ಹರ್ಯಾಣ ರೋಡ್ ವೇಸ್ ನಲ್ಲಿ ಕಂಡಕ್ಟರ್ ಆಗಿ ಕೆಲಸ ಮಾಡುವ ಸುರೇಂದ್ರ ಶರ್ಮ, ಬೇಸಿಗೆಯ ಸಮಯದಲ್ಲಿ ತಮ್ಮ ಬಸ್ ಏರುವ ಪ್ರಯಾಣಿಕರಿಗೆ ಟಿಕೆಟ್ ಮಾತ್ರವಲ್ಲದೆ ನೀರು ಕೂಡ ಕೊಡುತ್ತಾರೆ. ಇವರ ನಿಸ್ವಾರ್ಥ ಕಾರ್ಯದ ಬಗ್ಗೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ರೋಹ್ಟಕ್ (ಜೂನ್ 8): ಸಾಮಾಜಿಕ ಮಾಧ್ಯಮಗಳಲ್ಲಿ (Social Media) ಹುಡುಕುತ್ತಾ ಹೋದರೆ ರಂಜನೀಯ ಸುದ್ದಿಗಳೊಂದಿಗೆ, ಸ್ಫೂರ್ತಿ ತುಂಬುವ, ನಿಸ್ವಾರ್ಥ ಕೆಲಸದ ಕಾರಣದಿಂದಾಗಿ ಸುದ್ದಿಯಾಗುವ ವ್ಯಕ್ತಿಗಳ ಸಾಕಷ್ಟು ಸುದ್ದಿಗಳು ನಮಗೆ ಸಿಗುತ್ತವೆ. ಇದು ಅಂಥದ್ದೊಂದು ಸುದ್ದಿ. ಹರ್ಯಾಣ ರೋಡ್ ವೇಸ್ ನಲ್ಲಿ (Haryana Roadways) ಬಸ್ ಕಂಡಕ್ಟರ್ (Bus conductor) ಆಗಿ ಕೆಲಸ ಮಾಡುವ ಸುರೇಂದ್ರ ಶರ್ಮ (Surendra Sharma) ಅವರ ಕೆಲಸವೀಗ ಜನರ ಮೆಚ್ಚುಗೆಗೆ ಪಾತ್ರವಾಗಿದೆ.
ರೋಹ್ಟಕ್ ನ (Rohtak) ಈ ಕಂಡಕ್ಟರ್ ಬಸ್ ಏರುವ ಪ್ರಯಾಣಿಕರಿಗೆ ಟಿಕೆಟ್ ನೀಡುವುದು ಮಾತ್ರವಲ್ಲ, ಬಿಸಿಲ ದಗೆಯಿಂದ ಸುಸ್ತಾಗಿರುವ ಪ್ರಯಾಣಿಕರಿಗೆ ನೀರು ನೀಡುತ್ತಾರೆ. ಹಾಗಂತ ಕಂಡಕ್ಟರ್ ಗಳು ನೀರು ನೀಡಬೇಕೆಂಬ ನಿಯಮವೇನೂ ಹರ್ಯಾಣದಲ್ಲಿಲ್ಲ. ಆದರೆ, ಸ್ವಯಂಪ್ರೇರಣೆಯಿಂದ ಸುರೇಂದ್ರ ಶರ್ಮ ಈ ಕೆಲಸ ಮಾಡುತ್ತಿದ್ದಾರೆ.
ಐಎಎಸ್ ಅಧಿಕಾರಿ ಅವನೀಶ್ ಶರಣ್, ಸುರೇಂದ್ರ ಶರ್ಮ ಅವರ ಕಥೆಯನ್ನು ಟ್ವಿಟರ್ ನಲ್ಲಿ ಬರೆದು ಪೋಸ್ಟ್ ಮಾಡಿದ್ದಾರೆ. "ಪ್ರಯಾಣಿಕರು ಬಸ್ ಏರಿದ ಬೆನ್ನಲ್ಲಿಯೇ ಕಂಡಕ್ಟರ್ ಅವರಿಗೆ ಮೊದಲು ನೀಡುವುದು ಒಂದು ಲೋಟ ನೀರು. ಕಳೆದ 12 ವರ್ಷಗಳಿಂದಲೂ ಇವರು ತಮ್ಮ ಕೆಲಸದ ವೇಳೆ ಇಂಥದ್ದೊಂದು ಪರಿಪಾಠವನ್ನು ಬೆಳೆಸಿಕೊಂಡು ಬಂದಿದ್ದಾರೆ' ಎಂದು ಟ್ವೀಟ್ ಮಾಡಿದ್ದಾರೆ.
