ಸರ್ಕಾರದ ಕೊರೋನಾ ವೈರಸ್ ನಿಯಂತ್ರಣಕ್ಕೆ ಹೋರಾಡುತ್ತಿದೆ. ಇದರ ನಡುವೆ ದೆಹಲಿಯ ನಾರ್ತ್ ಬ್ಲಾಕ್‌ನಲ್ಲಿರುವ ಕ್ಯಾಬಿನೆಟ್ ಕಾರ್ಯದರ್ಶಿಗಳ ಕಚೇರಿ ಮೇಲ್ಛಾವಣಿ ಕುಸಿದು ಬಿದ್ದ ಘಟನೆ ನಡೆದಿದೆ.

ದೆಹಲಿ(ಜು.09): ಒಂದೆಡೆ ಕೊರೋನಾ ವೈರಸ್ ಹೋರಾಟವಾದರೆ ಮತ್ತೊಂದೆಡೆ ಆರ್ಥಿಕ ಹೊಡೆತದಿಂದ ಜನರು, ಸರ್ಕಾರ ಹೈರಾಣಾಗಿದೆ. ಇದರ ನಡುವೆ ನಾರ್ತ್ ಬ್ಲಾಕ್‌ನಲ್ಲಿರುವ ಕ್ಯಾಬಿನೆಟ್ ಕಾರ್ಯದರ್ಶಿಗಳ ಕಚೇರಿ ಮೆಲ್ಚಾವಣಿ ಕುಸಿದಿರುವ ಘಟನೆ ನಡೆದಿದೆ. ಮೆಲ್ಚಾವಣಿ ಕುಸಿತದಲ್ಲಿ ಓರ್ವ ಸಿಬ್ಬಂದಿಗೆ ಗಾಯವಾಗಿದೆ. 

ಅಂಧನಿಗಾಗಿ ಓಡೋಡಿ ಬಂದು ಬಸ್ ನಿಲ್ಲಿಸಿದ ಮಹಿಳೆ, ಮಾನವೀಯತೆಗೆ ಸಲಾಂ ಎಂದ ಜನ!.

ಕುಸಿತದಿಂದ ಗಾಯಗೊಂಡ ಸಿಬ್ಬಂದಿಗೆ ಇತರ ಸಿಬ್ಬಂದಿಗಳು ಪ್ರಥಮ ಚಿಕಿತ್ಸೆ ನೀಡುತ್ತಿರುವ ವಿಡಿಯೋ ವೈರಲ್ ಆಗಿದೆ. ಮೇಲ್ಚಾವಣಿ ಕುಸಿತದಿಂದ ಕಚೇರಿ ಕಂಪ್ಯೂಟರ್, ಮೇಜು, ಕುರ್ಚಿಗಳು ಪುಡಿ ಪುಡಿಯಾಗಿದೆ.

Scroll to load tweet…

ಬುಧವಾರ(ಜು.08) ಈ ಘಟನೆ ನಡೆದಿದೆ. ಆದರೆ ಕುಸಿತದ ಕುರಿತು ಪೊಲೀಸ್ ಅಥಾವ ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಿಲ್ಲ. ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ದೆಹಲಿ ಪೊಲೀಸ್ ಹಾಗೂ ಅಗ್ನಿಶಾಮಕ ದಳ ಜಂಟಿಯಾಗಿ ಕಾರ್ಯಚರಣೆ ನಡೆಸಿ ದಾಖಲೆಗಳನ್ನು ಇತರ ಸಾಮಾಗ್ರಿಗಳನ್ನು ಹೊರತಂದಿದೆ.