ಉಜ್ಜಯಿನಿಯಲ್ಲಿ 12 ವರ್ಷದ ಬಾಲಕಿಯ ಮೇಲಿನ ಅತ್ಯಾಚಾರ ಪ್ರಕರಣದಲ್ಲಿ ಬಂಧಿತನಾಗಿರುವ ಆಟೋ ಚಾಲಕ 'ಅಕ್ರಮವಾಗಿ ನಿರ್ಮಿಸಿದ' ಮನೆಯನ್ನು ಗುರುವಾರ ಬುಲ್ಡೋಜರ್ ಬಳಸಿ ಕೆಡವಲಾಗಿದೆ.
ನವದೆಹಲಿ (ಅ.4): ಕಳೆದ ವಾರ ದೇಶವನ್ನೇ ಬೆಚ್ಚಿಬೀಳಿಸಿದ ಉಜ್ಜಯಿನಿ ಅತ್ಯಾಚಾರ ಪ್ರಕರಣದಲ್ಲಿ,12 ವರ್ಷದ ಬಾಲಕಿಯ ಅಮಾನುಷ ರೇಪ್ ನಡೆಸಿದ್ದ ಪ್ರಮುಖ ಆರೋಪಿ ಭರತ್ ಸೋನಿ ಅವರಿಗೆ ಸೇರಿದ “ಅಕ್ರಮವಾಗಿ ನಿರ್ಮಿಸಿದ” ಮನೆಯನ್ನು ಮಧ್ಯಪ್ರದೇಶ ಸರ್ಕಾರ ಬುಧವಾರ ಬುಲ್ಡೋಜರ್ ಬಳಸಿ ಶ್ವಂಸ ಮಾಡಿದೆ. ವರದಿಗಳ ಪ್ರಕಾರ, ಉಜ್ಜಯಿನಿಯ ನನಖೇಡ ಪ್ರದೇಶದಲ್ಲಿ ಸರ್ಕಾರಿ ಸ್ವಾಮ್ಯದ ಜಮೀನಿನಲ್ಲಿ ನಿರ್ಮಿಸಲಾಗಿದ್ದ ಮನೆಯನ್ನು ಅಧಿಕಾರಿಗಳು ಬುಧವಾರ ತೆರವು ಮಾಡಿದ್ದಾರೆ. ನಂತರ, "ಅಕ್ರಮ" ನಿರ್ಮಾಣವನ್ನು ನೆಲಕ್ಕೆ ಕೆಡವಲು ಬುಲ್ಡೋಜರ್ ಅನ್ನು ಪ್ರದೇಶಕ್ಕೆ ತರಲಾಗಿತ್ತು. ವೃತ್ತಿಯಲ್ಲಿ ಆಟೋರಿಕ್ಷಾ ಚಾಲಕನಾಗಿದ್ದ ಭರತ್ ಸೋನಿ ಎಂಬಾತನನ್ನು ಕಳೆದ ವಾರ ಬಂಧಿಸಲಾಗಿದೆ. 12 ವರ್ಷದ ಬಾಲಕಿಯನ್ನು ಭರತ್ ಸೋನಿ ಅತ್ಯಾಚಾರ ಮಾಡಿದ್ದ. ಅಪ್ರಾಪ್ತ ಬಾಲಕಿ ಚಿಂದಿ ಬಟ್ಟೆಯನ್ನು ಮೈಮೇಲೆ ಸುತ್ತಿಕೊಂಡು ತಾನು ಹೋಗುವ ದಾರಿಯುದ್ಧಕ್ಕೂ ಸಿಕ್ಕಿದ್ದ ಮನೆಯಲ್ಲಿ ಸಹಾಯ ಬೇಡಿದ್ದಳು. ಆದರೆ, ಆಕೆಯನ್ನು ಕಂಡೊಡನೆ, ನಾಯಿ ಓಡಿಸುವ ರೀತಿಯಲ್ಲಿ ಮನೆಯ ಎದುರಿನಿಂದ ಓಡಿಸಿದ್ದರು. ಅಂದಾಜು 8 ಕಿ.ಮೀ ಹೀಗೆ ಪ್ರಯಾಣಿಸಿದ ಈಕೆಗೆ ಬಳಿಕ ದೇವಸ್ಥಾನದ ಅರ್ಚಕ ಸಹಾಯ ಮಾಡಿದ್ದ. ಈ ನಡುವೆ ಪೊಲೀಸರು ಭರತ್ ಸೋನಿ ಮಾತ್ರವಲ್ಲದೆ, ಆಕೆಗೆ ಸಹಾಯ ಮಾಡಲು ನಿರಾಕರಿಸಿದ ಮನೆಯವರ ಮೇಲೂ ಕೇಸ್ ಹಾಕಲು ನಿರ್ಧಾರ ಮಾಡಿದ್ದಾರೆ.