ಈ ಪೋಸ್ಟ್ ಅನ್ನು ಕೆಲವು ದಿನಗಳ ಹಿಂದೆಯೇ ಟ್ವಿಟರ್ ನಲ್ಲಿ ಹಂಚಿಕೊಳ್ಳಲಾಗಿದೆ. ಅಂದಿನಿಂದ ಇಲ್ಲಿಯವರೆಗೂ ಅಂದಾಜು 9 ಸಾವಿರಕ್ಕೂ ಅಧಿಕ ಮಂದಿ ಇದಕ್ಕೆ ಲೈಕ್ ನೀಡಿದ್ದಾರೆ. ಅದರಲ್ಲೂ ಸುರೇಂದ್ರ ಶರ್ಮ ಅವರ ಈ ಕೆಲಸ ಸಾಮಾಜಿಕ ಮಾಧ್ಯಮಗಳಲ್ಲಿ ಮೆಚ್ಚುಗೆಗೆ ಪಾತ್ರವಾಗಿದೆ. ಕೆಲವೊಬ್ಬರಿ ಕಾಮೆಂಟ್ ಗಳಲ್ಲಿಯೇ ಸುರೇಂದ್ರ ಶರ್ಮ ಅವರ ಕೆಲಸವನ್ನು ಮೆಚ್ಚಿ ಬರೆದಿದ್ದಾರೆ.
ಸಮಾಜದಲ್ಲಿ ಇಂಥ ಒಳ್ಳೆಯ ವ್ಯಕ್ತಿಗಳು ಇರುವುದನ್ನು ನೋಡಿದಾಗ ನಾನು ಬಹಳ ಪ್ರೇರಣೆಗೊಳ್ಳುತ್ತೇನೆ ಎಂದು ಟ್ವಿಟರ್ ನಲ್ಲಿ ಒಬ್ಬರು ಕಾಮೆಂಟ್ ಮಾಡಿದ್ದಾರೆ. ಇನ್ನೂ ಕೆಲವರು ತಾವು ಹರ್ಯಾಣ ರೋಡ್ ವೇಸ್ ನ ಈ ಬಸ್ ನಲ್ಲಿ ಪ್ರಯಾಣ ಮಾಡಿದ್ದು, ಸುರೇಂದ್ರ ಶರ್ಮ ಅವರು ಪ್ರಯಾಣಿಕರಿಗೆ ನೀರು ನೀಡುತ್ತಿರುವುದನ್ನು ನೋಡಿದ್ದೇವೆ ಎಂದು ಹೇಳುವ ಮೂಲಕ ಅವನೀಶ್ ಶರಣ್ ಅವರ ಟ್ವೀಟ್ ನಲ್ಲಿ ನೀಡಿದ್ದ ಮಾಹಿತಿಯನ್ನು ಖಚಿತಪಡಿಸಿದ್ದಾರೆ.
ಇನ್ನೊಬ್ಬ ವ್ಯಕ್ತಿ, ಸುರೇಂದ್ರ ಶರ್ಮ ನನಗೆ ನೀರು ನೀಡಿದ್ದು ಮಾತ್ರವಲ್ಲ. ಬಸ್ ನಲ್ಲಿ ಕಂಡಕ್ಟರ್ ಗಾಗಿಯೇ ಮೀಸಲಿದ್ದ ಸೀಟ್ ಅನ್ನು ತಮಗೆ ನೀಡಿದ್ದರು ಎಂದು ಬರೆದುಕೊಂಡಿದ್ದಾರೆ. "ನಿಮ್ಮ ಮನೆಬಾಗಿಲಿಗೆ ಬರುವವರಿಗೆ, ವ್ಯಕ್ತಿಯ ಪರಿಚಯವಿಲ್ಲದೆ ನೀರು ಒದಗಿಸುವುದು ನಮ್ಮ ಸಂಪ್ರದಾಯದ ಭಾಗವಾಗಿದೆ' ಅಂಥದ್ದೊಂದು ಕೆಲಸ ಮಾಡುತ್ತಿರುವ ಸುರೇಂದ್ರ ಶರ್ಮ ಅವರಿಗೆ ಕೃತಜ್ಞತೆಗಳು ಎಂದು ಇನ್ನೊಬ್ಬ ವ್ಯಕ್ತಿ ಬರೆದಿದ್ದಾರೆ. ಸುರೇಂದ್ರ ಶರ್ಮ ಅವರ ಕಾರಣದಿಂದಾಗಿ, ಇನ್ನೂ ಕೆಲವು ಕಂಡಕ್ಟರ್ ಗಳು ಕೂಡ ಇದೇ ಕೆಲಸಗಳನ್ನು ಮಾಡುತ್ತಿದ್ದಾರೆ ಎಂದು ಇನ್ನೊಬ್ಬರು ಪ್ರತಿಕ್ರಿಯಿಸಿದ್ದಾರೆ.
