Asianet Suvarna News Asianet Suvarna News

ಬುದ್ಧ ಜನ್ಮಸ್ಥಳದಲ್ಲಿ ಭಾರತೀಯ ಕೇಂದ್ರಕ್ಕೆ ಶಂಕು, ಇದೇ ಮೊದಲ ಬಾರಿಗೆ ಪ್ರಾತಿನಿಧ್ಯ!

* ಇಂಡಿಯಾ ಇಂಟರ್‌ನ್ಯಾಷನಲ್‌ ಸೆಂಟರ್‌ ಫಾರ್‌ ಬುದ್ಧಿಸ್ಟ್‌ ಕಲ್ಚರ್‌ ಅಂಡ್‌ ಹೆರಿಟೇಜ್‌ಗೆ ಶಿಲಾನ್ಯಾಸ

* ಬುದ್ಧ ಜನ್ಮಸ್ಥಳದಲ್ಲಿ ಭಾರತೀಯ ಕೇಂದ್ರಕ್ಕೆ ಶಂಕು

* ಇದೇ ಮೊದಲ ಬಾರಿಗೆ ಭಾರತಕ್ಕೆ ಪ್ರಾತಿನಿಧ್ಯ

* ಪ್ರಧಾನಿ ನರೇಂದ್ರ ಮೋದಿ ಪ್ರಯತ್ನದ ಫಲ

Buddhism provides India a cultural inroad in Nepal pod
Author
Bangalore, First Published May 17, 2022, 10:43 AM IST | Last Updated May 17, 2022, 10:43 AM IST

ಲುಂಬಿನಿ(ಮೇ.17): ಗೌತಮ ಬುದ್ಧನ ಜನ್ಮಸ್ಥಳವಾದ ನೇಪಾಳದ ಲುಂಬಿನಿ ನಿರ್ಮಿಸಲಾಗುತ್ತಿರುವ ‘ಇಂಡಿಯಾ ಇಂಟರ್‌ನ್ಯಾಷನಲ್‌ ಸೆಂಟರ್‌ ಫಾರ್‌ ಬುದ್ಧಿಸ್ಟ್‌ ಕಲ್ಚರ್‌ ಅಂಡ್‌ ಹೆರಿಟೇಜ್‌’ ಕೇಂದ್ರಕ್ಕೆ ಭಾರತದ ಪ್ರಧಾನಿ ನರೇಂದ್ರ ಮೋದಿ ಮತ್ತು ನೇಪಾಳದ ಪ್ರಧಾನಿ ಶೇರ್‌ ಬಹಾದೂರ್‌ ದೇವುಬಾ ಸೋಮವಾರ ಶಂಕುಸ್ಥಾಪನೆ ನೆರವೇರಿಸಿದರು. ಬುದ್ಧನ ಜನ್ಮದಿನವಾದ ಬುದ್ಧ ಪೂರ್ಣಿಮೆಯಂದು ಇಲ್ಲಿನ ಲುಂಬಿನಿ ಆಶ್ರಮ ಪ್ರದೇಶದಲ್ಲಿ ಭವ್ಯವಾದ ಭಾರತೀಯ ಬೌದ್ಧ ಕೇಂದ್ರಕ್ಕೆ ಅಡಿಗಲ್ಲು ಹಾಕಲಾಯಿತು.

ಬೌದ್ಧಧರ್ಮ ಹುಟ್ಟಿದ್ದು ಭಾರತದಲ್ಲಿ. ಹೀಗಾಗಿ ಜಗತ್ತಿನಾದ್ಯಂತ ಇರುವ ಬೌದ್ಧರಿಗೆ ಭಾರತವೆಂದರೆ ಪುಣ್ಯಭೂಮಿ. ಆದರೆ, ಬೌದ್ಧಧರ್ಮದ ಸಂಸ್ಥಾಪಕನಾದ ಭಗವಾನ್‌ ಬುದ್ಧನ ಜನ್ಮಸ್ಥಳವಾದ ನೇಪಾಳದ ಲುಂಬಿನಿಯಲ್ಲಿ ನಾನಾ ದೇಶಗಳ ಕೇಂದ್ರಗಳು ಇದ್ದರೂ ಭಾರತದ ಕೇಂದ್ರವೇ ಈವರೆಗೆ ಇರಲಿಲ್ಲ. ಪ್ರಧಾನಿ ನರೇಂದ್ರ ಮೋದಿ ಅವರ ಸತತ ಪ್ರಯತ್ನದಿಂದಾಗಿ ಇದೀಗ ಅಂತಹುದೊಂದು ಕೇಂದ್ರ ಸಾಕಾರವಾಗಲಿದೆ.

