ಪರೋಡಿ ವಿಡಿಯೋವನ್ನೇ ನಿಜವೆಂದು ನಂಬಿದ ಪದ್ಮಶ್ರೀ ಪ್ರಶಸ್ತಿ ವಿಜೇತೆ, ಬಾಲಿವುಡ್ ನಟಿ ಕಂಗನಾ ರಾಣಾವತ್, "ಇಂಥ ವ್ಯಕ್ತಿಯನ್ನು ಹುರಿದುಂಬಿಸುವ" ಜನರಿಗೆ ಕೋಪದಿಂದ ತಮ್ಮ ಪ್ರತಿಕ್ರಿಯೆಯನ್ನು ನೀಡಿದ್ದಾರೆ.
ನವದೆಹಲಿ (ಜೂನ್ 8): ತಮ್ಮ ವಿವಾದಿತ ಹೇಳಿಕೆಗಳಿಂದ ಸಾಮಾನ್ಯವಾಗಿ ಸುದ್ದಿಯಲ್ಲಿರುವ ಬಾಲಿವುಡ್ ನಟಿ ಕಂಗನಾ ರಾಣಾವತ್ (Kangana Ranaut), ಕತಾರ್ ಏರ್‌ವೇಸ್ ಸಿಇಒ ಅಕ್ಬರ್ ಅಲ್ ಬೇಕರ್ (Qatar Airways CEO Akbar Al Baker) ಅವರನ್ನು ವಿಡಂಬನೆ ಮಾಡಿದ ವಿಡಿಯೋವನ್ನು ನಿಜವೆಂದು ನಂಬಿ, "ಈಡಿಯಟ್ ವ್ಯಕ್ತಿ' ಎಂದು ಪ್ರತಿಕ್ರಿಯೆ ನೀಡಿದ್ದಾರೆ. ಇದರ ಬೆನ್ನಲ್ಲಿಯೇ ಕಂಗನಾ ರಾಣಾವತ್ ಇಂಟರ್ನೆಟ್ ನಲ್ಲಿ ಟ್ರೋಲಿಗರ ಆಹಾರವಾಗಿದ್ದಾರೆ.
ಪ್ರವಾದಿ ಮುಹಮ್ಮದ್ ಬಗ್ಗೆ ಇಬ್ಬರು ಬಿಜೆಪಿ ನಾಯಕರ ಅವಹೇಳನಕಾರಿ ಹೇಳಿಕೆಗಳ ಕಾರಣಕ್ಕಾಗಿ ಭಾರತವು ಅಂತಾರಾಷ್ಟ್ರೀಯ ಮಟ್ಟದಲ್ಲಿ ದೊಡ್ಡ ಮಟ್ಟದಲ್ಲಿ ಮುಜುಗರಕ್ಕೆ ಈಡಾಗಿತ್ತು. ಇದರ ಬೆನ್ನಲ್ಲಿಯೇ ಭಾರತದಲ್ಲಿ ಕತಾರ್ ಏರ್ ವೇಸ್ ಅನ್ನು ಬಹಿಷ್ಕರಿಸುವಂತೆ ಟ್ವಿಟರ್ ನಲ್ಲಿ ದೊಡ್ಡ ಮಟ್ಟದಲ್ಲಿ ಟ್ರೆಂಡ್ ಆಗುತ್ತಿದೆ.
ವಾಸುದೇವ್ ಎನ್ನುವ ವ್ಯಕ್ತಿ ಕೂಡ ಟ್ವಿಟರ್ ನಲ್ಲಿ ಕತಾರ್ ಏರ್ ವೇಸ್ ಅನ್ನು ಬಾಯ್ಕಾಟ್ ಮಾಡುವಂತೆ ಪೋಸ್ಟ್ ಮಾಡಿದ್ದರು. ಇದಕ್ಕೆ ಪ್ರತಿಕ್ರಿಯೆಯಾಗಿ ಅಹಾದ್ (@AhadunAhad11111) ಎನ್ನುವ ವ್ಯಕ್ತಿ ಪರೋಡಿ ವಿಡಿಯೋವೊಂದನ್ನು ಮಾಡಿ ಪೋಸ್ಟ್ ಮಾಡಿದ್ದರು. ಈ ವಿಡಿಯೋ ತುಂಬಾ ಜನಪ್ರಿಯವಾಗಿತ್ತು. ಇದನ್ನು ನಿಜವೆಂದು ನಂಬಿದ್ದ ಕಂಗನಾ ರಾಣಾವತ್, ಕತಾರ್ ಏರ್ ವೇಸ್ ಮುಖ್ಯಸ್ಥನನ್ನು ಈಡಿಯಟ್ ವ್ಯಕ್ತಿ ಎಂದು ಟೀಕಿಸಿದ್ದರು.
