ಪಾನಿಪುರಿ ಆಸೆಯಿಂದ ಕೆಲಸ ಕಳೆದುಕೊಂಡ ಬಸ್ ಚಾಲಕ

ಇಲ್ಲೊಬ್ಬ ಪಾನಿಪುರಿ ಪ್ರಿಯ  ಬಸ್  ಚಾಲಕ ಪಾನಿಪುರಿ ತಿನ್ನುವುದಕ್ಕಾಗಿಯೇ ಬಸ್‌ನ್ನು ರಸ್ತೆ ಪಕ್ಕಾ ನಿಲ್ಲಿಸಿ ಈಗ ಕೆಲಸಕ್ಕೆ ಕುತ್ತು ತಂದುಕೊಂಡಿದ್ದಾನೆ.  ಗುಜರಾತ್‌ನ ಅದಲಾಜ್ ಎಂಬಲ್ಲಿ ಈ ಘಟನೆ ನಡೆದಿದೆ. 

BRTS driver suspended after he went to eat panipuri on duty akb

ಅಹ್ಮದಾಬಾದ್: ಪಾನಿಪುರಿ ಎಂದ್ರೆ ಯಾರಿಗೆ ಇಷ್ಟ ಇಲ್ಲ ಹೇಳಿ ಪಾನಿಪುರಿ ಕಂಡ ಕೂಡಲೇ ಬಾಯಲ್ಲಿ ನೀರೂರಿಸುತ್ತಾ ಪಾನಿಪುರಿವಾಲಾ ನೀಡುವ ಪಾನಿಪುರಿಗಾಗಿ ಆತನ ಮುಂದೆ ಕಪ್ ಹಿಡಿದು ನಿಂತು ಹೊಟ್ಟೆತುಂಬಾ ಪಾನಿಪುರಿ ತಿನ್ನುವುದಕ್ಕಿಂತ ಖುಷಿ ಪಾನಿಪುರಿ ಪ್ರಿಯರಿಗೆ ಬೇರೆ ಇಲ್ಲ. ಪಾನಿಪುರಿಗಾಗಿ ಕೆಲವರು ಏನು ಬೇಕಾದರೂ ಮಾಡಲು ಸಿದ್ದರಿರ್ತಾರೆ. ಹಾಗೆಯೇ  ಇಲ್ಲೊಬ್ಬ ಪಾನಿಪುರಿ ಪ್ರಿಯ  ಬಸ್  ಚಾಲಕ ಪಾನಿಪುರಿ ತಿನ್ನುವುದಕ್ಕಾಗಿಯೇ ಬಸ್‌ನ್ನು ರಸ್ತೆ ಪಕ್ಕಾ ನಿಲ್ಲಿಸಿ ಈಗ ಕೆಲಸಕ್ಕೆ ಕುತ್ತು ತಂದುಕೊಂಡಿದ್ದಾನೆ.  ಗುಜರಾತ್‌ನ ಅದಲಾಜ್ ಎಂಬಲ್ಲಿ ಈ ಘಟನೆ ನಡೆದಿದೆ. 

ಕರ್ತವ್ಯದಲ್ಲಿರುವಾಗಲೇ ಬಿಆರ್‌ಟಿಎಸ್ ಬಸ್ ಚಾಲಕನಿಗೆ ಪಾನಿಪುರಿ ತಿನ್ನುವ ಉತ್ಕಟ ಆಸೆಯಾಗಿದ್ದು, ಇದಕ್ಕಾಗಿ ಆತ ತನ್ನ ಕೆಲಸದ ಬಗ್ಗೆಯೂ ಯೋಚಿಸದೇ, ಬಸ್‌ ಪೂರ್ತಿ ತುಂಬಿದ್ದ ಜನರನ್ನು ಕೂಡ ಗಣನೆಗೆ ತೆಗೆದುಕೊಳ್ಳದೇ ರೆಸಿಡೆನ್ಶಿಯಲ್ ಸೊಸೈಟಿಯೊಂದರ ಮುಂದೆ ಬಸ್ ನಿಲ್ಲಿಸಿದ ಆತ ಸೀದಾ ಹೋಗಿ ಪಾನಿಪುರಿ ವಾಲಾನ ಮುಂದೆ ನಿಂತಿದ್ದಾನೆ. 10 ನಿಮಿಷಗಳಲ್ಲಿ ಆತ ವಾಪಾಸ್ ಬಂದಿದ್ದರೂ, ಕರ್ತವ್ಯದ ನಡುವೆ ಬಸ್ ನಿಲ್ಲಿಸಿ ಪಾನಿಪುರಿ ತಿನ್ನಲು ಹೋದ ಆತನ ವರ್ತನೆ ಬಗ್ಗೆ ಸಿಟ್ಟಿಗೆದ್ದ ಪ್ರಯಾಣಿಕರು ಮೇಲಾಧಿಕಾರಿಗಳಿಗೆ ದೂರು ನೀಡಿದ್ದಾರೆ, ಪರಿಣಾಮ ಆತನಿಗೆ ಅಮಾನತಿನ ಶಿಕ್ಷೆಯಾಗಿದೆ. 

