ಸಮುದ್ರದಲ್ಲಿ ಭಾರತದ ಮಾರ್ಕೋಸ್ ಕಮಾಂಡೋ 'ಸರ್ಜಿಕಲ್ ಸ್ಟ್ರೈಕ್', ಎಲ್ಲಾ ಒತ್ತೆಯಾಳುಗಳ ರಕ್ಷಣೆ!
ಭಾರತೀಯ ನೌಕಾಸೇನೆಯ ಮಾರ್ಕೋಸ್ ಕಮಾಂಡೋಗಳು ಸೋಮಾಲಿಯಾ ಕಡಲ್ಗಳ್ಳರಿಂದ ಹಡನ್ನು ಹಾಊ ಅದರಲ್ಲಿದ್ದ ಸಿಬ್ಬಂದಿಯನ್ನು ಶುಕ್ರವಾರ ಯಶಸ್ವಿಯಾಗಿ ರಕ್ಷಿಸಿದ್ದಾರೆ ಎಂದು ಭಾರತೀಯ ನೌಕಾಪಡೆ ತಿಳಿಸಿದೆ.
ನವದೆಹಲಿ (ಜ.5): ಭಾರತದ ನೌಕಾಪಡೆಯ ಮಾರ್ಕೋಸ್ ಕಮಾಂಡೋಗಳು ಸೋಮಲಿಯಾ ಕಡಲತೀರದಲ್ಲಿ ಯಶಸ್ವಿ ಸರ್ಜಿಕಲ್ ಸ್ಟ್ರೈಕ್ ನಡೆಸಿದ್ದು, ಹೈಜಾಕ್ ಮಾಡಲಾಗಿದ್ದ ಹಡಗನ್ನು ಕಡಲ್ಗಳ್ಳರಿಂದ ರಕ್ಷಣೆ ಮಾಡಿದ್ದಾರೆ. ಅದರೊಂದಿಗೆ ಅದರಲ್ಲಿದ್ದ ಭಾರತದ 15 ಸಿಬ್ಬಂದಿ ಸೇರಿದಂತೆ ಎಲ್ಲಾ ಒತ್ತೆಯಾಳುಗಳನ್ನು ಯಶಸ್ವಿಯಾಗಿ ರಕ್ಷಿಸಲಾಗಿದೆ. ಅಪಹರಣಕ್ಕೊಳಗಾದ ಎಂವಿ ಲೀಲಾ ನಾರ್ಫೋಕ್ ಹಡಗಿನಲ್ಲಿದ್ದ 15 ಭಾರತೀಯರು ಸೇರಿದಂತೆ ಎಲ್ಲಾ ಸಿಬ್ಬಂದಿಯನ್ನು ಭಾರತೀಯ ನೌಕಾಪಡೆಯ ಮಾರ್ಕೋಸ್ ಕಮಾಂಡೋಸ್ ರಕ್ಷಿಸಿದ್ದಾರೆ. ಪ್ರಸ್ತುತ ಹಡಗಿನ ಇತರ ಭಾಗಗಳಲ್ಲಿ ಸ್ಯಾನಿಟೈಜೇಷನ್ ಕಾರ್ಯಾಚರಣೆಯನ್ನು ನಡೆಸಲಾಗುತ್ತಿದೆ ಎಂದು ಸೇನಾ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. "ಭಾರತೀಯ ನೌಕಾಪಡೆಯ ಮುಖ್ಯಸ್ಥ ಅಡ್ಮಿರಲ್ ಆರ್ ಹರಿ ಕುಮಾರ್ ಅವರು ಕಡಲ್ಗಳ್ಳರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಅರಬ್ಬೀ ಸಮುದ್ರದಲ್ಲಿ ಕಾರ್ಯನಿರ್ವಹಿಸುತ್ತಿರುವ ಭಾರತೀಯ ಯುದ್ಧನೌಕೆಗಳಿಗೆ ನಿರ್ದೇಶನ ನೀಡಿದ್ದರು. ಈ ಪ್ರದೇಶದಲ್ಲಿ ವ್ಯಾಪಾರಿ ಹಡಗುಗಳ ಮೇಲಿನ ದಾಳಿಯನ್ನು ತಡೆಯಲು ಭಾರತೀಯ ನೌಕಾಪಡೆಯ ನಾಲ್ಕು ಯುದ್ಧನೌಕೆಗಳನ್ನು ಅರಬ್ಬಿ ಸಮುದ್ರದಲ್ಲಿ ನಿಯೋಜಿಸಲಾಗಿದೆ. ," ರಕ್ಷಣಾ ಅಧಿಕಾರಿಗಳು ತಿಳಿಸಿದ್ದರು.
