ಸಿಯಾಚಿನ್ ಸೈನಿಕರಿಗೆ ಬಟ್ಟೆಯಿಲ್ಲ, ಊಟವಿಲ್ಲ: ನೀವಿನ್ನೂ ಸಿಎಜಿ ವರದಿ ಓದಿಲ್ಲ?

ವಿಶ್ವದ ಅತಿ ಎತ್ತರದ ಯುದ್ಧಭೂಮಿ ಸಿಯಾಚಿನ್ ಗಡಿ| ಸಿಯಾಚಿನ್ ಸೈನಿಕರಿಗೆ ಸೂಕ್ತ ಆಹಾರ ಹಾಗೂ ಬಟ್ಟೆಯ ಕೊರತೆ| ಕಂಟ್ರೋಲರ್ ಮತ್ತು ಆಡಿಟರ್ ಜನರಲ್(ಸಿಎಜಿ) ವರದಿ| ರೇಷನ್ ಹಾಗೂ ಅಗತ್ಯ ಸಲಕರಣೆಗಳ ವಿತರಣೆಯಲ್ಲಿ ವಿಳಂಬ ಎಂದ ಸಿಎಜಿ| ‘2015ರಿಂದ ಸೈನಿಕರಿಗೆ ಸರಿಯಾಗಿ ರೇಷನ್, ಹಾಗೂ ಉತ್ತಮ ಸಲಕರಣೆಗಳನ್ನು ಒದಗಿಸುತ್ತಿಲ್ಲ’| ರಾಷ್ಟ್ರೀಯ ರಕ್ಷಣಾ ವಿವಿ ಸ್ಥಾಪನೆಗೆ ಏಕೆ ವಿಳಂಬ ಎಂದು ಪ್ರಶ್ನಿಸಿದ ಸಿಎಜಿ| 

CAG Report Says Clothing and Ration For Troops In Siachen Delayed

ನವದೆಹಲಿ(ಫೆ.04): ವಿಶ್ವದ ಅತಿ ಎತ್ತರದ ಯುದ್ಧಭೂಮಿ ಸಿಯಾಚಿನ್ ಗಡಿಯಲ್ಲಿ ಕರ್ತವ್ಯ ನಿರತವಾಗಿರುವ ಸೈನಿಕರಿಗೆ ಸೂಕ್ತ ಆಹಾರ ಮತ್ತು ಬಟ್ಟೆಯ ಕೊರತೆ ಇದೆ ಎಂದು ಕಂಟ್ರೋಲರ್ ಮತ್ತು ಆಡಿಟರ್ ಜನರಲ್(ಸಿಎಜಿ) ವರದಿ ಅಸಮಾಧಾನ ಹೊರಹಾಕಿದೆ.

ಲಡಾಕ್, ಸಿಯಾಚಿನ್’ನಂತಹ ಹಿಮಚ್ಛಾದಿತ ಎತ್ತರದ ಕ್ಷಿಷ್ಟಕರ ಪ್ರದೇಶಗಳಲ್ಲಿ ಸೈನಿಕರಿಗೆ ಸೂಕ್ತ ಆಹಾರ ಹಾಗೂ ಹವಾಮಾನಕ್ಕೆ ತಕ್ಕಂತ ಉಡುಪು ಬೇಕು. ಇಲ್ಲಿನ ಸೈನಿಕರು ಹಿಮ ಕನ್ನಡಕಗಳು, ಗಟ್ಟಿಯಾದ ಬೂಟುಗಳು ಹಾಗೂ ಆ ಪ್ರದೇಶಕ್ಕೆ ಹೊಂದಿಕೆಯಾಗುವ ಉಡುಪುಗಳನ್ನು  ಹೊಂದಿರಬೇಕಾಗುತ್ತದೆ. ಆದರೆ ಭಾರತೀಯ ಸೇನೆ ಇವುಗಳನ್ನು ಸರಿಯಾಗಿ, ಸೂಕ್ತ ಸಮಯಕ್ಕೆ ಒದಗಿಸುತ್ತಿಲ್ಲ ಎಂದು ಸಿಎಜಿ ವರದಿಯಲ್ಲಿ ಉಲ್ಲೇಖಿಸಲಾಗಿದೆ. 

