Asianet Suvarna News Asianet Suvarna News

ಬಾಲಕಿ ಮೇಲೆ ರೇಪ್‌: ಸಂತ್ರಸ್ತೆ ಅಪ್ರಾಪ್ತೆ ಎಂದು ಆರೋಪಿಗೆ ಗಲ್ಲು ನೀಡಲಾಗದು, ಸುಪ್ರೀಂ

*   ಗದಗ ರೇಪಿಸ್ಟ್‌ಗೆ ಗಲ್ಲು ಬದಲು 30 ವರ್ಷ ಜೈಲು
*   ಸುಪ್ರೀಂ ಆದೇಶ, ಅಪ್ರಾಪ್ತೆಯ ರೇಪ್‌, ಕೊಲೆ ಎಂಬುದು ಗಲ್ಲು ಶಿಕ್ಷೆಗೆ ಆಧಾರವಾಗದು
*   ಆರೋಪಿಗೆ ಗಲ್ಲು ಶಿಕ್ಷೆ ವಿಧಿಸಿದ್ದ ಗದಗ ಜಿಲ್ಲಾ ನ್ಯಾಯಾಲಯ
 

Can Not Death Sentence to Accused for Reason for Deceased was an Minor  grg
Author
Bengaluru, First Published Nov 10, 2021, 11:41 AM IST
  • Facebook
  • Twitter
  • Whatsapp

ನವದೆಹಲಿ(ನ.10): ‘ಮೃತಳು ಅಪ್ರಾಪ್ತೆಯಾಗಿದ್ದಳು(Minor) ಎಂಬ ಒಂದೇ ಕಾರಣಕ್ಕೆ ಗಲ್ಲು ಶಿಕ್ಷೆ(Death Sentence) ನೀಡಲು ಆಗದು’ ಎಂದು ಸುಪ್ರೀಂ ಕೋರ್ಟ್‌(Supreme Court) ಮಹತ್ವದ ತೀರ್ಪು(Verdict) ಪ್ರಕಟಿಸಿದೆ.
2010ರಲ್ಲಿ ಗದಗ ಜಿಲ್ಲೆಯಲ್ಲಿ ಸಂಚಲನ ಮೂಡಿಸಿದ್ದ 5 ವರ್ಷದ ಬಾಲಕಿಯ ಅತ್ಯಾಚಾರ ಹಾಗೂ ಕೊಲೆ(Murder) ಪ್ರಕರಣದಲ್ಲಿ ಗಲ್ಲು ಶಿಕ್ಷೆಗೆ ಗುರಿಯಾಗಿದ್ದ ವ್ಯಕ್ತಿಯ ಸಜೆಯನ್ನು ಸುಪ್ರೀಂ ಕೋರ್ಟು ಸೋಮವಾರ 30 ವರ್ಷದ ಜೀವಾವಧಿ(Life Sentence) ಸಜೆಯಾಗಿ ಪರಿವರ್ತಿಸಿದೆ. ಈ ಸಂದರ್ಭದಲ್ಲಿ ಈ ಮೇಲಿನ ಅಭಿಪ್ರಾಯ ವ್ಯಕ್ತಪಡಿಸಿದೆ. 

ಮೃತಳು ಅಪ್ರಾಪ್ತೆಯಾಗಿದ್ದಳು ಎಂಬ ಒಂದೇ ಕಾರಣಕ್ಕೆ ಗಲ್ಲು ಶಿಕ್ಷೆ ನೀಡಲು ಆಗದು. ಕಳೆದ 40 ವರ್ಷದಲ್ಲಿ ಅಪ್ರಾಪ್ತೆ ಮೇಲೆ ಅತ್ಯಾಚಾರ ನಡೆದ 67 ಪ್ರಕರಣಗಳ ವಿಚಾರಣೆ ವೇಳೆ ಇಂಥದ್ದೇ ಅಭಿಪ್ರಾಯವನ್ನು ಕೋರ್ಟ್‌ ವ್ಯಕ್ತಪಡಿಸಿತ್ತು. ಈ 67 ಪ್ರಕರಣಗಳಲ್ಲಿ 15  ಪ್ರಕರಣಗಳಲ್ಲಿ(Cases) ಮಾತ್ರ ಗಲ್ಲು ಶಿಕ್ಷೆ ವಿಧಿಸಲಾಗಿತ್ತು. ಆದರೆ ಮರುಪರಿಶೀಲನಾ ಅರ್ಜಿಗಳಲ್ಲಿ ಗಲ್ಲು ಶಿಕ್ಷೆಯನನ್ನು ಜೀವಾವಧಿಗೆ ಪರಿವರ್ತಿಸಲಾಗಿತ್ತು ಎಂದು ನ್ಯಾ. ನಾಗೇಶ್ವರರಾವ್‌ ಅವರ ಪೀಠ ಹೇಳಿದೆ.

ಉಮೇಶ್ ರೆಡ್ಡಿಗೆ ಗಲ್ಲು ಕಾಯಂ.. ಹೈಕೋರ್ಟ್‌ನಿಂದ ಐತಿಹಾಸಿಕ ತೀರ್ಪು

ಈರಪ್ಪ ಸಿದ್ದಪ್ಪ ಮುರುಗಣ್ಣವರ ಎಂಬಾತನೇ ಗಲ್ಲು ಶಿಕ್ಷೆಗೆ ಗುರಿಯಾಗಿದ್ದ ಅಪರಾಧಿ. ಈತ 2019ರಲ್ಲಿ ನರಗುಂದ(Nargund) ತಾಲೂಕಿನ ಖಾನಾಪುರ ಗ್ರಾಮದಲ್ಲಿ 5 ವರ್ಷದ ಬಾಲಕಿಯ ಮೇಲೆ ಅತ್ಯಾಚಾರ ಎಸಗಿದ್ದ ಹಾಗೂ ಆಕೆಯ ಶವವನ್ನು(Deadbody) ಕತ್ತರಿಸಿ ಚೀಲದಲ್ಲಿ ಕಟ್ಟಿ ಸಮೀಪದ ಬೆಣ್ಣಿಹಳ್ಳಕ್ಕೆ ಎಸೆದಿದ್ದ.