ಕ್ಲಿಪ್‌ನಲ್ಲಿ, ವಾಸುದೇವ್ ಅವರು "ಹಿಂದೂ ದೇವತೆಗಳ ನಗ್ನ ಚಿತ್ರಗಳನ್ನು ಚಿತ್ರಿಸಿದ್ದಾರೆ" ಎಂದು ಹೇಳುವ ವರ್ಣಚಿತ್ರಕಾರ ಎಂಎಫ್ ಹುಸೇನ್‌ಗೆ ಕತಾರ್ ಆಶ್ರಯ ನೀಡಿದೆ ಎಂದು ಹೇಳಿದ್ದಾರೆ. (ಬಿಜೆಪಿಯ ಮಾಜಿ ವಕ್ತಾರ) ನೂಪುರ್ ಶರ್ಮಾ ಅವರ ಹೇಳಿಕೆಗಳ ಬಗ್ಗೆ ಅದೇ ಕತಾರ್ ನಮಗೆ ಬೋಧಿಸುತ್ತಿದೆ ಎಂದು ಅವರು ಹೇಳುತ್ತಾರೆ, ವಿವಾದದ ಕುರಿತು ಕತಾರ್‌ನಲ್ಲಿ ಭಾರತೀಯರನ್ನು ವಜಾ ಮಾಡಲಾಗಿದೆ ಎಂದು ಹೇಳಲಾದ ಕತಾರ್ ಮತ್ತು ಕತಾರ್ ಏರ್‌ವೇಸ್‌ನ ಉತ್ಪನ್ನಗಳನ್ನು ಬಹಿಷ್ಕರಿಸುವಂತೆ ವೀಕ್ಷಕರನ್ನು ಒತ್ತಾಯಿಸಿದರು.
ಈ ಪೋಸ್ಟ್ ಗೆ ಪ್ರತಿಕ್ರಿಯೆಯಾಗಿ ಅಹಾದ್ (Ahad), ಅಲ್ ಜಜೀರಾ ವಾಹಿನಿಗೆ (Al Jazeera) ಕತಾರ್ ಏರ್ ವೇಸ್ ಚೀಫ್ ನೀಡಿದ್ದ ಸಂದರ್ಶನದ ವಿಡಿಯೋವನ್ನು ಬಳಸಿಕೊಂಡು, ತಮ್ಮ ದನಿಯಲ್ಲಿ ಅದರ ವಿಚಾರಗಳನ್ನು ಬದಲಿಸಿದ್ದರು. ವಾಸುದೇವ್ ಅವರು ಕತಾರ್ ಏರ್ ವೇಸ್ ಬಾಯ್ಕಾಟ್ ಮಾಡಿ ಎಂದು ಹೇಳಿದಾಗಲಿಂದ ನಮ್ಮ ಸಂಸ್ಥೆಗೆ ನಷ್ಟವಾಗಿದೆ. ನಾನು ವೈಯಕ್ತಿಕವಾಗಿ ಅವರಿಗೆ ಈ ಬಾಯ್ಕಾಟ್ ಅಭಿಯಾನವನ್ನು ಹಿಂತೆಗೆದುಕೊಳ್ಳುವಂತೆ ಮನವಿ ಮಾಡಿದ್ದೇನೆ. ಬೇಕಾದರೆ, ಅವರಿಗೆ ಟಿಕ್ ಟಾಕ್ ವಿಡಿಯೋ ಮಾಡಲು ಒಂದು ಪ್ಲೇನ್ ಅನ್ನು ನೀಡಲು ಸಿದ್ಧರಿದ್ದೇವೆ ಎಂದು ಅಕ್ಬರ್ ಅಲ್ ಬೇಕರ್ ದನಿಯಲ್ಲಿ ಡಬ್ಬಿಂಗ್ ಮಾಡಿದ್ದರು.
