Asianet Suvarna News Asianet Suvarna News

ಕೆಲಸ ಚೆಕ್ ಮಾಡೋಕೆ ಪ್ರತಿ ಉದ್ಯೋಗಿ ಮನೆಯಲ್ಲಿ ಸಿಸಿಟಿವಿ..!

  • ಕೊರೋನಾದಿಂದ ಮನೆಯಿಂದಲೇ ಕೆಲಸ ಮಾಡುತ್ತಿರುವ ಉದ್ಯೋಗಿಗಳು
  • ಕೆಲಸ ಚೆಕ್ ಮಾಡೋಕೆ ಕೆಲಸಗಾರರ ಮನೆಯಲ್ಲಿ ಸಿಸಿಟಿವಿ
Call centre company plans to install CCTV at homes to monitor performance, employees are outraged
Author
Bangalore, First Published Aug 10, 2021, 3:17 PM IST
  • Facebook
  • Twitter
  • Whatsapp

ಕೊರೋನಾ ಕಾಟ ಶುರುವಾಗಿ ಕಂಪನಿಗಳು ಕೆಲಸಗಾರರಿಗೆ ವರ್ಕ್‌ ಫ್ರಂ ಹೋಮ್ ಅವಕಾಶ ನೀಡಿದೆ. ಬಹುತೇಕ ಕಂಪನಿಗಳ ಉದ್ಯೋಗಿಗಳು ಈಗ ಮನೆಯಿಂದಲೇ ಕೆಲಸ ಮಾಡುತ್ತಿದ್ದಾರೆ. ಈ ನಡುವೆ ಜನರು ಟೆಕ್ನಾಲಜಿಗೆ ಒಗ್ಗಿಬಿಟ್ಟಿದ್ದಾರೆ. ಆಫೀಸುಗಳಲ್ಲಿ ಉದ್ಯೋಗಿಗಳ ಕೆಲಸವನ್ನು ಮಾನಿಟರ್ ಮಾಡಲು ಟೂಲ್ಸ್, ಡಾಟಾ ಎಂಟ್ರಿ ಎಪ್ಲೆಕೇಷನ್‌ಗಳೂ ಇದ್ದವು. ಆದರೆ ಇವುಗಳೆಲ್ಲವೂ ಆಫೀಸುಗಳಿಗಷ್ಟೇ ಸೀಮಿತವಾಗಿದ್ದವು.

ಬೇರೆ ರೀತಿಯಲ್ಲಿ ಹೇಳುವುದಾದರೆ ಕಾರ್ಯಕ್ಷಮತೆಯ ವಿಶ್ಲೇಷಣೆಗಾಗಿ ಉದ್ಯೋಗಿಯ ವೃತ್ತಿಪರ ಭಾಗವನ್ನು ಮಾತ್ರ ಮೇಲ್ವಿಚಾರಣೆ ಮಾಡಬಹುದು. ಇವೆಲ್ಲವೂ ಬೋನಸ್, ಮೌಲ್ಯಮಾಪನದ ವಿಚಾರಗಳನ್ನು ನಿರ್ಧರಿಸುತ್ತದೆ. ಆದರೆ ಈಗ ಅನೇಕ ಸಂಸ್ಥೆಗಳು ತಮ್ಮ ಉದ್ಯೋಗಿಗಳು ಹೇಗೆ ಕಾರ್ಯನಿರ್ವಹಿಸುತ್ತಿದ್ದಾರೆ ಎಂಬುದನ್ನು ನೋಡಲು ಬಳಸುತ್ತಿದ್ದ ಪ್ರಮಾಣಿತ ಮಾರ್ಗ ಬಳಸುತ್ತಿಲ್ಲ.

ಡಾರ್ಕ್‌ ಸರ್ಕಲ್‌ ಹೋಗಿದೆ.. ಜೀನ್ಸ್..ಬ್ರಾ .. ಪ್ಯಾಕ್ ಮಾಡಿ ಇಟ್ಟಿದ್ದೇನೆ.. ಆಫೀಸ್‌ಗೆ ಬರಲ್ಲ!

