ಆನೆಗಳ ಹಿಂಡೊಂದು ಟ್ವಿಟರ್‌ನಲ್ಲಿ ಜನರನ್ನು ಭಾರೀ  ಕನ್ಫ್ಯೂಸ್ ಮಾಡಿದೆ. ಕೆಲ ದಿನಗಳ ಹಿಂದೆ ಎನ್‌ಜಿಓ, ವೈಲ್ಡ್‌ ಇಕೋ ಫೌಂಡೇಷನ್ ಫೋಟೋ ಒಂದನ್ನು ಶೇರ್ ಮಾಡಿಕೊಂಡಿತ್ತು. ಇದರಲ್ಲಿ ಆನೆಗಳ ಹಿಂಡೊಂದು ನೀರು ಕುಡಿಯುತ್ತಿತ್ತು. ಇದರಲ್ಲಿ ಒಂದಾದ ಬಳಿಕ ಮತ್ತೊಂದರಂತೆ ನಿಂತ ಆನೆಗಳು ನೀರು ಕುಡಿಯುತ್ತಿರುವ ದೃಶ್ಯವಿದೆ. ಆದರೆ ಇದು ನೋಡಿದಂತಿಲ್ಲ, ಇಲ್ಲಿ ಸಾಮಾಣ್ಯವಾಗಿ ಕಾಣುವುಕ್ಕೂ ಹೆಚ್ಚು ಆನೆಗಳು ಇವೆ. ಇದರಲ್ಲಿ ಒಟ್ಟು ಏಳು ಆನೆಗಳು ಇವೆ ಎನ್ನಲಾಗಿದ್ದು, ಜನರು ಎಲ್ಲಿವೆ ಎಂದು ಹುಡುಕಾಡಲು ಪರದಾಡಿದ್ದಾರೆ.

ಎನ್‌ಜಿಓ ಫೋಟೋ ಶೇರ್ ಮಾಡುತ್ತಾ ಕೆಲ ಫ್ರೇಮ್‌ಗಳು ಅದ್ಭುತವಾಗಿರುತ್ತವೆ. ಇಲ್ಲಿ ನಿಮಗೆ 7 ಇನ್ 1 ಫ್ರೇಮ್ ಸಿಗುತ್ತದೆ ಎಂದು ಬರೆದಿದ್ದಾರೆ.

ಸೋಶಿಯಲ್ ಮೀಡಿಯಾದಲ್ಲಿ ಈ ಫೋಟೋ ಪೋಸ್ಟ್‌ ಮಾಡಿದ ಬೆನ್ನಲ್ಲೇ ವೈರಲಲ್ ಆಗಿದೆ. ಅನೇಕ ಮಂದಿ ಇದರಲ್ಲಿ ಕೇವಲ ನಾಲ್ಕು ಆನೆಗಳು ಮಾತ್ರ ಇವೆ ಎಂದು ಹೇಳಿದ್ದಾರೆ. ಇದರ ಬೆನ್ನಲ್ಲೇ ಈ ಫೋಟೋಗೆ ಎನ್‌ಜಿಓ ಏಳು ಆನೆಗಳನ್ನು ಮಾರ್ಕ್ ಮಾಡಿ ಉತ್ತರವನ್ನೂ ನೀಡಿದೆ. ನಿಮಗೂ ಏಳು ಆನೆಗಳು ಕಾಣುತ್ತಾ? ಅಥವಾ ಕೇವಲ ನಾಲ್ಕು ಕಾಣುತ್ತೆ ಚೆಕ್ ಮಾಡಿ.

ಇನ್ನು ಫೋಟೋದಲ್ಲಿ ಏಳು ಆನೆಗಳಿವೆ ಎಂಬುವುದನ್ನು ಸಾಬೀತುಪಡಿಸಲು ಎನ್‌ಜಿಓ ಇದರ ವಿಡಿಯೋವನ್ನೂ ಶೇರ್ ಮಾಡಿಕೊಂಡಿದೆ. ಈ ಮೂಲಕ ಎಲ್ಲಾ ಗೊಂದಲಗಳಿಗೂ ತೆರೆ ಎಳೆದಿದೆ.