Watch: 12 ವರ್ಷದ ಬಾಲಕಿಯ ರೇಪ್, ಬೆತ್ತಲೆಯಾಗಿ ನಡೆದುಬಂದ ಬಾಲಕಿಗೆ ಸಹಾಯ ಮಾಡಲು ನಿರಾಕರಿಸಿದ ಜನ!
ಉಜ್ಜಯನಿಯಿಂದ 15 ಕಿಲೋಮೀಟರ್ ದೂರದಲ್ಲಿರುವ ಬದ್ನಾಗರ್ ರೋಡ್‌ನಲ್ಲಿ ಈ ಅಮಾನವೀಯ ಘಟನೆ ನಡೆದಿದ್ದು, ಘಟನೆಯ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿದೆ. ಈ ವಿಡಿಯೋ ಕೂಡ ವೈರಲ್ ಆಗಿದೆ.
ಉಜ್ಜಯನಿ (ಸೆ. 27): ಮಣಿಪುರದಲ್ಲಿ ಮಹಿಳೆಯರ ರೇಪ್ ಘಟನೆ ದೇಶವನ್ನು ಸಂಚಲನ ಸೃಷ್ಟಿಸಿದ್ದ ಬಳಿಕ ಅದೇ ರೀತಿಯ ಘಟನೆ ಮಧ್ಯಪ್ರದೇಶದ ಉಜ್ಜಯನಿಯಲ್ಲಿ ನಡೆದಿದೆ. ಇಲ್ಲಿ 12 ವರ್ಷದ ಬಾಲಕಿಯ ಮೇಲೆ ಕಾಮುಕರು ಅತ್ಯಾಚಾರ ಮಾಡಿದ್ದಾರೆ. ದೈಹಿಕ ಹಿಂಸೆ ಅನುಭವಿಸಿದ ಬಳಿಕ ಬಾಲಕಿ ಅರೆಬೆತ್ತಲೆಯಾಗಿ ರಕ್ತಸಿಕ್ತ ದೇಹದೊಂದಿಗೆ ನಡೆದುಬರುತ್ತಿದ್ದು, ತಾನು ಬರವ ಮಾರ್ಗದಲ್ಲಿದ್ದ ಪ್ರತಿ ಮನೆಯ ಬಾಗಿಲಿಗೂ ಹೋಗಿ ಸಹಾಯಕ್ಕೆ ಅಂಗಲಾಚಿದ್ದಾಳೆ. ಈ ವೇಳೆ ಮನೆಯ ಮುಂದೆ ನಿಂತಿದ್ದ ವ್ಯಕ್ತಿಗಳು ಆಕೆಯನ್ನು ನೋಡುತ್ತಿದ್ದರೆ, ಹೊರತು, ಮಾನವೀಯತೆ ಮೆರೆದು ಕನಿಷ್ಠ ಸಹಾಯ ಮಾಡುವ ಗೋಜಿಗೂ ಹೋಗಲಿಲ್ಲ. ಅದರಲ್ಲೂ ಒಬ್ಬ ವ್ಯಕ್ತಿಯ ಬಳಿ ಆಕೆ ಸಹಾಯ ಕೇಳು ಬಂದಾಗ ಆತ ನಾಯಿಯನ್ನು ಓಡಿಸುವಂತೆ ಆಕೆಯನ್ನು ಓಡಿಸಿರುವ ಘಟನೆ ನಡೆದಿದೆ. ಮಹಿಳೆಯರು ಮತ್ತು ಅಪ್ರಾಪ್ತ ವಯಸ್ಕರ ಮೇಲಿನ ದೌರ್ಜನ್ಯಗಳು ಸಾಮಾನ್ಯವಾಗಿರುವ ಸಮಾಜವನ್ನು ಈ ದೃಶ್ಯಗಳು ಬೆಚ್ಚಿ ಬೀಳಿಸಿದೆ. ಮಧ್ಯಪ್ರದೇಶದ ಉಜ್ಜಯಿನಿಯಿಂದ ಸುಮಾರು 15 ಕಿಮೀ ದೂರದಲ್ಲಿರುವ ಬದ್‌ನಗರ ರಸ್ತೆಯಲ್ಲಿರುವ ಸಿಸಿಟಿವಿ ಕ್ಯಾಮೆರಾದಲ್ಲಿ ಇದರ ಪೂರ್ತಿ ವಿಡಿಯೋ ಸೆರೆಯಾಗಿದೆ.