ಬಳಿಕ ಈತನಿಗೆ ಗದಗ ಜಿಲ್ಲಾ ನ್ಯಾಯಾಲಯ(District Court of Gadag) ಗಲ್ಲು ಶಿಕ್ಷೆ ವಿಧಿಸಿತ್ತು. ಗದಗ ಜಿಲ್ಲಾ ನ್ಯಾಯಾಲಯ ಸ್ಥಾಪನೆಯಾದ ನಂತರ ಆ ಕೋರ್ಟು ನೀಡಿದ್ದ ಮೊದಲ ನೇಣು ಶಿಕ್ಷೆ ನೀಡಿದ ತೀರ್ಪು ಅದಾಗಿತ್ತು. ಈ ಆದೇಶವನ್ನು 2017ರ ಮಾ.6ರಂದು ಕರ್ನಾಟಕ ಹೈಕೋರ್ಟ್‌(Karnataka High Court) ಎತ್ತಿ ಹಿಡಿದಿತ್ತು. ಇದನ್ನು ಈರಪ್ಪನು ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನಿಸಿದ್ದ. 

ಅಪ್ರಾ​ಪ್ತೆಯ ಅಪ​ಹ​ರಿಸಿ ಅತ್ಯಾ​ಚಾ​ರ : 26 ದಿನ​ದಲ್ಲಿ ಗಲ್ಲು ಶಿಕ್ಷೆ

ಬಾಲಕಿಯ ಲೈಂಗಿಕ ದೌರ್ಜನ್ಯ: 10 ವರ್ಷ ಜೈಲು

ಧಾರವಾಡ: ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ(Sexual Harassment)ಎಸಗಿದ ಪ್ರಕರಣದಲ್ಲಿ ಅಪರಾಧಿಗೆ 10 ವರ್ಷ ಕಠಿಣ ಜೈಲುಶಿಕ್ಷೆ ವಿಧಿಸಿ ಇಲ್ಲಿನ 2ನೇ ಅಧಿಕ ಜಿಲ್ಲಾ ಮತ್ತು ವಿಶೇಷ ಸತ್ರ ನ್ಯಾಯಾಲಯವು ಮಂಗಳವಾರ ತೀರ್ಪು ಪ್ರಕಟಿಸಿದೆ. 

ಸೈಯದ್‌ ಸಾಜಿದ್‌ ಹುಸೇನ್‌ ಸುಲೇದಾರ್‌ ಶಿಕ್ಷೆಗೊಳಗಾದ ಅಪರಾಧಿ. ಧಾರವಾಡ(Dharwad) ನಗರದ ಪ್ರತಿಷ್ಠಿತ ಕಾಲೇಜಿನ ಬಾಲಕಿಗೆ ಈತ 2018ರ ಆ. 21ರಂದು ಕೊಲೆ ಬೆದರಿಕೆ(Threat of murder) ಹಾಕಿ, ಅಪಹರಿಸಿ(Kidnap)  ಲಾಡ್ಜ್‌ನಲ್ಲಿ ಬಂಧಿಸಿಟ್ಟಿದ್ದನು. ನಂತರ ಬಾಲಕಿಯನ್ನು(Minor Girl) ಬೆಂಗಳೂರಿಗೆ(Bengaluru) ಕರೆದೊಯ್ದು ಐದು ದಿನಗಳ ಕಾಲ ಅಕ್ರಮ ಬಂಧನದಲ್ಲಿಟ್ಟು ಲೈಂಗಿಕ ದೌರ್ಜನ್ಯ ಎಸಗಿದ್ದ. ಈ ಕುರಿತು ಉಪನಗರ ಪೊಲೀಸ್‌ ಠಾಣೆಯಲ್ಲಿ ಪೋಕ್ಸೊ ಕಾಯ್ದೆಯಡಿ(Poxo Act) ಪ್ರಕರಣ ದಾಖಲಾಗಿತ್ತು. ಆರೋಪಿಯನ್ನು(Accused) ಬಂಧಿಸಿದ(Arrested) ಪೊಲೀಸರು(Police) ತನಿಖೆ(Investigation) ನಡೆಸಿ, ದೋಷಾರೋಪ ಪಟ್ಟಿಸಲ್ಲಿಸಿದ್ದರು. 

ವಿಚಾರಣೆ ನಡೆಸಿದ 2ನೇ ಅಧಿಕ ಜಿಲ್ಲಾ ಮತ್ತು ವಿಶೇಷ ಸತ್ರ ನ್ಯಾಯಾಲಯದ(Court) ನ್ಯಾಯಾಧೀಶ ಕೆ.ಸಿ. ಸದಾನಂದಸ್ವಾಮಿ, ಆರೋಪ ಸಾಬೀತಾಗಿದೆ ಎಂದು ತೀರ್ಪು ನೀಡಿ 10 ವರ್ಷ ಕಠಿಣ ಶಿಕ್ಷೆ ಹಾಗೂ 55 ಸಾವಿರ ದಂಡ ವಿಧಿಸಿದ್ದಾರೆ. ಸರ್ಕಾರದ ಪರ ಸರ್ಕಾರಿ ಅಭಿಯೋಜಕಿ ಗಿರಿಜಾ ತಮ್ಮಿನಾಳ ವಾದ ಮಂಡಿಸಿದ್ದರು.
 

Follow Us:
Download App:
  • android
  • ios