ಕೇಂಬ್ರಿಡ್ಡ್ ವಿಶ್ವವಿದ್ಯಾಲಯ ಕ್ಯಾಂಪಸ್‌ನಲ್ಲಿ ಆಯೋಜಿಸಿದ್ದ ರಾಮ ಕಥಾ ಹಿಂದೂ ಧಾರ್ಮಿಕ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಬ್ರಿಟನ್ ಪ್ರಧಾನಿ ರಿಶಿ ಸುನಕ್ ಇದೀಗ ಸಂಚಲನ ಸಷ್ಟಿಸಿದ್ದಾರೆ. ಹಿಂದುತ್ವ ಬೇರುಗಳು ಗಟ್ಟಿಯಾಗುತ್ತಿದೆ ಎಂದು ಹಲವು ಪ್ರತಿಕ್ರಿಯೆಸಿದ್ದಾರೆ.

ಲಂಡನ್(ಆ.16) ಬ್ರಿಟನ್‌ನ ಕೇಂಬ್ರಿಡ್ಡ್ ವಿಶ್ವವಿದ್ಯಾಲಯದಲ್ಲಿ ಹಿಂದೂ ಧಾರ್ಮಿಕ ಗುರು ಮೊರಾರಿ ಬಾಪು ಆಯೋಜಿಸಿದ್ದ ರಾಮ ಕಥಾ ಕಾರ್ಯಕ್ರಮದಲ್ಲಿ ಬ್ರಿಟನ್ ಪ್ರಧಾನಿ ರಿಶಿ ಸುನಕ್ ಪಾಲ್ಗೊಂಡಿದ್ದಾರೆ. ಸ್ವಾತಂತ್ರ್ಯ ದಿನಾಚರಣೆಯಂದು ಧಾರ್ಮಿಕ ಕಾರ್ಯಕ್ರಮ ಆಯೋಜಿಸಲಾಗಿತ್ತು. ರಾಮ ಕಥಾ ಧಾರ್ಮಿಕ ಕಾರ್ಯಕ್ರಮದಲ್ಲಿ ಪಾಲ್ಗೊಂಡ ರಿಷಿ ಸುನಕ್, ಜೈ ಶ್ರೀರಾಮ್ ಘೋಷಣೆ ಕೂಗಿದ್ದಾರೆ. ನಾನೊಬ್ಬ ಹಿಂದೂವಾಗಿ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದೇನೆ. ನಮ್ಮ ನಂಬಿಕೆ, ನಮ್ಮ ಆಚರಣೆಗಳು ವೈಯುಕ್ತಿಕ. ಭಾರತ ಸ್ವಾತಂತ್ರ್ಯ ದಿನಾಚರಣೆ ದಿನದಂದೇ ಧಾರ್ಮಿಕ ಕಾರ್ಯಕ್ರಮದಲ್ಲಿ ಪಾಲ್ಗೊಂಡಿರುವುದು ಅತೀವ ಸಂತಸ ತಂದಿದೆ ಎಂದು ರಿಶಿ ಸುನಕ್ ಹೇಳಿದ್ದಾರೆ.

ರಾಮ ಕಥಾ ಕಾರ್ಯಕ್ರಮದಲ್ಲಿ ಪಾಲ್ಗೊಂಡ ರಿಶಿ ಸುನಕ್, ಹಿಂದೂ ಗುರು ಮೊರಾರಿ ಬಾಪು ಕಥಾನಕವನ್ನು ಸಂಪೂರ್ಣ ಕೇಳಿದ್ದಾರೆ. ಬಳಿಕ ಜೈ ಶ್ರೀ ರಾಮ್ ಘೋಷಣೆಯನ್ನು ಮೊಳಗಿಸಿದ್ದಾರೆ. ಕಾರ್ಯಕ್ರಮದ ವೇದಿಕೆಯಲ್ಲಿ ಮಾತಾನಾಡಿದ ರಿಶಿ ಸುನಕ್, ಬಾಪು ಮೊರಾರಿ ಹಿಂಭಾಗದಲ್ಲಿ ಚಿನ್ನದ ಬಣ್ಣದ ಭಜರಂಗಿಯ ಚಿತ್ರವಿದೆ. ನನ್ನ 10 ಡೌನಿಂಗ್ ಸ್ಟ್ರೀಟ್ ಕಚೇರಿಯಲ್ಲಿ ಗಣೇಶನ ವಿಗ್ರವಿದೆ ಎಂದು ರಿಶಿ ಸುನಕ್ ಹೇಳಿದ್ದಾರೆ.

