ದೆಹಲಿ ಪೊಲೀಸರು ಗುರುವಾರ ಬ್ರಿಜ್‌ ಭೂಷಣ್‌ ವಿರುದ್ಧ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ 1500 ಪುಟಗಳ ಚಾರ್ಜ್‌ಶೀಟ್‌ ಸಲ್ಲಿಕೆ ಮಾಡಿದ್ದಾರೆ. ಅದರೊಂದಿಗೆ ಅವರ ವಿರುದ್ಧ ದಾಖಲಾಗಿರುವ ಪೋಕ್ಸೋ ಕೇಸ್‌ನಲ್ಲಿ 500 ಪುಟಗಳ ಕೇಸ್‌ ಕ್ಲೋಸ್‌ ಅರ್ಜಿಯನ್ನು ಕೋರ್ಟ್‌ನಲ್ಲಿ ದಾಖಲಿಸಲಾಗಿದೆ. 

ನವದೆಹಲಿ (ಜೂ.15): ಭಾರತದ ಕುಸ್ತಿ ಫೆಡರೇಶನ್‌ನ ಮಾಜಿ ಅಧ್ಯಕ್ಷ ಬ್ರಿಜ್ ಭೂಷಣ್ ಶರಣ್ ಸಿಂಗ್ ವಿರುದ್ಧ ದೆಹಲಿ ಪೊಲೀಸರು ಗುರುವಾರ ರೇಸ್‌ ಅವೆನ್ಯೂ ಕೋರ್ಟ್‌ಗೆ ಒಂದು ಸಾವಿರ ಪುಟಗಳ ಎರಡು ಚಾರ್ಜ್‌ಶೀಟ್‌ಗಳನ್ನು ಸಲ್ಲಿಸಿದ್ದಾರೆ. 6 ಕುಸ್ತಿಪಟುಗಳ ಆರೋಪದ ಮೇಲೆ ಅವರ ವಿರುದ್ಧ ಚಾರ್ಜ್‌ ಶೀಟ್‌ ಸಲ್ಲಿಕೆ ಮಾಡಲಾಗಿತ್ತು. ಇದೇ ವೇಳೆ ಅಪ್ರಾಪ್ತೆಯ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ ಆರೋಪದ ಮೇಲೆ ಅವರ ವಿರುದ್ಧ ದಾಖಲಾಗಿದ್ದ ಪೋಕ್ಸೋ ಕೇಸ್‌ನಲ್ಲಿ 550 ಪುಟಗಳ ಕೇಸ್‌ ಕ್ಲೋಸ್‌ ಅರ್ಜಿಯನ್ನೂ ದಾಖಲಿಸಲಾಗಿದೆ. ಈ ಪ್ರಕರಣದಲ್ಲಿ ಬ್ರಿಜ್ ಭೂಷಣ್ ಪೊಲೀಸರಿಂದ ಕ್ಲೀನ್ ಚಿಟ್ ಪಡೆದಿದ್ದಾರೆ. ಚಾರ್ಜ್ ಶೀಟ್ ನಲ್ಲಿ ಸಹಾಯಕ ಕಾರ್ಯದರ್ಶಿ ವಿನೋದ್ ತೋಮರ್ ಹೆಸರೂ ಕೂಡ ಇದೆ. ಏಪ್ರಿಲ್‌ 21 ರಂದು ಬ್ರಿಜ್‌ ಭೂಷಣ್‌ ವಿರುದ್ಧ 7 ಮಹಿಳಾ ಕುಸ್ತಿಪಟುಗಳು ದೆಹಲಿ ಪೊಲೀಸರಿಗೆ ಲೈಂಗಿಕ ಕಿರುಕುಳದ ಬಗ್ಗೆ ದೂರು ದಾಖಲು ಮಾಡಿದ್ದರು.ಈ ವಿಷಯದಲ್ಲಿ ದೆಹಲಿ ಪೊಲೀಸರು ಏಪ್ರಿಲ್ 28 ರಂದು ಎರಡು ಪ್ರಕರಣಗಳನ್ನು ದಾಖಲಿಸಿದ್ದರು. 6 ವಯಸ್ಕ ಮಹಿಳಾ ಕುಸ್ತಿಪಟುಗಳ ದೂರಿನ ಮೇರೆಗೆ ಮೊದಲ ಪ್ರಕರಣ, ಅಪ್ರಾಪ್ತರ ದೂರಿನ ಮೇಲೆ ಒಂದು ಪ್ರಕರಣ ದಾಖಲು ಮಾಡಲಾಗಿತ್ತು.