ಈಕೆ ದಾರಿಯಲ್ಲಿ ನಡೆದುಕೊಂಡು ಹೋಗಿದ್ದ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಭಾರಿ ವೈರಲ್ ಆಗಿತ್ತು. ಸೆ. 25 ರಂದು ಇದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು. ರಕ್ತ ಸೋರುತ್ತಿದ್ದ ಕಾರಣಕ್ಕೆ ಅರೆಬೆತ್ತಲೆಯಲ್ಲಿಯೇ ಆಕೆ ಮನೆ ಬಾಗಿಲಿಗೆ ಹೋಗಿದ್ದರೆ, ಸ್ಥಳೀಯರು ಕನಿಷ್ಠ ಸಹಾಯ ಮಾಡಲು ಕೂಡ ನಿರಾಕರಿಸಿದ್ದರು.
ವರದಿಗಳ ಪ್ರಕಾರ, ಮುನ್ಸಿಪಲ್ ಕಾರ್ಪೊರೇಷನ್ ನನಖೇಡಾದಲ್ಲಿ ಆಟೋ ಚಾಲಕ ಭರತ್ ಸೋನಿ ಅವರ ಮನೆಯನ್ನು ಸಂಪೂರ್ಣವಾಗಿ ನೆಲಸಮಗೊಳಿಸಿದೆ. ಈ ವೇಳೆ ಮಹಾನಗರ ಪಾಲಿಕೆ ಹಾಗೂ ಸ್ಥಳೀಯ ಪೊಲೀಸರ ತಂಡ ಸ್ಥಳದಲ್ಲಿಯೇ ಇತ್ತು. ಶಾಂತಿಯುತವಾಗಿ ಕ್ರಮ ಕೈಗೊಳ್ಳಲಾಗಿದೆ. ಆರೋಪಿ ಭರತ್ ಸೋನಿ ಸರ್ಕಾರಿ ಜಾಗವನ್ನು ಒತ್ತುವರಿ ಮಾಡಿಕೊಂಡು ಧಾರ್ಮಿಕ ಸ್ಥಳ ಹಾಗೂ ಮನೆ ಕಟ್ಟಿಕೊಂಡಿದ್ದರು ಎಂದು ತಿಳಿಸಿದ್ದಾರೆ.
ಉಜ್ಜಯಿನಿ ರೇಪ್ ಕೇಸ್: ಪೋಷಕರೊಂದಿಗೆ ಮುನಿಸಿಕೊಂಡು ಮನೆ ತೊರೆದಿದ್ದ ರೇಪ್ ಸಂತ್ರಸ್ತೆ
12 ವರ್ಷದ ಬಾಲಕಿಯ ಮೇಲಿನ ಘೋರ ಅಪರಾಧದ ಆರೋಪಿ ಭರತ್ ಸೋನಿಗೆ ಆದಷ್ಟು ಬೇಗ ಶಿಕ್ಷೆಯಾಗುವಂತೆ ಮಾಡಲು ಪ್ರಯತ್ನಗಳು ನಡೆಯುತ್ತಿವೆ. ಇದಕ್ಕಾಗಿ ಸಾಧ್ಯವಿರುವ ಎಲ್ಲ ಪ್ರಯತ್ನಗಳನ್ನು ಮಾಡಲಾಗುತ್ತಿದೆ. ಮಧ್ಯಪ್ರದೇಶ ಪೊಲೀಸರು ವೈಜ್ಞಾನಿಕ ಪುರಾವೆಗಳನ್ನು ಸಂಗ್ರಹಿಸಲು ಪ್ರಯತ್ನಿಸುತ್ತಿದ್ದಾರೆ. ಅದೇ ಸಮಯದಲ್ಲಿ, ಆರೋಪಿಯ ತಂದೆ ಈ ನಾಚಿಕೆಗೇಡಿನ ಕೃತ್ಯಕ್ಕೆ ಮರಣದಂಡನೆ ವಿಧಿಸಬೇಕೆಂದು ಒತ್ತಾಯಿಸಿದ್ದಾರೆ. ಮಾಧ್ಯಮದವರೊಂದಿಗೆ ಮಾತನಾಡಿದ ಅವರು, 'ನನ್ನ ಮಗನನ್ನು ಭೇಟಿ ಮಾಡಲು ನಾನು ಎಲ್ಲಿಗೂ ಹೋಗುವುದಿಲ್ಲ. ನನ್ನ ಮಗನನ್ನು ಗಲ್ಲಿಗೇರಿಸಬೇಕು ಎಂದು ಹೇಳಿದ್ದಾರೆ.
Watch: 12 ವರ್ಷದ ಬಾಲಕಿಯ ರೇಪ್, ಬೆತ್ತಲೆಯಾಗಿ ನಡೆದುಬಂದ ಬಾಲಕಿಗೆ ಸಹಾಯ ಮಾಡಲು ನಿರಾಕರಿಸಿದ ಜನ!