ಒಂದು ಸಣ್ಣ ಬೆಡ್ ಶೀಟ್‌ನಲ್ಲಿ ತನ್ನ ದೇಹವನ್ನು ಆಕೆ ಅರ್ಧಂಬರ್ಧವಾಗಿ ಮುಚ್ಚಿಕೊಂಡಿದ್ದು ಬೀದಿಯಲ್ಲಿ ಅಲೆದಾಡುತ್ಥಾ ಕೊನೆಗೆ ಆಶ್ರಮವನ್ನು ತಲುಪಿದ್ದಾಳೆ. ಅಲ್ಲಿನ ಅರ್ಚಕರೊಬ್ಬರು ಈಕೆಯ ಮೇಲೆ ಅತ್ಯಾಚಾರ ಆಗಿರುವ ಶಂಕೆ ವ್ಯಕ್ತಪಡಿಸಿದ್ದಲ್ಲದೆ, ಆಕೆಯ ದೇಹವನ್ನು ಮುಚ್ಚಿ ಜಿಲ್ಲಾಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ವೈದ್ಯಕೀಯ ಪರೀಕ್ಷೆಯಲ್ಲಿ ಆಕೆಯ ಮೇಲೆ ಅತ್ಯಾಚಾರವಾಗಿರುವ ಖಚಿತವಾಗಿದೆ. ಆಕೆಗೆ ಆಗಿರುವ ಗಾಯಗಳು ಗಂಭೀರವಾಗಿದ್ದ ಕಾರಣ, ಬಾಲಕಿಯನ್ನು ಇಂದೋರ್‌ನ ಆಸ್ಪತ್ರೆಗೆ ಸ್ಥಳಾಂತರ ಮಾಡಲಾಗಿದೆ. ಈ ವೇಳೆ ಆಕೆಗೆ ರಕ್ತದ ಅಗತ್ಯವಿತ್ತು. ಪೊಲೀಸ್ ಸಿಬ್ಬಂದಿಯೊಬ್ಬರು ಆಕೆಗೆ ರಕ್ತ ನೀಡಿದ್ದಾರೆ. ಈಕೆಯ ಸ್ಥಿತಿ ಈಗ ಸ್ಥಿರವಾಗಿದೆ ಎಂದು ಆಸ್ಪತ್ರೆಯ ಮೂಲಗಳು ತಿಳಿಸಿವೆ. ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಹುಡುಗಿಯ ಹೆಸರು ಮತ್ತು ವಿಳಾಸವನ್ನು ಕೇಳಿದಾಗ, ಅವಳಿಗೆ ಸರಿಯಾಗಿ ಉತ್ತರಿಸಲು ಸಾಧ್ಯವಾಗಿಲ್ಲ.
ಪೊಲೀಸರು ಘಟನೆಗೆ ಸಂಬಂಧಪಟ್ಟಂತೆ ಅನಾಮಿಕ ವ್ಯಕ್ತಿಯ ವಿರುದ್ಧ ರೇಪ್ ಕೇಸ್ ದಾಖಲು ಮಾಡಿದ್ದಾರೆ. ಲೈಂಗಿಕ ಅಪರಾಧಗಳಿಂದ ಮಕ್ಕಳ ಕಟ್ಟುನಿಟ್ಟಿನ ರಕ್ಷಣೆ (ಪೋಕ್ಸೊ) ಕಾಯ್ದೆಯನ್ನು ಸಹ ಅನ್ವಯಿಸಲಾಗಿದೆ. ಆದಷ್ಟು ಬೇಗ ಆರೋಪಿಗಳನ್ನು ಪತ್ತೆ ಹಚ್ಚಲು ವಿಶೇಷ ತಂಡವನ್ನು ರಚಿಸಲಾಗಿದೆ ಎಂದು ಉಜ್ಜಯಿನಿ ಪೊಲೀಸ್ ಮುಖ್ಯಸ್ಥ ಸಚಿನ್ ಶರ್ಮಾ ತಿಳಿಸಿದ್ದಾರೆ. "ವೈದ್ಯಕೀಯ ಪರೀಕ್ಷೆಯು ಅತ್ಯಾಚಾರವನ್ನು ದೃಢಪಡಿಸಿದೆ. ನಾವು ವಿಶೇಷ ತನಿಖಾ ತಂಡವನ್ನು (ಎಸ್‌ಐಟಿ) ರಚಿಸಿದ್ದೇವೆ ಮತ್ತು ಇದನ್ನು ನಿಕಟವಾಗಿ ಅನುಸರಿಸುತ್ತಿದ್ದೇವೆ. ಯಾವುದೇ ಮಾಹಿತಿ ಸಿಕ್ಕರೆ ಪೊಲೀಸರಿಗೆ ತಿಳಿಸುವಂತೆ ನಾವು ಜನರಿಗೆ ಮನವಿ ಮಾಡಿದ್ದೇವೆ' ಎಂದು ಶರ್ಮ ತಿಳಿಸಿದ್ದಾರೆ.
ಮೊಬೈಲ್‌ನಲ್ಲಿ ಅಶ್ಲೀಲ ವಿಡಿಯೋ ನೋಡುತ್ತಿದ್ದ ಪ್ರಭಾವ, 7 ವರ್ಷದ ಬಾಲಕನಿಂದ 5 ವರ್ಷದ ಬಾಲಕಿಯ ರೇಪ್
ಅಪರಾಧ ನಡೆದ ಸ್ಥಳದ ಪ್ರಶ್ನೆಗೆ, ಅಧಿಕಾರಿಯು, "ಈ ಬಗ್ಗೆ ತನಿಖೆ ನಡೆಸಲಾಗುತ್ತಿದೆ, ನಾವು ಶೀಘ್ರದಲ್ಲೇ ಹೆಚ್ಚಿನ ಮಾಹಿತಿ ನೀಡಲಿದ್ದೇವೆ' ಎಂದಿದ್ದಾರೆ. "ಹುಡುಗಿಯು ಎಲ್ಲಿಂದ ಬಂದವಳು ಎಂದು ನಮಗೆ ನಿಖರವಾಗಿ ಹೇಳಲು ಸಾಧ್ಯವಾಗಲಿಲ್ಲ. ಆದರೆ ಅವಳ ಉಚ್ಚಾರಣೆಯು ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ನವಳು ಎಂದು ಸೂಚಿಸುತ್ತದೆ" ಎಂದು ತಿಳಿಸಿದ್ದಾರೆ.
ಗಂಡು ಮಗು ಆಗ್ಲಿ ಅಂತ ಹೆಣ್ಣು ಮಕ್ಕಳ ಮೇಲೆ ಸತತ 10 ವರ್ಷ ರೇಪ್ ಮಾಡಿದ ನೀಚ ತಂದೆ!