ಸಮುದ್ರದಲ್ಲಿ ಉಗ್ರರ ದಾಳಿ ಹೆಚ್ಚಾಗುತ್ತಿದೆ. ಒಂದರ ಹಿಂದೆ ಮತ್ತೊಂದರಂತೆ ದಾಳಿ ನಡೆಯುತ್ತಿದೆ. ಇದೀಗ 22 ಭಾರತೀಯ ಸಿಬ್ಬಂದಿಗಳಿದ್ದ ಬ್ರಿಟಿಷ್ ಮೂಲದ ಹಡಗಿನ ಮೇಲೆ ಹೌಥಿ ಉಗ್ರರು ಕ್ಷಿಪಣಿ ದಾಳಿ ನಡೆಸಿದ್ದಾರೆ. ತಕ್ಷಣವೇ ಕಾರ್ಯಪ್ರವೃತ್ತರಾದ ವಿಶಾಖಪಟ್ಟಣಂನ ಐನ್‌ಎಸ್ ವಿಕ್ರಾಂತ್ ಸ್ಥಳಕ್ಕೆ ದೌಡಾಯಿಸಿ ರಕ್ಷಣೆ ನೀಡಿದೆ.
ನವದೆಹಲಿ(ಜ.27) ಬ್ರಿಟಿಷ್ ಮೂಲಕ ಮರ್ಲಿನ್ ಲೌಂಡಾ ತೈಲ ತುಂಬಿದ ಹಡಗಿನ ಮೇಲೆ ಹೌಥಿ ಉಗ್ರರು ದಾಳಿ ನಡೆಸಿದ್ದಾರೆ. ಕ್ಷಿಪಣಿ ದಾಳಿ ಮೂಲಕ ಮರ್ಲಿನ್ ಲೌಂಡ್ ಹಡಗು ಹೊತ್ತಿ ಉರಿದಿದೆ. ಗಲ್ಫ್ ಆಫ್ ಏಡನ್ ಸಮುದ್ರದಲ್ಲಿ ಈ ದಾಳಿ ನಡೆದಿದೆ. ಮಾಹಿತಿ ತಿಳಿಯುತ್ತಿದ್ದಂತೆ ವಿಶಾಖಪಟ್ಟಣಂನಲ್ಲಿ ನಿಯೋಜನೆಗೊಂಡ ಐಎನ್ಎಸ್ ವಿಕ್ರಾಂತ್ ಯುದ್ಧ ನೌಕೆ ನೆರವಿಗೆ ಧಾವಿಸಿ ಹಡಗಿಗೆ ಭದ್ರತೆ ನೀಡಿದೆ. ಹೌಥಿ ಉಗ್ರರ ಮೇಲೆ ಅಮೆರಿಕ ಹಾಗೂ ಬ್ರಿಟನ್ ಸಮರ ಸಾರಿದೆ. ಇದರ ವಿರುದ್ಧ ಸಿಡಿದೆದ್ದಿರುವ ಹೌಥಿ ಉಗ್ರರು ಬ್ರಿಟನ್, ಅಮೆರಿಕಕ್ಕೆ ಸೇರಿದ ಹಡಗಿನ ಮೇಲೆ ದಾಳಿ ಸಂಘಟಿಸುತ್ತಿದ್ದಾರೆ.
ಯೆಮೆನ್ ಸಮುದ್ರ ವ್ಯಾಪ್ತಿಯಲ್ಲಿ ಸಂಚರಿಸುತ್ತಿದ್ದ ಮರ್ಲಿನ್ ಲೌಂಡ್ ಹಡುಗು ಗಲ್ಪ್ ಆಫ್ ಏಡನ್ ಬಳಿ ದಾಳಿಗೆ ತುತ್ತಾಗಿದೆ. ಕೆಲವು ಗಂಟೆಗಳ ಕಾಲ ಹಡಗು ಹೊತ್ತಿ ಉರಿದಿದೆ ತೈಲು ತುಂಬಿದ್ದ ಈ ಹಡುಗನ್ನು ಟಾರ್ಗೆಟ್ ಮಾಡಿದ ಉಗ್ರರು ಮಿಸೈಲ್ ದಾಳಿ ನಡೆಸಿದ್ದಾರೆ. ತುರ್ತು ಕರೆಯಿಂದ ತಕ್ಷಣ ಕಾರ್ಯಪ್ರವೃತ್ತರಾದ ಭಾರತದ ಯುದ್ಧ ನೌಕೆ ಐಎನ್‌ಎಸ್ ವಿಕ್ರಾಂತ್ ಸ್ಥಳಕ್ಕೆ ದೌಡಾಯಿಸಿದೆ.
ಸಮುದ್ರದಲ್ಲಿ ಭಾರತದ ಮಾರ್ಕೋಸ್ ಕಮಾಂಡೋ 'ಸರ್ಜಿಕಲ್ ಸ್ಟ್ರೈಕ್', ಎಲ್ಲಾ ಒತ್ತೆಯಾಳುಗಳ ರಕ್ಷಣೆ!