Pani Puri Shawarma: ದೇವರೇ ಕಾಪಾಡಬೇಕು! ಪಾನಿಪುರಿಗೆ ಈತ ಏನೆಲ್ಲಾ ಹಾಕಿದಾನೆ ನೋಡಿ

ಕಳೆದ ಶನಿವಾರ ಈ ಘಟನೆ ನಡೆದಿದ್ದು,  ಈತ ಪಾನಿಪುರಿ ತಿನ್ನುತ್ತಿರುವುದನ್ನು ಯಾರೂ ವೀಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹಾಕಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕೂಡಲೇ ಎಚ್ಚೆತ್ತುಕೊಂಡ ಅಧಿಕಾರಿಗಳು ಆತನಿಗೆ ಅಮಾನತಿನ ಶಿಕ್ಷೆ ನೀಡಿದ್ದಾರೆ. ಹೀಗೆ ಪಾನಿಪುರಿ ಆಸೆಯಿಂದ ಕೆಲಸ ಕಳೆದುಕೊಂಡ ಬಸ್ ಚಾಲಕನನ್ನು ನಿಲೇಶ್ ಪರ್ಮರ್ ಎಂದು ಗುರುತಿಸಲಾಗಿದೆ. ಇವರು ಬಿಆರ್‌ಟಿಎಸ್ ಬಸ್ ಚಾಲಕರಾಗಿದ್ದು, ಅವರು ಝುಂದಾಲ್ ತ್ರಿಮಂದಿರ್  ಮಾರ್ಗದಲ್ಲಿ ಬಸ್ ಚಾಲನೆ ಮಾಡುತ್ತಿದ್ದರು.  ಪಾನಿಪುರಿ ತಿನ್ನುವ ಆಸೆಯಿಂದ ಸ್ವಾಗತ್ ಸಿಟಿ ಸೊಸೈಟಿ ಬಳಿ ಬಸ್ ನಿಲ್ಲಿಸಿದ ಅವರು ಅಲ್ಲೇ ರಸ್ತೆ ಬದಿ ಪಾನಿಪುರಿ ತಿನ್ನಲು ಮುಂದಾಗಿದ್ದಾರೆ. ಹೀಗಾಗಿ ಬಸ್‌ನಲ್ಲಿದ್ದ ಪ್ರಯಾಣಿಕರಿಗೆ 10 ನಿಮಿಷ ವಿಳಂಬವಾಗಿದೆ. 

ಹೀಗಾಗಿ ಸಿಟ್ಟಿಗೆದ್ದ ಒಬ್ಬ ಪ್ರಯಾಣಿಕ ಚಾಲನ ನಿಲೇಶ್ ಫರ್ಮರ್ ಪಾನಿಪುರಿ ತಿನ್ನುತ್ತಿರುವ ವಿಡಿಯೋವನ್ನು ಸಾಮಾಜಿಕ ಜಾಲತಾಣಕ್ಕೆ ಅಪ್‌ಲೋಡ್ ಮಾಡಿದ್ದಾರೆ.  ಈ ವಿಡಿಯೋದಿಂದಾಗಿ ಅಧಿಕಾರಿಗಳಿಗೆ ಈ ವಿಚಾರ ತಿಳಿದಿದ್ದು, ಬಸ್ ಚಾಲಕನಿಗೆ 1000 ಸಾವಿರ ರೂಪಾಯಿ ದಂಡ ವಿಧಿಸಿ ಅಮಾನತು ಮಾಡಿದ್ದಾರೆ. ಈ ವಿಚಾರವನ್ನು ಬಿಆರ್‌ಟಿಎಸ್ ಜನ್ಮಾರ್ಗ್ ಲಿಮಿಟೆಡ್‌ನ  ಸಹಾಯಕ ಕಮೀಷನರ್ ವಿಶಾಲ್ ಖನಾಮ್ ಖಚಿತಪಡಿಸಿದ್ದಾರೆ. 

ಬೀದಿಬದಿ ಪಾನಿಪುರಿ ತಿಂದ ಕೊರಿಯನ್‌ ಯೂಟ್ಯೂಬರ್ ಏನು ಹೇಳಿದ ನೋಡಿ: ವೈರಲ್

Latest Videos
Follow Us:
Download App:
  • android
  • ios