ಸಿಯಾಚಿನ್‌ನಲ್ಲಿ ಹಿಮಪಾತ: ಇಬ್ಬರು ಸೈನಿಕರು ಹುತಾತ್ಮ!

ಭಾರತೀಯ ಸೇನೆ ಈ ಗಡಿಗಳಲ್ಲಿ ಕರ್ತವ್ಯ ನಿರತರಾಗಿರುವ ತನನ ಸೈನಿಕರಿಗೆ ಹಳೆಯ ಹಾಗೂ ಮರುಬಳಕೆ ವಸ್ತುಗಳನ್ನು ನೀಡುತ್ತಿದೆ ಎಂದು ಸಿಎಜಿ ವರದಿಯಲ್ಲಿ ಹೇಳಲಾಗಿದೆ. ಸರಿಯಾದ ಊಟದ ವ್ಯವಸ್ಥೆಯಿಲ್ಲದೆ ಸೈನಿಕರು ಪರದಾಡುತ್ತಿದ್ದಾರೆ ಎಂದು ಸಿಎಜಿ ವರದಿ ಬೆಳಕು ಚೆಲ್ಲಿದೆ.

2015ರಿಂದ ಸೈನಿಕರಿಗೆ ಸರಿಯಾಗಿ ರೇಷನ್, ಹಾಗೂ ಉತ್ತಮ ಸಲಕರಣೆಗಳನ್ನು ಒದಗಿಸುತ್ತಿಲ್ಲ. ಇದು ಸೈನಿಕರ ಕೆಲಸದ ಮೇಲೆ ದುಷ್ಪರಿಣಾಮ ಬೀರುತ್ತಿದೆ ಎಂದು ಸಿಎಜಿ ಅಸಮಾಧಾನ ಹೊರಹಾಕಿದೆ. .

1999ರಲ್ಲಿ ಕಾರ್ಗಿಲ್ ಪರಿಶೀಲನಾ ಸಮಿತಿ ಶಿಫಾರಸು ಮಾಡಿದ ಭಾರತೀಯ ರಾಷ್ಟ್ರೀಯ ರಕ್ಷಣಾ ವಿವಿ ಸ್ಥಾಪನೆಯಲ್ಲಿ ಆಗುತ್ತಿರುವ ವಿಳಂಬವನ್ನೂ ಸಿಎಜಿ ಪ್ರಶ್ನಿಸಿದೆ.

ಸಿಯಾಚಿನ್‌ನಲ್ಲಿ ಶತ್ರುಗಳ ಜೊತೆ ಮಾತ್ರವಲ್ಲ, ನಿಸರ್ಗದೊಂದಿಗೂ ಸೆಣಸಬೇಕು ಸೈನಿಕರು!

ಅಲ್ಲದೇ ರಕ್ಷಣಾ ಇಲಾಖೆ ಭೂಮಿಯ ಲೀಸ್’ನ್ನು ನವೀಕರಣ ಮಾಡಲು ವಿಳಂಬವಾಗಿದ್ದರಿಂದ, ರಕ್ಷಣಾ ಸಚಿವಾಲಯಕ್ಕೆ 25.48 ಕೋಟಿ ರೂ. ನಷ್ಟವಾಗಿರುವುದನ್ನೂ ಸಹ ಸಿಎಜಿ ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಇನ್ನು ಸಿಎಜಿ ವರದಿ ಬಹಿರಂಗವಾಗುತ್ತಿದ್ದಂತೇ ಮೋದಿ ಸರ್ಕಾರದ ಮೇಲೆ ಹರಿಹಾಯ್ದಿರುವ ಪ್ರತಿಪಕ್ಷಗಳು, ಹೋದಲ್ಲಿ ಬಂದಲ್ಲಿ ಸೈನಿಕರ ಕುರಿತು ಉದ್ದುದ್ದ ಭಾಷಣ ಮಾಡುವ ಪ್ರಧಾನಿ ಮೋದಿ ಅಸಲಿಗೆ ನಮ್ಮ ಸೈನಿಕರ ಕುರಿತು ಕಾಳಜಿ ಹೊಂದಿಲ್ಲ ಎಂದು ಕಿಡಿಕಾರಿವೆ.

Latest Videos
Follow Us:
Download App:
  • android
  • ios