ತಮ್ಮ ಕೆಲಸದ ಕಾರ್ಯಕ್ಷಮತೆಯನ್ನು ಮೇಲ್ವಿಚಾರಣೆ ಮಾಡಲು ತಮ್ಮ ಮನೆಗಳಲ್ಲಿ ಕ್ಯಾಮೆರಾಗಳನ್ನು ಅಳವಡಿಸುವಂತೆ ಕಂಪನಿ ಹೇಳಿದ ನಂತರ ವಿಶ್ವದ ಅತಿದೊಡ್ಡ ಕಾಲ್ ಸೆಂಟರ್ ಕಂಪನಿಯೊಂದರಲ್ಲಿ ಉದ್ಯೋಗಿಗಳು ಸಿಕ್ಕಾಪಟ್ಟೆ ಸಿಟ್ಟಾಗಿದ್ದಾರೆ. ಟೆಲಿಪರ್ಫಾರ್ಮೆನ್ಸ್ ಎಐ-ಚಾಲಿತ ಕ್ಯಾಮೆರಾಗಳನ್ನು ಉದ್ಯೋಗಿಗಳ ಮನೆಗಳಲ್ಲಿ ಅಥವಾ ಅವರ ಕಂಪ್ಯೂಟರ್‌ಗಳಲ್ಲಿ ಅಳವಡಿಸಲು ಕಂಪನಿ ಪ್ರಯತ್ನಿಸಿದೆ.

ಕಂಪನಿಯು ಕೆಲಸಗಾರರ ಮೇಲೆ ಕ್ಯಾಮೆರಾಗಳನ್ನು ಅಳವಡಿಸುವಂತೆ ಒತ್ತಡ ಹೇರಿತ್ತು. ಧ್ವನಿ ವಿಶ್ಲೇಷಣೆ ಮತ್ತು ಕುಟುಂಬ ಸದಸ್ಯರಿಂದ ಸಂಗ್ರಹಿಸಿದ ಸಂಗ್ರಹಣೆಯ ದತ್ತಾಂಶಗಳ ಮೂಲಕ ಅವರ ಮೇಲ್ವಿಚಾರಣೆ ಮಾಡಲು ಯೋಜನೆ ಹಾಕಿತ್ತು. ಜಾಗತಿಕವಾಗಿ 3,80,000 ಕ್ಕಿಂತ ಹೆಚ್ಚು ಕೆಲಸಗಾರರನ್ನು ನೇಮಿಸಿಕೊಳ್ಳುವ ಕಂಪನಿಯಲ್ಲಿ ಉದ್ದೇಶಿತ ಕ್ರಮವು ಕೆಲಗಾರರಿಂದ ತೀವ್ರ ಆಕ್ರೋಶವನ್ನು ಎದುರಿಸಿದೆ. ಟೆಲಿಪರ್ಫಾರ್ಮೆನ್ಸ್ ಒಪ್ಪಂದಕ್ಕೆ ಸಹಿ ಹಾಕುವಂತೆ ಸಿಬ್ಬಂದಿಗೆ ಒತ್ತಡ ಹೇರಲು ಪ್ರಯತ್ನಿಸಿದೆ ಎನ್ನಲಾಗಿದೆ.

ಬೊಗೊಟಾದಿಂದ ಕಂಪನಿಗೆ ಕೆಲಸ ಮಾಡುವ ಕೆಲಸಗಾರನು ಒಪ್ಪಂದಕ್ಕೆ ಸಹಿ ಹಾಕುವುದು ಎಂದರೆ ಉದ್ಯೋಗಿಗಳು ಮನೆಯಲ್ಲಿ ಏನು ಮಾಡುತ್ತಿದ್ದಾರೆ ಎಂಬುದನ್ನು ನಿರಂತರವಾಗಿ ಮೇಲ್ವಿಚಾರಣೆ ಮಾಡುವುದು ಎಂದರ್ಥ ಎಂದಿದ್ದಾನೆ. ಇದು ನಿಜವಾಗಿಯೂ ಕೆಟ್ಟದು. ನಾವು ಕಚೇರಿಯಲ್ಲಿ ಕೆಲಸ ಮಾಡುವುದಿಲ್ಲ. ನಾನು ನನ್ನ ಮಲಗುವ ಕೋಣೆಯಲ್ಲಿ ಕೆಲಸ ಮಾಡುತ್ತೇನೆ. ನನ್ನ ಮಲಗುವ ಕೋಣೆಯಲ್ಲಿ ಕ್ಯಾಮೆರಾ ಇಡಲು ನಾನು ಬಯಸುವುದಿಲ್ಲ ಎಂದಿದ್ದಾನೆ.

Follow Us:
Download App:
  • android
  • ios