POLICE VS PUBLIC ತ್ರಿಬಲ್ ರೈಡ್ ಸ್ಕೂಟಿ ನಿಲ್ಲಿಸಿದ ಪೊಲೀಸ್‌ಗೆ ಮಹಿಳೆ ಸೇರಿ ಸಾರ್ವಜನಿಕರಿಂದ ಥಳಿತ!
ಅವರೊಬ್ಬರೇ ಅಲ್ಲ ಆ ಕಡೆಯಲ್ಲಿ ಅನೇಕ ಒಳ್ಳೆಯ ಮನಸ್ಸುಗಳಿವೆ, ನಾನು ಸುಮಾರು 4 ವರ್ಷಗಳಿಂದ ಅದೇ ಪ್ರದೇಶದಲ್ಲಿ ಪ್ರಯಾಣಿಸಿದ್ದೇನೆ ಮತ್ತು ಅಂತಹ ಉದಾರ ವ್ಯಕ್ತಿಗಳನ್ನು ಅನೇಕ ಬಾರಿ ನೋಡಿದ್ದೇನೆ, ಕೆಲವೊಮ್ಮೆ ಹಳ್ಳಿಗರು ಸಿಹಿ ಸುಣ್ಣದ ನೀರು ಮತ್ತು ಕಲ್ಲಂಗಡಿಗಳನ್ನು ವಿತರಿಸಲು ಬಸ್ಸುಗಳನ್ನು ನಿಲ್ಲಿಸಿದರು. ಇದು ಭಾರತದ ನಿಜವಾದ ಸೌಂದರ್ಯ ಎಂದು ವ್ಯಕ್ತಿಯೊಬ್ಬ ಬರೆದಿದ್ದಾನೆ.
ಪರೋಡಿ ವಿಡಿಯೋ ಬಲೆಗೆ ಬಿದ್ದು ಕತಾರ್ ಏರ್ ವೇಸ್ ಮುಖ್ಯಸ್ಥನಿಗೆ ಮೂರ್ಖ ಎಂದ ಕಂಗನಾ!
"ಇದು ಅವರು ಒಳ್ಳೆಯ ಮನುಷ್ಯ ಎಂದು ತೋರಿಸುತ್ತದೆ. ಹಾಗೂ ತಾವು ಮಾಡುತ್ತಿರುವ ಕೆಲಸದ ಬಗ್ಗೆ ಅಪಾರ ಹೆಮ್ಮೆಯನ್ನು ತೆಗೆದುಕೊಳ್ಳುತ್ತದೆ!" ಎಂದು ಇನ್ನೊಬ್ಬರು ಕಾಮೆಂಟ್ ಮಾಡಿದ್ದಾರೆ. "ಹೌದು ಅವರು ಇದನ್ನು ಮಾಡುವುದನ್ನು ನಾನೇ ನೋಡಿದ್ದೇನೆ. ಆ ದಿನ ಅದು ತುಂಬಾ ಸಖೆಯ ವಾತಾವರಣವಿತ್ತು ಮತ್ತು ಬಸ್ ನಿಜವಾಗಿಯೂ ಕೆಟ್ಟ ಸ್ಥಿತಿಯಲ್ಲಿತ್ತು.ಕೆಟ್ಟ ರಸ್ತೆಯಲ್ಲಿ ಬಸ್ ಹೋಗುತ್ತಿದ್ದರೆ, ಸುರೇಂದ್ರ ಶರ್ಮ ನಮಗೆಲ್ಲರಿಗೂ ನೀರು ನೀಡುತ್ತಿದ್ದರು ಎಂದು ಇನ್ನೊಬ್ಬರು ಬರೆದುಕೊಂಡಿದ್ದಾರೆ.
