ರಾಜ್ಯಪಾಲರ ನೇಮಕ ಬೆನ್ನಲ್ಲೇ ಸಚಿವರ ಜೊತೆಗಿನ ಪ್ರಧಾನಿ ಮೋದಿ ಸಭೆ ರದ್ದು!

  • ಕರ್ನಾಟಕ ಸೇರಿ 8 ರಾಜ್ಯಕ್ಕೆ ನೂತನ ರಾಜ್ಯಪಾಲರ ನೇಮಕ
  • ಸಂಪುಟ ವಿಸ್ತರಣೆಗೆ ಎಲ್ಲಾ ತಯಾರಿ ಮಾಡಿದ ಕೇಂದ್ರ ಸರ್ಕಾರ
  • ದಿಢೀರ್ ಸಚಿವರ ಜೊತೆಗಿನ ಮಹತ್ವದ ಸಭೆ ರದ್ದು ಮಾಡಿದ ಮೋದಿ
Cabinet expansion PM Modi crucial meeting with ministers cancelled says reprort ckm

ನವದೆಹಲಿ(ಜು.06): ಕೇಂದ್ರ ಸಚಿವ ಸಂಪುಟ ವಿಸ್ತರಣೆ ಗಾಳಿ ಜೋರಾಗಿ ಬೀಸುತ್ತಿದೆ. ಇದಕ್ಕಾಗಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಎಲ್ಲಾ ತಯಾರಿ ಮಾಡಿಕೊಳ್ಳುತ್ತಿದೆ. ಇದೀಗ ಕೇಂದ್ರ ಸಚಿವರಾಗಿದ್ದ ಥಾವರ್‌ಚಂದ್ ಗೆಹ್ಲೋಟ್ ಇದೀಗ ಕರ್ನಾಟಕ ರಾಜ್ಯಪಾಲರಾಗೋ ಮೂಲಕ ಕೇಂದ್ರದ ಮತ್ತೊಂದು ಸ್ಥಾನ ಕೂಡ ಯುವ ನಾಯಕರಿಗೆ ತೆರವಾಗಿದೆ. ಸಂಪುಟ ವಿಸ್ತರಣೆ ಸೇರಿದಂತೆ ಹಲವು ಮಹತ್ವದ ವಿಚಾರಗಳ ಕುರಿತು ಚರ್ಚಿಸಲು ಪ್ರಧಾನಿ ನರೇಂದ್ರ ಮೋದಿ ಇಂದು ಕರೆದಿದ್ದ ಸಭೆ ರದ್ದು ಮಾಡಲಾಗಿದೆ ಎಂದು ಇಂಗ್ಲೀಷ್ ಮಾಧ್ಯಮಗಳು ವರದಿ ಮಾಡಿದೆ.

ಕರ್ನಾಟಕ ಸೇರಿ 8 ರಾಜ್ಯಗಳಿಗೆ ನೂತನ ರಾಜ್ಯಪಾಲರು!

ಸಂಪುಟ ವಿಸ್ತರಣೆ ಕುರಿತ ಚರ್ಚೆ ಜೋರಾಗುತ್ತಿದೆ. ಇತ್ತ ನೂತನ ರಾಜ್ಯಪಾಲರ ನೇಮಕವೂ ಹೊರಬಿದ್ದಿದೆ. ಇದರ ಬೆನ್ನಲ್ಲೇ ಪ್ರಧಾನಿ ನರೇಂದ್ರ ಮೋದಿ ಕರೆದಿದ್ದ ಮಹತ್ವದ ಸಭೆಯನ್ನು ರದ್ದು ಮಾಡಲಾಗಿದೆ. ಪ್ರಧಾನಿ ಅಧೀಕೃತ ನಿವಾಸ ಲೋಕ ಕಲ್ಯಾಣ ಮಾರ್ಗ್‌ನಲ್ಲಿ ಸಭೆ ಕರೆಯಲಾಗಿತ್ತು. 

ಈ ಸಭೆಗೆ ಕೇಂದ್ರ ಗೃಹ ಸಚಿವ ಅಮಿತ್  ಶಾ, ರಕ್ಷಣಾ ಸಚಿವ ರಾಜನಾಥ್ ಸಿಂಗ್, ಬಿಜಿಪೆ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಈ ಸಭೆಯಲ್ಲಿ ಪಾಲ್ಗೊಳ್ಳಲು ಸಜ್ಜಾಗಿದ್ದಾರೆ. ಈ ವಾರದಲ್ಲಿ ಸಂಪುಟ ವಿಸ್ತರಣೆ ನಡೆಯುವ ಸಾಧ್ಯತೆ ಇದೆ. ಹೀಗಾಗಿ ಈ ಸಭೆ ಭಾರಿ ಮಹತ್ವ ಪಡೆದುಕೊಂಡಿತ್ತು. ಆದರೆ ದಿಢೀರ್ ಸಭೆ ರದ್ದು ಮಾಡಿದ ಕಾರಣಗಳು ಬಹಿರಂಗವಾಗಿಲ್ಲ.

ರಾಜ್ಯದ ನಾಲ್ವರು ಸಂಸದರು ಕೇಂದ್ರ ಸಚಿವರಾಗಬಹುದು ಎಂದ ಬಿಜೆಪಿ ಹಿರಿಯ ನಾಯಕ

ಸಂಪುಟ ವಿಸ್ತರಣೆ ಜೊತೆಗೆ ಪುನರ್ ರಚನೆಯಾಗುವ ಸಾಧ್ಯತೆ ಇದೆ. ಸಂಪುಟ ಪುನರ್ ರಚನೆಯಲ್ಲಿ ಕಂದ್ರ ಸಚಿವರಾದ ಪಿಯೂಷ್ ಗೋಯಲ್, ನಿರ್ಮಲಾ ಸೀತಾರಾಮನ್, ಧರ್ಮೇಂದ್ರ ಪ್ರಧಾನ್, ಪ್ಲಲ್ಹಾದ್ ಜೋಶಿ ಮತ್ತು ನರೇಂದ್ರ ಸಿಂಗ್ ತೋಮರ್ ಅವರ ಖಾತೆಗಳು ಬದಲಾಗುವ ಸಾಧ್ಯತೆಗಳಿವೆ ಎಂದು ಮಾಧ್ಯಮಗಳು ವರದಿ ಮಾಡಿದೆ. 

Latest Videos
Follow Us:
Download App:
  • android
  • ios