ಅಪ್ರಾ​ಪ್ತೆಯ ಅಪ​ಹ​ರಿಸಿ ಅತ್ಯಾ​ಚಾ​ರ : 26 ದಿನ​ದಲ್ಲಿ ಗಲ್ಲು ಶಿಕ್ಷೆ

ಪುಟ್ಟ ಬಾಲಕಿಯ ಮೇಲೆ ಅತ್ಯಾಚಾರ ಎಸಗಿದ್ದ ಕೀಚಕನಿಗೆ ಕೇವಲ 26 ದಿನದಲ್ಲಿ ಗಲ್ಲು ಶಿಕ್ಷೆ ವಿಧಿಸಲಾಗಿದೆ. ಅಪಹರಣ ಕೇಸಲ್ಲಿ 10 ವರ್ಷ ಜೈಲು ಶಿಕ್ಷೆ ಮತ್ತು 75000 ರು. ದಂಡ ಕಟ್ಟಲು ಸೂಚಿಸಿದೆ. 

Man get Death Sentence in 26 Days After Rape case  snr

ಜೈಪು​ರ (ಮಾ. 19): ಐದು ವರ್ಷದ ಬಾಲ​ಕಿ​ಯೊ​ಬ್ಬ​ಳನ್ನು ಅಪ​ಹ​ರ​ಣ​ಗೈದು ಅತ್ಯಾ​ಚಾ​ರ​ವೆ​ಸ​ಗಿದ್ದ ದುರು​ಳ​ನಿಗೆ ರಾಜ​ಸ್ಥಾ​ನದ ವಿಶೇ​ಷ ಪೋಕ್ಸೋ ನ್ಯಾಯಾ​ಲ​ಯ, ಘಟನೆ ನಡೆದು ಕೇವಲ 26 ದಿನ​ಗ​ಳಲ್ಲಿ ಗಲ್ಲು ಶಿಕ್ಷೆ ವಿಧಿ​ಸಿದೆ. 

ಫೆ.19ರಂದು ಸುನೀಲ್‌ ಕುಮಾರ್‌ (21) ಎಂಬಾತ ಅಪ್ರಾ​ಪ್ತೆ​ಯನ್ನು ಅಪ​ಹ​ರ​ಣ​ಗೈದು ಆಕೆಯ ಮೇಲೆ ಅತ್ಯಾ​ಚಾ​ರ​ವೆ​ಸ​ಗಿದ್ದ. ಈ ಸಂಬಂಧ ವಿಚಾ​ರಣೆ ನಡೆ​ಸಿದ್ದ ಪೋಕ್ಸೋ ಕೋರ್ಟ್‌, ಸುನೀಲ್‌ ಅತ್ಯಚಾರ ಕೇಸಲ್ಲಿ ಗಲ್ಲು ಶಿಕ್ಷೆ, ಅಪಹರಣ ಕೇಸಲ್ಲಿ 10 ವರ್ಷ ಜೈಲು ಶಿಕ್ಷೆ ಮತ್ತು 75000 ರು. ದಂಡ ಕಟ್ಟಲು ಸೂಚಿಸಿದೆ. 

ಕಲಬುರಗಿ; ಕೊಲೆ ಮಾಡಿದ್ದ ವಿಚಾರ ಎಣ್ಣೆ ಏಟಿನಲ್ಲಿ ಹೊರಬಂತು! ..

ತಮ್ಮ ಪುತ್ರಿಗೆ ಕಿರು​ಕುಳ ನೀಡಿದ ದುಷ್ಕ​ರ್ಮಿಗೆ ಕೋರ್ಟ್‌ ವಿಧಿ​ಸಿದ ಶಿಕ್ಷೆ​ಯಿಂದ ಸಂತ​ಸ​ವಾ​ಗಿದೆ ಎಂದು ಸಂತ್ರಸ್ತೆ ಪೋಷ​ಕರು ತಿಳಿ​ಸಿ​ದ್ದಾರೆ.

Latest Videos
Follow Us:
Download App:
  • android
  • ios