಿಗೆ ಅಧಿಕಾರಕ್ಕೆ ಬರುವ ಉತ್ಸಾಹದಲ್ಲಿದ್ದ ಕೆನಡಾ ಪ್ರಧಾನಿ ಜಸ್ಟಿನ್‌ ಟ್ರುಡೋಗೆ ಭಾರೀ ಹಿನ್ನಡೆ ಆಗುವ ಲಕ್ಷಣ ಗೋಚ​ರಿ​ಸಿ​ದೆ. ಇತ್ತೀಚಿನ ಸಮೀಕ್ಷೆಗಳ ಅನ್ವಯ ಸೆ.20ರಂದು ನಡೆಯಲಿರುವ ಚುನಾವಣೆಯಲ್ಲಿ ಅವ​ರಿ​ಗೆ ಸೋಲು ಅನುಭವಿಸುವ ಸಾಧ್ಯತೆ ದಟ್ಟವಾಗಿದೆ.

ಇದರ ಹೊರತಾಗಿಯೂ ತಮ್ಮ ನಿರ್ಧಾರವನ್ನು ಸಮರ್ಥಿಸಿಕೊಂಡಿರುವ ಟ್ರುಡೇಡ್‌, ‘ಚುನಾವಣೆ ಸಂಬಂಧ ಕೈಗೊಂಡ ನಿರ್ಧಾರಕ್ಕೆ ನಾನು ಪಶ್ಚಾತ್ತಾಪ ಪಡುತ್ತಿಲ್ಲ. ಜೊತೆಗೆ ಕೋವಿಡ್‌ ನಿರ್ವಹಿಸಿದ ರೀತಿ ನೋಡಿ ಜನ ನನ್ನ ಕೈಬಿಡುವುದಿಲ್ಲ​’ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಅಲ್ಪ ಮತದೊಂದಿಗೆ ಅಧಿಕಾರಕ್ಕೆ ಬಂದಿದ್ದ ಟ್ರುಡೋ ಪಕ್ಷ, ಈಗ ಪ್ರತಿ ಮಸೂದೆ ಅಂಗೀಕಾರಕ್ಕೂ ವಿಪಕ್ಷಗಳ ಬೆಂಬಲ ಪಡೆಯಲೇಬೇಕಾದ ಅನಿವಾರ್ಯತೆ ಇದೆ. ಹೀಗಾಗಿ ಕೋವಿಡ್‌ ನಿಯಂತ್ರ​ಣದ ಸಾಧನೆ ನೆರವಿಗೆ ಬರಲಿದೆ ಎಂದು ಅವರು ಅವಧಿಪೂರ್ವ ಚುನಾವಣೆ ಪ್ರಕಟಿಸಿದ್ದರು.

ಆದರೆ ಇತ್ತೀಚಿನ ಸಮೀಕ್ಷೆ ಅನ್ವಯ, ಶೇ.49ರಷ್ಟುಜನರು ಲಿಬರಲ್‌ ಪಕ್ಷದ ಟ್ರುಡೋ ಬಗ್ಗೆ ಅತೃಪ್ತಿ ವ್ಯಕ್ತಪಡಿಸಿದ್ದಾರೆ. ಕನ್ಸ್‌ರ್ವೇಟಿವ್‌ ಪಕ್ಷದ ಎರಿನ್‌ ಒ’ಟೋಲೆ ಶೇ. ಟ್ರುಡೇಡುಗಿಂತ ಅಲ್ಪ ಮುನ್ನಡೆ ಸಾಧಿಸಿದ್ದಾರೆ.

Follow Us:
Download App:
  • android
  • ios