ಬೆಂಗಳೂರು(ಫೆ. 24)   ಕೊರೋನಾ  ಲಾಕ್ ಡೌನ್ ನಂತರ  ಬಹುಪಾಲು ಕಂಪನಿಗಳು ವರ್ಕ್ ಫ್ರಾಂ ಹೋಂ ಅಂದರೆ ಮನೆಯಿಂದಲೇ ಕೆಲಸದ ಮೊರೆ ಹೋಗಿವೆ. ಕೆಲಸ-ಕಾರ್ಯಗಳು ಸಸೂತ್ರವಾಗಿಯೇ ನಡೆದುಕೊಂಡು ಹೋಗುತ್ತಿದೆ. ಜನರು ಕೂಡ ಮನೆಯಲ್ಲೇ ಕುಳೀತು ಕೆಲಸ ಮಾಡುವುದಕ್ಕೆ ಒಗ್ಗಿ ಹೋಗಿದ್ದಾರೆ.

ಕೊರೋನಾ ನಿಯಮಗಳನ್ನು ನಿಧಾನಕ್ಕೆ ಸಡಿಲಿಕೆ ಮಾಡಿದ ನಂತರ ಒಂದೊಂದೆ ಕಚೇರಿಗಳು ತೆರೆದುಕೊಂಡಿದ್ದನ್ನು ಕಂಡಿದ್ದೇವೆ. ಮನೆಯಿಂದ ವರ್ಕ್ ಸಾಕು ಆಫೀಸಿಗೆ ಬನ್ನಿ ಎಂಬ ಕರೆಯೂ ಬಂದಿದ್ದು ಇದೆ.

ಆಫೀಸಿಗೆ ಬನ್ನಿ ಎಂಬ  ಇಮೇಲ್ ಸ್ವೀಕಾರ ಮಾಡಿದ್ದ ಮಹಿಳಾ ಸಿಬ್ಬಂದಿ ಕೆಂಡಾಮಂಡಲವಾಗಿದ್ದಾರೆ.  ಆಫೀಸಿಗೆ ಹೋಗಿ ಮಾಡುವುದೇನಿದೆ.. ನಿಮ್ಮ ಕೆಲಸ ಆರಾಮಾಗಿ ನಡೆಯುತ್ತಿದೆ ಅಲ್ಲದೆ?  ಮತ್ತೇನು ನಿಮ್ಮ ಕಾಟ? ಎಂದು ಪ್ರಶ್ನೆ ಮಾಡಿದ್ದು ವಿಡಿಯೋ ವೈರಲ್ ಆಗಿದೆ.

ಮನೆಯಿಂದಲೇ ಕೆಲಸ  ಮುಂದುವರಿಸಬೇಕಾ? ಅಧ್ಯಯನ ವರದಿ

ಸ್ನಾನ ಮಾಡಿ ಸಿದ್ಧರಾಗಿ ಆಫೀಸಿಗೆ ಹೋಗಬೇಕೆ?  ಬಡವರ ಹೊಟ್ಟೆ ಮೇಲೆ ಮತ್ತೆ ಯಾಕೆ ಹೊಡೆಯುತ್ತೀರಿ..ನನ್ನ ಡಾರ್ಕ್ ಸರ್ಕಲ್ ಈಗಷ್ಟೇ ಹೋಗಿದೆ. ಟ್ಯಾನಿಂಗ್ ನಿಂದ ಮುಕ್ತಿ ಪಡೆದಿದ್ದೇನೆ. ಜೀನ್ಸ್.. ಬ್ರಾ.. ಎಲ್ಲವನ್ನು ಪ್ಯಾಕ್ ಮಾಡಿ ಬದಿಗೆ ಇಟ್ಟಿದ್ದೇನೆ. ಮತ್ತೆ ವಾಪಸ್ ಬನ್ನಿ ಎಂದರೆ ಹೇಗೆ? 

ಕೆಲವರು ಆಫೀಸಿಗೆ ಹೋಗಬೇಕು ಎಂದು ನಕಲಿ ಸಂಭ್ರಮ ತೋರುತ್ತಿದ್ದಾರೆ. ನಾನು ಏನು ಮಾಡಲು ಸಾಧ್ಯವಿಲ್ಲ ಎಂದು ಹೇಳುತ್ತಾ ಹೋಗಿದ್ದಾರೆ. 

ಇಷ್ಟೆಲ್ಲಾ ಆಗಿ ಕೊನೆಯಲ್ಲಿ ಇದು ಮನರಂಜನೆ ಉದ್ದೇಶಕ್ಕೆ ಮಾಡಿರುವ ವಿಡಿಯೋ.. ನೀವು ಎಲ್ಲಿಗೆ ಹೇಳುತ್ತಿರೋ ಅಲ್ಲಿಗೆ ಬಂದು ಕೆಲಸ ಮಾಡುತ್ತೇನೆ.. ಇದನ್ನು ತಲೆಯಲ್ಲಿ ಇಟ್ಟುಕೊಳ್ಳಬೇಡಿ ಎಂದು ಹೇಳಿದ್ದಾರೆ .(ಇದು ಕೇವಲ ಕಾಲ್ಪನಿಕ)