ದಾಳಿಗೊಳಗಾದ ಮರ್ಲಿನ್ ಲೌಂಡ್ ಹಡಗಿಗೆ ಭದ್ರತೆ ನೀಡಿದೆ. ಇತ್ತ ಹೌಥಿ ಉಗ್ರರು ಮತ್ತೆ ದಾಳಿ ಮಾಡುವ ಸಾಹಸ ಮಾಡಿಲ್ಲ. ಈ ಹಡಗಿನಲ್ಲಿ 22 ಭಾರತೀಯ ಸಿಬ್ಬಂದಿ ಹಾಗೂ ಓರ್ವ ಬಾಂಗ್ಲಾದೇಶ ಸಿಬ್ಬಂದಿ ಸೇರಿದಂತೆ ಒಟ್ಟು 23 ಮಂದಿ ಕಾರ್ಯನಿರ್ವಹಿಸುತ್ತಿದ್ದರು.
ಇತ್ತೀಚೆಗೆ ಇದೇ ಗಲ್ಫ್ ಆಫ್ ಏಡನ್‌ನಲ್ಲಿ ಕಡಲ್ಗಳ್ಳರ ದಾಳಿಗೆ ತುತ್ತಾಗಿದ್ದ ಮತ್ತೊಂದು ಸರಕು ಸಾಗಣೆ ಹಡಗನ್ನು ಭಾರತೀಯ ನೌಕಾ ಪಡೆ ರಕ್ಷಿಸಿತ್ತು. ಹಡಗಿನಲ್ಲಿದ್ದ 9 ಭಾರತೀಯರು ಸೇರಿದಂತೆ 22 ಮಂದಿಯನ್ನು ದಾಳಿಯಿಂದ ಕಾಪಾಡಲಾಗಿತ್ತು. 22 ಮಂದಿ ಸಿಬ್ಬಂದಿಯಿದ್ದ ಮಾರ್ಷಲ್ ಐಲ್ಯಾಂಡ್ ದೇಶಕ್ಕೆ ಸೇರಿದ ಸರಕು ಸಾಗಣೆ ಹಡಗು ರಾತ್ರಿ ಗಲ್ಫ್ ಆಫ್ ಏಡನ್ ಬಳಿ ಸಮುದ್ರಕ್ಕಿಳಿದ ಕೆಲವು ಗಂಟೆಗಳಲ್ಲೇ ಕಡಲ್ಗಳ್ಳರ ಡ್ರೋನ್ ದಾಳಿಗೆ ತುತ್ತಾಯಿತು. ಈ ಹಡಗು ಕಳಿಸಿದ ರಕ್ಷಣಾ ಸಂದೇಶಕ್ಕೆ ತಕ್ಷಣವೇ ಪ್ರತಿಕ್ರಿಯಿಸಿದ ಭಾರತದ ಐಎನ್‌ಎಸ್ ವಿಶಾಖ ಪಟ್ಟಣಂ ಯುದ್ಧನೌಕೆ ಕ್ಷಿಪಣಿ ಧ್ವಂಸಕಗಳನ್ನು ಹಾರಿಸುವ ಮೂಲಕ ಹಡಗನ್ನು ಕಡಲ್ಗಳ್ಳರಿಂದ ರಕ್ಷಣೆ ಮಾಡಿದೆ.
ಹಡಗುಗಳ ರಕ್ಷಣೆಗೆ ಭಾರತದ 5 ಯುದ್ಧನೌಕೆ ದೌಡು: ಕೆಂಪು ಸಮುದ್ರದಲ್ಲಿ ಹಡಗಿನ ಮೇಲೆ ಮತ್ತೆ ಹೌತಿ ದಾಳಿ
ಕಡಲ್ಗಳ್ಳರ ದಾಳಿಯಿಂದಾಗಿ ವ್ಯಾಪಾರಿ ಹಡಗಿನ ಮೇಲೆ ಬೆಂಕಿ ಹೊತ್ತಿಕೊಂಡರೂ ಯಾವುದೇ ಪ್ರಾಣಹಾನಿಯಾಗಿಲ್ಲ.ಇದಕ್ಕೂ ಮೊದಲು ಉತ್ತರ ಅರಬ್ಬಿ ಸಮುದ್ರದಲ್ಲಿ ದಾಳಿಗೆ ತುತ್ತಾಗಿದ್ದ ಲೈಬೀರಿಯಾ ಹಡನ್ನು ಸಹ ಭಾರತೀಯ ನೌಕಾಪಡೆಯ ಕಮಾಂಡೋಗಳು ರಕ್ಷಣೆ ಮಾಡಿದ್ದರು. ಈ ಸಮಯದಲ್ಲಿ 21 ಮಂದಿ ಭಾರತೀಯ ಸಿಬ್ಬಂದಿಯನ್ನು ರಕ್ಷಣೆ ಮಾಡಲಾಗಿತ್ತು.
