Asianet Suvarna News Asianet Suvarna News

Watch video: ಟೈರ್‌ ಸ್ಫೋಟಗೊಂಡು 20 ಅಡಿ ಎತ್ತರದಿಂದ ನದಿಗೆ ಬಿದ್ದ ಬಸ್!

ಪ್ರಯಾಣಿಕರನ್ನು ಹೊತ್ತೊಯ್ಯುತ್ತಿದ್ದ ಸಾರಿಗೆ ಬಸ್ ನಿಯಂತ್ರಣ ಕಳೆದುಕೊಂಡು ನದಿಗೆ ಬಿದ್ದ ದುರ್ಘಟನೆ ಮಧ್ಯಪ್ರದೇಶದ ರೊಡಿಯಾ ಗ್ರಾಮದಲ್ಲಿ ಗುರುವಾರ ನಡೆದಿದೆ.

Bus carrying passengers falls into river in Khargone madhyapradesh video viral rav
Author
First Published Sep 29, 2023, 4:24 PM IST

ಮಧ್ಯಪ್ರದೇಶ (ಸೆ.29): ಪ್ರಯಾಣಿಕರನ್ನು ಹೊತ್ತೊಯ್ಯುತ್ತಿದ್ದ ಸಾರಿಗೆ ಬಸ್ ನಿಯಂತ್ರಣ ಕಳೆದುಕೊಂಡು ನದಿಗೆ ಬಿದ್ದ ದುರ್ಘಟನೆ ಮಧ್ಯಪ್ರದೇಶದ ರೊಡಿಯಾ ಗ್ರಾಮದಲ್ಲಿ ಗುರುವಾರ ನಡೆದಿದೆ.

ಬಸ್‌ನಲ್ಲಿ 25 ಮಂದಿ ಪ್ರಯಾಣಿಕರಿದ್ದರು, ಈ ಪೈಕಿ ಆರು ಮಂದಿ ಗಾಯಗೊಂಡಿದ್ದಾರೆ. ಯಾವುದೇ ಸಾವು ಸಂಭವಿಸಿದ ಬಗ್ಗೆ ವರದಿಯಾಗಿಲ್ಲ. ಗಾಯಗೊಂಡವರನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿದೆ.

Raichur: ಬೈಕ್ ಮತ್ತು ಬಸ್ ಡಿಕ್ಕಿಯಾಗಿ ಜಮೀನಿನಲ್ಲಿ ಉರುಳಿ ಬಿದ್ದ ಬಸ್: 30 ಜನ​ರಿಗೆ ಗಾಯ

ವರದಿಗಳ ಪ್ರಕಾರ, ನಿನ್ನೆ ಗುರುವಾರ ಸಂಜೆ ವೇಳೆ ಎತ್ತರದ ಸೇತುವೆ ಮೇಲೆ ಸಂಚರಿಸುತ್ತಿದ್ದ ಬಸ್. ತಿರುವು ತೆಗೆದುಕೊಳ್ಳುತ್ತಿರುವಾಗ ಬಸ್ಸಿನ ಟೈರ್ ಸ್ಫೋಟಗೊಂಡಿದೆ. ಬಸ್ಸಿನ ಚಾಲಕ ನಿಯಂತ್ರಣ ಕಳೆದುಕೊಂಡಿದ್ದಾನೆ. 20 ಅಡಿ ಎತ್ತರದ ಮೋರಿಯಿಂದ ನದಿಗೆ ಬಿದ್ದಿದೆ. 

ಇದೇ ವೇಳೆ ಬಸ್ಸಿನ ಹಿಂದೆ ಬರುತ್ತಿದ್ದ ಮತ್ತೊಂದು ವಾಹನದ ಡ್ಯಾಶ್ ಕ್ಯಾಮರಾದಲ್ಲಿ ಘಟನೆ ಸೆರೆಯಾಗಿದೆ.  ಅಧಿಕಾರಿಗಳು ಸ್ಥಳೀಯರ ನೆರವಿನೊಂದಿಗೆ ರಕ್ಷಣಾ ಕಾರ್ಯಾಚರಣೆ ನಡೆಸಿದ್ದಾರೆ. ಏತನ್ಮಧ್ಯೆ, ಅಪಘಾತದ ವಿಡಿಯೋ ಕ್ಲಿಪ್ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

Follow Us:
Download App:
  • android
  • ios