ಇಂದು ಮುಂಜಾನೆ, ಭಾರತೀಯ ನೌಕಾಪಡೆಯ ಮೆರೈನ್ ಕಮಾಂಡೋಗಳು ಅರೇಬಿಯನ್ ಸಮುದ್ರದಲ್ಲಿ ಅಪಹರಣಕ್ಕೊಳಗಾದ ನೌಕೆ ಎಂವಿ ಲೀಲಾ ನಾರ್ಫೋಕ್ ಅನ್ನು ಪ್ರವೇಶಿಸಿದರು ಮತ್ತು ಸ್ಯಾನಿಟೈಜೇಷನ್ ಕಾರ್ಯಾಚರಣೆಯನ್ನು ಪ್ರಾರಂಭಿಸಿದರು ಎಂದು ಅಧಿಕಾರಿಗಳು ಮಾಹಿತಿ ನೀಡಿದರು.
ಹಡಗಿನಲ್ಲಿದ್ದ ಎಲ್ಲಾ 21 ಸಿಬ್ಬಂದಿಯನ್ನು (15 ಭಾರತೀಯರು ಸೇರಿದಂತೆ) ಸುರಕ್ಷಿತವಾಗಿ ಸ್ಥಳಾಂತರಿಸಲಾಗಿದೆ. ಮಾರ್ಕೋಸ್‌ನಿಂದ ರಕ್ಷಣಾ ಕಾರ್ಯಾಚರಣೆ ಯಶಸ್ವುಯಾಗಿ ನಡೆದಿದ್ದು, ಅಪಹರಣಕಾರರ ಅನುಪಸ್ಥಿತಿಯನ್ನು ದೃಢಪಡಿಸಿದೆ. ಭಾರತೀಯ ನೌಕಾಪಡೆಯ ಎಚ್ಚರಿಕೆಯೊಂದಿಗೆ ಕಡಲ್ಗಳ್ಳರು ಅಪಹರಣದ ಪ್ರಯತ್ನವನ್ನು ಕೈಬಿಟ್ಟಿದ್ದಾರೆ. ಭಾರತೀಯ ನೌಕಾಪಡೆಯ ಯುದ್ಧನೌಕೆಯ ಎಂಪಿಎ INS ಚೆನ್ನೈ ಎಂವಿಯ ಸಮೀಪದಲ್ಲಿದೆ ಮತ್ತು ವಿದ್ಯುತ್ ಉತ್ಪಾದನೆ ಮತ್ತು ಪ್ರೊಪಲ್ಷನ್ ಅನ್ನು ಪುನಃಸ್ಥಾಪಿಸಲು ಬೆಂಬಲವನ್ನು ನೀಡುತ್ತಿದೆ ಮತ್ತು ಮುಂದಿನ ಹಂತದಲ್ಲಿ ಹಡಗು ಬಂದರಿಗೆ ತನ್ನ ಪ್ರಯಾಣವನ್ನು ಪ್ರಾರಂಭಿಸುತ್ತದೆ ಎಂದು ಭಾರತೀಯ ನೌಕಾಪಡೆ ತಿಳಿಸಿದೆ.
15 ಭಾರತೀಯರು ಹೊಂದಿರುವ ಹಡಗು ಅಪಹರಣ: ಭಾರತೀಯ ನೌಕಾಪಡೆಯಿಂದ ತೀವ್ರ ನಿಗಾ!
ಕಡಲ್ಗಳ್ಳರು ಅಪಹರಿಸಿದ್ದ ಹಡಗಿನಲ್ಲಿ ಪ್ರಸ್ತುತ ಯಾವುದೇ ಕಡಲ್ಗಳ್ಳರು ಇಲ್ಲ ಎನ್ನುವುದನ್ನು ಮಾರ್ಕೋಸ್ ಕಮಾಂಡೋಗಳು ಕಂಡುಕೊಂಡಿದ್ದಾರೆ. ಅಪಹರಣ ಯತ್ನದ ಸಂದರ್ಭದಲ್ಲಿ ಕಡಲ್ಗಳ್ಳರು ಹಡಗಿನತ್ತ ಗುಂಡು ಹಾರಿಸಿದ್ದಾರೆ, ನಂತರ ಅವರೆಲ್ಲರೂ ಹಡಿಗಿನ ಅಡಗಿಕೊಂಡರು ಎಂದು ರಕ್ಷಿಸಿದ ಸಿಬ್ಬಂದಿ ಮಾಹಿತಿ ನೀಡಿದ್ದಾರೆ ಎಂದು ಭಾರತೀಯ ನೌಕಾಪಡೆಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಹಡಗುಗಳ ರಕ್ಷಣೆಗೆ ಭಾರತದ 5 ಯುದ್ಧನೌಕೆ ದೌಡು: ಕೆಂಪು ಸಮುದ್ರದಲ್ಲಿ ಹಡಗಿನ ಮೇಲೆ ಮತ್ತೆ ಹೌತಿ ದಾಳಿ