ಕ್ಯಾಲಿಫೋರ್ನಿಯಾ (ಅ. 30): ಅಮೆರಿಕದ ಕ್ಯಾಲಿಫೋರ್ನಿಯಾ ಮತ್ತು ಸುತ್ತಮುತ್ತಲ ಪ್ರದೇಶಗಳಲ್ಲಿ ಕಳೆದ ಕೆಲ ದಿನಗಳಿಂದ ಸಣ್ಣದಾಗಿ ಹಬ್ಬಿದ್ದ ಕಾಡ್ಗಿಚ್ಚು, ಇದೀಗ ಗಂಭೀರ ಸ್ವರೂಪ ಪಡೆದುಕೊಂಡಿದ್ದು, ಸುಮಾರು 2 ಲಕ್ಷ ಜನರನ್ನು ಸ್ಥಳಾಂತರ ಮಾಡಲಾಗಿದೆ.

ಒಟ್ಟು 17 ಪ್ರದೇಶಗಳಲ್ಲಿ ಕಾಡ್ಗಿಚ್ಚು ಹಬ್ಬಿದ್ದು, ಈವರೆಗೆ 1ಲಕ್ಷ ಎಕರೆ ಕಾಡನ್ನು ಆಹುತಿ ಪಡೆದಿದೆ. ಕಾಡಿನಲ್ಲಿದ್ದ ಲಕ್ಷಾಂತರ ಒಣಗಿದ ಮರಗಳು, ಬೆಂಕಿ ಇನ್ನಷ್ಟುವ್ಯಾಪಕಗೊಳ್ಳಲು ಕಾರಣವಾಗಿದೆ. ಲಾಸ್‌ ಏಂಜಲೀಸ್‌ನ ಗೆಟ್ಟಿಸೆಂಟರ್‌ನಿಂದ ಸುಮಾರು 10 ಸಾವಿರ ಮನೆ ಹಾಗೂ ಉದ್ಯಮಗಳನ್ನು ಸ್ಥಳಾಂತರಿಸಲಾಗಿದೆ.

ವಿಶ್ವದ 'ಶ್ವಾಸಕೋಶ' ದಲ್ಲಿ ಕಾಡ್ಗಿಚ್ಚು: ಧಗಧಗ ಉರಿಯುತ್ತಿದೆ ಅಮೆಜಾನ್ ಕಾಡು!

ವಿಪರೀತ ಬೆಂಕಿಯಿಂದ 20 ಲಕ್ಷ ಮಂದಿಗೆ ವಿದ್ಯುತ್‌ ಹಾಗೂ ಗ್ಯಾಸ್‌ ಪೂರೈಕೆ ಸ್ಥಗಿತಗೊಂಡಿದ್ದು, ಸುಮಾರು 10 ಲಕ್ಷ ಮನೆ ಹಾಗೂ ಕಂಪನಿಗಳಿಗೆ ವಿದ್ಯತ್‌ ಪೂರೈಕೆ ಇಲ್ಲದಾಗಿದೆ. 100 ಮೈಲಿ ವೇಗದಲ್ಲಿ ಗಾಳಿ ಬೀಸುತ್ತಿದ್ದು, 120 ಕಟ್ಟಡಗಳು ಬೆಂಕಿಗೆ ನಾಶವಾಗಿವೆ.

ಕ್ಯಾಲಿಫೋರ್ನಿಯಾ ಮಾಜಿ ಗವರ್ನರ್‌ ಅರ್ನಾಲ್ಡ್‌ ಶ್ವಾರ್ಗ್ನೆಗರ್‌ ಹಾಗೂ ನಟ ರಯಾನ್‌ ಫಿಲಿಪೆ ಸೇರಿ 2 ಲಕ್ಷ ಮಂದಿಯನ್ನು ಸ್ಥಳಾಂತರಗೊಳಿಸಲಾಗಿದೆ. ಒಣ ಮರಗಳಿಂದ ಬೆಂಕಿ ಹೆಚ್ಚಾಗುತ್ತಿದ್ದು, ದಟ್ಟಹೊಗೆಯಿಂದಾಗಿ ಉಸಿರಾಟಕ್ಕೂ ತೊಂದರೆಯುಂಟಾಗುತ್ತಿದೆ. ಹೆಲಿಕಾಪ್ಟರ್‌ ಸೇರಿ, ಅಗ್ನಿ ಶ್ಯಾಮಕ ದಳಗಳ ಮೂಲಕ ಬೆಂಕಿ ಶಮನ ಕಾರ್ಯ ಮುಂದುವರಿದಿದೆ.

10 ಸಾವಿರ- ಸ್ಥಳಾಂತರಿಸಿದ ಮನೆಗಳ ಸಂಖ್ಯೆ

20 ಲಕ್ಷ - ಗ್ಯಾಸ್‌ ವಿದ್ಯುತ್‌ ಸಂಪರ್ಕ ಇಲ್ಲದ ಮಂದಿ

10 ಲಕ್ಷ - ವಿದ್ಯುತ್‌ ಸಂಪರ್ಕ ವಂಚಿತ ಮನೆಗಳು

100 ಮೈಲಿ- ಇಷ್ಟುವೇಗದ ಗಾಳಿಯ ಅಬ್ಬರ

2 ಲಕ್ಷ - ಸ್ಥಳಾಂತರಿಸಲಾದ ಜನರ ಸಂಖ್ಯೆ

120- ಬೆಂಕಿಗೆ ನಾಶವಾದ ಕಟ್ಟಡಗಳು

1 ಲಕ್ಷ ಎಕರೆ - ನಾಶವಾದ ಕಾಡು