ಬ್ರಿಟನ್‌ನ Best Dressed People-2023 ಪಟ್ಟಿಯಲ್ಲಿ ಅಕ್ಷತಾಮೂರ್ತಿಗೆ ಅಗ್ರಸ್ಥಾನ

ನಾನೊಬ್ಬ ಬ್ರಿಟೀಷ್ ಹಾಗೂ ಹಿಂದೂ ಅನ್ನೋದು ನನಗೆ ಹೆಮ್ಮೆ ಇದೆ. ಸೌಥ್ ಹ್ಯಾಂಪ್ಟನ್‌ನಲ್ಲಿ ನನ್ನ ಬಾಲ್ಯದ ದಿನಗಳಲ್ಲಿ ನಾನು ದೇವಸ್ಥಾನಕ್ಕೆ ತೆರಳುತ್ತಿದ್ದೆ. ನನ್ನ ಆಪ್ತರ ಜೊತೆ ದೇವಸ್ಥಾನಕ್ಕೆ ತೆರಳಿ ಪೂಜೆ ಸಲ್ಲಿಸುತ್ತಿದ್ದೆ. ಹಿಂದೂವಾಗಿ ನನ್ನ ಆಚಾರ ವಿಚಾರಗಳನ್ನು ಗೌರವಯುತವಾಗಿ ಆಚರಿಸಿದ್ದೇನೆ ಎಂದು ರಿಶಿ ಸುನಕ್ ಹೇಳಿದ್ದಾರೆ. ಇದೇ ವೇಳೆ ಶ್ರೀರಾಮ ನನ್ನ ಸ್ಪೂರ್ತಿ ಎಂದಿದ್ದಾರೆ.

ರಾಮಾಯಣದ ಜೊತೆ ಭಗವದ್ ಗೀತಾ ಹಾಗೂ ಹನುಮಾನ್ ಚಾಲೀಸಾ ಕೂಡ ನಮಗೆ ಅತ್ಯಂತ ಮುಖ್ಯ. ನನಗೆ ಸಾವಿರ ಸವಾಲುಗಳು ಎದುರಾಗಿದೆ.ಹಲವು ಏಳು ಬೀಳುಗಳನ್ನು ಕಂಡಿದ್ದೇನೆ. ಪ್ರತಿ ಬಾರಿ ಶ್ರೀರಾಮ ಧೈರ್ಯ ನೀಡಿದ್ದಾನೆ. ಸ್ಪೂರ್ತಿ ನೀಡಿದ್ದಾನೆ ಎಂದು ರಿಶಿ ಸುನಕ್ ಹೇಳಿದ್ದಾರೆ. ಇದೇ ವೇಳೆ ಗುರೂಜಿ ಮೊರಾರಿ ಬಾಪು ಶಿವಲಿಂಗವನ್ನು ಉಡುಗೊರೆಯಾಗಿ ನೀಡಿದ್ದಾರೆ.

ಇತ್ತೀಚೆಗೆ ರಿಷಿ ಸುನಕ್ ನಡೆಗೆ ಬ್ರಿಟನ್‌ನಲ್ಲಿ ಬಾರಿ ಮೆಚ್ಚುಗೆ ವ್ಯಕ್ತವಾಗಿದೆ. ವಲಸಿಗರ ಅಡ್ಡೆ ಮೇಲೆ ದಾಳಿ ಎಲ್ಲರ ಗಮನಸೆಳೆದಿದ್ದರು. ವಲಸೆ ಜಾರಿ ಅಧಿಕಾರಿಗಳ ಜೊತೆ ಸೇರಿ ಅಕ್ರಮ ವಲಸಿಗರ ಅಡ್ಡೆ ಮೇಲೆ ದಾಳಿ ನಡೆಸಿದ್ದರು. ಗುಂಡು ನಿರೋಧಕ ಜಾಕೆಟ್‌ ತೊಟ್ಟಸುನಕ್‌, ಕಳೆದ ಉತ್ತರ ಲಂಡನ್‌ನ ಬ್ರೆಂಟ್‌ ಪ್ರದೇಶದಲ್ಲಿನ ಅಕ್ರಮ ವಲಸಿಗರ ತಾಣಗಳ ಮೇಲೆ ದಾಳಿ ನಡೆಸಿದ್ದಾರೆ. ಕಳೆದ ಗುರುವಾರ ಬ್ರಿಟನ್‌ನಾದ್ಯಂತ ಇಂಥ 159 ದಾಳಿ ನಡೆಸಲಾಗಿದ್ದು, ಈ ವೇಳೆ ಒಟ್ಟು 105 ಅಕ್ರಮ ವಲಸಿಗರನ್ನು ಬಂಧಿಸಲಾಗಿದೆ.

ಇಂಗ್ಲೆಂಡ್ ಪ್ರಧಾನಿ ಕೂಡಾ ಗುರುವಾರ ಮಾಡ್ತಾರೆ ಉಪವಾಸ; ಏನು ಈ ದಿನದ ಉಪವಾಸ ಮಹತ್ವ?

ಪ್ರಧಾನಿಯಾಗಿ ಅಧಿಕಾರ ವಹಿಸಿಕೊಂಡಾಗಿನಿಂದಲೂ ರಿಷಿ, ಅಕ್ರಮ ವಲಸಿಗರಿಂದ ಆಗುವ ಅಪಾಯಗಳ ಬಗ್ಗೆ ಹಲವು ಬಾರಿ ಮಾತನಾಡಿದ್ದಾರೆ. ಜೊತೆಗೆ ಮುಂದಿನ ವರ್ಷ ಸಂಸತ್‌ಗೆ ನಡೆಯಲಿರುವ ಚುನಾವಣೆಯಲ್ಲೂ ಈ ವಿಷಯವನ್ನು ಪ್ರಮುಖವಾಗಿ ಪ್ರಸ್ತಾಪಿಸಲು ರಿಷಿ ನಿರ್ಧರಿಸಿದ್ದಾರೆ. ಅದರ ಭಾಗವಾಗಿ ಇದೀಗ ಈ ದಾಳಿ ನಡೆಸಲಾಗಿದೆ ಎನ್ನಲಾಗಿದೆ.