"ವಾಸುದೇವ್ ಒಟ್ಟು ₹ 624.50 ಹೂಡಿಕೆಯೊಂದಿಗೆ ನಮ್ಮ ದೊಡ್ಡ ಷೇರುದಾರರಾಗಿದ್ದಾರೆ. ಇನ್ನು ಮುಂದೆ ಹೇಗೆ ಕಾರ್ಯನಿರ್ವಹಿಸಬೇಕೆಂದು ನಮಗೆ ತಿಳಿದಿಲ್ಲ. ನಾವು ಎಲ್ಲಾ ವಿಮಾನಗಳನ್ನು ಕೆಳಗಿಳಿಸುತ್ತಿದ್ದೇವೆ. ನಮ್ಮ ಕಾರ್ಯಾಚರಣೆಗಳು ಇನ್ನು ಮುಂದೆ ನಡೆಯುತ್ತಿಲ್ಲ. ಈ ಬಹಿಷ್ಕಾರದ ಕರೆಯನ್ನು ಹಿಂದಕ್ಕೆ ತೆಗೆದುಕೊಳ್ಳುವಂತೆ ನಾವು ವಾಸುದೇವ್ ಅವರನ್ನು ವಿನಂತಿಸುತ್ತಿದ್ದೇವೆ," ಎಂದು ಸ್ವತಃ ಕತಾರ್ ಏರ್ ವೇಸ್ ಮುಖ್ಯಸ್ಥ ಹೇಳುತ್ತಿರುವ ರೀತಿಯಲ್ಲಿ ಡಬ್ಬಿಂಗ್ ಮಾಡಲಾಗಿತ್ತು.
ವಾಸುದೇವ್ ಅವರು ಈ ವೀಡಿಯೊವನ್ನು ಹಂಚಿಕೊಳ್ಳುವಾಗ ಬಾಯ್ಕಾಟ್ (boycott ) ಎನ್ನುವ ಪದದ ಸ್ಪೆಲ್ಲಿಂಗ್ ಅನ್ನು bycott ಎಂದು ಬರೆದಿದ್ದರು. ಇದನ್ನೂ ಕೂಡ ಕ್ಲಿಪ್ ನಲ್ಲಿ ಫನ್ ಮಾಡಲಾಗಿತ್ತು. "ಇದು ವಿಶೇಷ ರೀತಿಯ ಬಹಿಷ್ಕಾರ ಏಕೆಂದರೆ ಇದು ಬಿ-ವೈ-ಸಿ-ಒ-ಟಿ-ಟಿ. ವಾಶುದೇವ್ ಹಬೀಬಿ, ನಿಮ್ಮ ಟಿಕ್‌ಟಾಕ್ ವೀಡಿಯೊಗಳನ್ನು ಮಾಡಲು ನಾವು ನಿಮಗೆ ಒಂದು ಸಂಪೂರ್ಣ ವಿಮಾನವನ್ನು ನೀಡಲು ಸಿದ್ಧರಿದ್ದೇವೆ ಅಥವಾ ಬಹುಶಃ ನಾವು ನಿಮಗೆ ಎರಡು ಲೀಟರ್ ಪೆಟ್ರೋಲ್ ಅನ್ನು ಉಚಿತವಾಗಿ ನೀಡಬಹುದು" ಎಂದು ಡಬ್ಬಿಂಗ್ ವೀಡಿಯೊದಲ್ಲಿ ಅಕ್ಬರ್ ಅಲ್ ಬೇಕರ್ ಹೇಳಿದಂತೆ ಡಬ್ಬಿಂಗ್ ಮಾಡಲಾಗಿದೆ.