ಭವ್ಯ ಕೇಂದ್ರ:

ಪೂರ್ಣಗೊಂಡ ಮೇಲೆ ಈ ಕೇಂದ್ರವು ಬೌದ್ಧ ಧರ್ಮದ ಆಧ್ಯಾತ್ಮಿಕ ಸಂಗತಿಗಳನ್ನು ಪ್ರಚುರಪಡಿಸುವ ಜಾಗತಿಕ ದರ್ಜೆಯ ಭವ್ಯ ಸೌಧವಾಗಲಿದೆ. ಭಾರತ ಹಾಗೂ ಜಗತ್ತಿನೆಲ್ಲೆಡೆಯಿಂದ ಲುಂಬಿನಿಗೆ ಬರುವ ಪ್ರವಾಸಿಗರಿಗೆ ಈ ಕೇಂದ್ರವು ಆಕರ್ಷಣೆಯ ತಾಣವಾಗಲಿದೆ. ಇಲ್ಲಿ ಪ್ರಾರ್ಥನಾ ಮಂದಿರ, ಧ್ಯಾನ ಕೇಂದ್ರ, ಗ್ರಂಥಾಲಯ, ಪ್ರದರ್ಶನ ಕೇಂದ್ರ, ಕೆಫೆಟೇರಿಯಾ, ಕಚೇರಿಗಳು ಹಾಗೂ ಇನ್ನಿತರ ಸೌಕರ್ಯಗಳಿರಲಿವೆ. ವಿದ್ಯುತ್‌, ನೀರು ಹಾಗೂ ತ್ಯಾಜ್ಯ ನಿರ್ವಹಣೆಯಲ್ಲಿ ಇದು ಶೂನ್ಯ ವೆಚ್ಚದ ಕಟ್ಟಡವಾಗಿರಲಿದೆ. ನವದೆಹಲಿಯ ಅಂತಾರಾಷ್ಟ್ರೀಯ ಬುದ್ಧಿಸ್ಟ್‌ ಒಕ್ಕೂಟವು ಇದನ್ನು ನಿರ್ಮಿಸಲಿದ್ದು, ನೇಪಾಳ ಸರ್ಕಾರ ಜಾಗ ನೀಡಿದೆ.

‘ಉಭಯ ಪ್ರಧಾನಿಗಳು ಇಂಡಿಯಾ ಇಂಟರ್‌ನ್ಯಾಷನಲ್‌ ಕೇಂದ್ರಕ್ಕೆ ಶಂಕುಸ್ಥಾಪನೆ ನೆರವೇರಿಸುವ ಮೂಲಕ ಭಾರತ ಹಾಗೂ ನೇಪಾಳದ ಸಾಂಸ್ಕೃತಿಕ ಸಂಬಂಧವನ್ನು ಇನ್ನೊಂದು ಸ್ತರಕ್ಕೆ ಕೊಂಡೊಯ್ದಿದ್ದಾರೆ’ ಎಂದು ಭಾರತದ ವಿದೇಶಾಂಗ ಇಲಾಖೆ ಹೇಳಿದೆ.

ಶಿಲಾನ್ಯಾಸ ಕಾರ್ಯಕ್ರಮವನ್ನು ಬೌದ್ಧಧರ್ಮದ ಮೂರು ಪಂಥಗಳಾದ ತೇರಾಪಂಥ, ಮಹಾಯಾನ ಹಾಗೂ ವಜ್ರಯಾನದ ಮೂರೂ ಸನ್ಯಾಸಿಗಳು ನಡೆಸಿಕೊಟ್ಟಿದ್ದು ವಿಶೇಷವಾಗಿತ್ತು.

ಕೇಂದ್ರದ ವೈಶಿಷ್ಟ್ಯ

- 80 ್ಡ 80 ಮೀ. ವ್ಯಾಪ್ತಿ, 68000 ಚದರಡಿ ಜಾಗದಲ್ಲಿ ಬೌದ್ಧ ಕೇಂದ್ರ

- ಭಗವಾನ್‌ ಬುದ್ಧನ 7 ಹೆಜ್ಜೆ ಬಿಂಬಿಸುವ 7 ಪದರಗಳ ವಿಶಿಷ್ಟವಿನ್ಯಾಸ

- ಇದರಲ್ಲಿ ಇರಲಿದೆ ವಸತಿ, ಧ್ಯಾನ ಕೇಂದ್ರ, ಗ್ರಂಥಾಲಯ, ಸಭಾಂಗಣ

- ಭಾರತದ ಬೌದ್ಧ ಪರಂಪರೆ ಜಗತ್ತಿಗೆ ಪ್ರಚುರಪಡಿಸುವ ಕೇಂದ್ರ ಇದು

- ದಿಲ್ಲಿಯ ಇಂಟರ್‌ನ್ಯಾಷನಲ್‌ ಬುದ್ಧಿಸ್ಟ್‌ ಕಾನ್ಫಡರೇಷನ್‌ನಿಂದ ನಿರ್ಮಾಣ

Latest Videos
Follow Us:
Download App:
  • android
  • ios