'ಧಾಕಡ್' ಹೀನಾಯ ಸೋಲಿನಿಂದ ಕಂಗಾಲಾಗಿರುವ ನಟಿ ಕಂಗನಾಗೆ OTTಯಿಂದ ಬಿಗ್ ಶಾಕ್
ಪರೋಡಿ ವಿಡಿಯೋವನ್ನೇ ನಿಜವೆಂದು ನಂಬಿದ ಪದ್ಮಶ್ರೀ ಪ್ರಶಸ್ತಿ ವಿಜೇತೆ, ಬಾಲಿವುಡ್ ನಟಿ 35 ವರ್ಷದ ಕಂಗನಾ ರಾಣಾವತ್, "ಇಂಥ ವ್ಯಕ್ತಿಯನ್ನು ಹುರಿದುಂಬಿಸುವ" ಜನರಿಗೆ ಕೋಪದಿಂದ ತಮ್ಮ ಪ್ರತಿಕ್ರಿಯೆಯನ್ನು ನೀಡಿದ್ದಾರೆ. "ಬಡವನೊಬ್ಬನನ್ನು ಗೇಲಿ ಮಾಡಿದ್ದಕ್ಕಾಗಿ ಇಂಥ ವ್ಯಕ್ತಿಯನ್ನು ಹುರಿದುಂಬಿಸುವ ಎಲ್ಲಾ ತಥಾಕಥಿತ ಭಾರತೀಯರು ಇದನ್ನು ನೆನಪಿಸಿಕೊಳ್ಳುತ್ತಾರೆ, ಏಕೆಂದರೆ ಈ ಅಧಿಕ ಜನಸಂಖ್ಯೆಯ ದೇಶದಲ್ಲಿ ನೀವೆಲ್ಲರೂ ದೊಡ್ಡ ಹೊರೆ ಆಗಿದ್ದೀರಿ" ಎಂದು ಅವರು ತಮ್ಮ ಇನ್‌ಸ್ಟಾಗ್ರಾಮ್ ಸ್ಟೋರಿಗಳಲ್ಲಿ ಬರೆದುಕೊಂಡಿದ್ದರು.
ಕಂಗನಾ ಧಾಕಡ್‌ಗೆ ಹೀನಾಯ ಸೋಲು; ಮೊದಲ ದಿನವೇ ಚಿತ್ರಮಂದಿರಗಳು ಖಾಲಿ ಖಾಲಿ
ಈ ಮೂರ್ಖನಿಗೆ ಬಡವನನ್ನು ಬೆದರಿಸುವುದರಲ್ಲಿ ನಾಚಿಕೆ ಇಲ್ಲ, ಜಗತ್ತಿನಲ್ಲಿ ಅವನ ಅತ್ಯಲ್ಪ ಮತ್ತು ಸ್ಥಾನವನ್ನು ಅಪಹಾಸ್ಯ ಮಾಡುತ್ತಾನೆ. "ವಾಸುದೇವ್ ನಿಮ್ಮಂತಹ ಶ್ರೀಮಂತರಿಗೆ ಬಡವ ಮತ್ತು ಅತ್ಯಲ್ಪವಾಗಿರಬಹುದು ಆದರೆ ಯಾವುದೇ ಸಂದರ್ಭದಲ್ಲಿ ತನ್ನ ದುಃಖ, ನೋವು ಮತ್ತು ನಿರಾಶೆಯನ್ನು ವ್ಯಕ್ತಪಡಿಸುವ ಹಕ್ಕಿದೆ ... ಈ ಪ್ರಪಂಚದ ಆಚೆಗೆ ನಾವೆಲ್ಲರೂ ಸಮಾನರು ಎಂದು ನೆನಪಿಡಿ. .," ಎಂದು ತಮ್ಮ ಸ್ಟೋರಿಗಳಲ್ಲಿ ಬರೆದುಕೊಂಡಿದ್ದಾರೆ. ಆದರೆ, ಇದು ಪರೋಡಿ ವಿಡಿಯೋ ಎಂದು ಗೊತ್ತಾದ ಬಳಿಕ, ಕಂಗನಾ ರಾಣಾವತ್ ತಮ್ಮ ಇನ್ಸ್ ಟಾಗ್ರಾಮ್ ಸ್ಟೋರೀಸ್ ಗಳನ್ನು ಡಿಲೀಟ್ ಮಾಡಿದ್ದಾರೆ.