ಪೋಕ್ಸೋ ಕೇಸ್‌ ರದ್ದು ಮಾಡಲು ಅರ್ಜಿ: ಅಪ್ರಾಪ್ತ ಕುಸ್ತಿಪಟುವಿಗೆ ಲೈಂಗಿಕ ದೌರ್ಜನ್ಯ ನಡೆಸಿದ ಪೋಕ್ಸೋ ಕೇಸ್‌ ಪ್ರಕರಣದಲ್ಲಿ, ದೆಹಲಿ ಪೊಲೀಸರು ಕೇಸ್‌ ರದ್ದು ಮಾಡುವ ಅರ್ಜಿ ಸಲ್ಲಿಸಿದ್ದಾರೆ. 'ತನಿಖೆಯಲ್ಲಿ ಲೈಂಗಿಕ ದೌರ್ಜನ್ಯದ ಯಾವುದೇ ಪುರಾವೆಗಳು ಕಂಡುಬಂದಿಲ್ಲ. ಅದಕ್ಕಾಗಿಯೇ ನಾವು ಈ ಪ್ರಕರಣವನ್ನು ಮುಕ್ತಾಯಗೊಳಿಸುತ್ತಿದ್ದೇವೆ. ದೆಹಲಿ ಪೊಲೀಸ್ ವಕ್ತಾರ ಸುಮನ್ ನಲ್ವಾ ಮಾತನಾಡಿ, ಪೋಕ್ಸೊ ಪ್ರಕರಣದಲ್ಲಿ ದೂರುದಾರರ ಅಂದರೆ ಸಂತ್ರಸ್ತೆಯ ತಂದೆ ಮತ್ತು ಸಂತ್ರಸ್ತೆಯ ಹೇಳಿಕೆಗಳ ಆಧಾರದ ಮೇಲೆ ಪ್ರಕರಣವನ್ನು ರದ್ದುಗೊಳಿಸುವಂತೆ ನಾವು ನ್ಯಾಯಾಲಯಕ್ಕೆ ಮನವಿ ಮಾಡಿದ್ದೇವೆ. ಅಪ್ರಾಪ್ತ ಕುಸ್ತಿಪಟು ಬ್ರಿಜ್ ಭೂಷಣ್ ಮೇಲೆ ಈಕೆ ಲೈಂಗಿಕ ದೌರ್ಜನ್ಯದ ಆರೋಪ ಹೊರಿಸಿದ್ದರು, ಆದರೆ ನಂತರ ತಮ್ಮ ಹೇಳಿಕೆಯನ್ನು ಬದಲಾಯಿಸಿದ್ದರು. ಅಪ್ರಾಪ್ತ ಕುಸ್ತಿಪಟು ಬ್ರಿಜ್ ಭೂಷಣ್ ಅವರು ಲೈಂಗಿಕವಾಗಿ ನಿಂದಿಸಿಲ್ಲ ಆದರೆ ಆಯ್ಕೆ ಟ್ರಯಲ್ಸ್‌ ವೇಳೆ ತಾರತಮ್ಯ ಮಾಡಿದ್ದಾರೆ ಎಂದು ಹೇಳಿದ್ದಾರೆ.

ನ್ಯಾಯಾಲಯದಲ್ಲಿ ಅಪ್ರಾಪ್ತ ಕುಸ್ತಿಪಟುವಿನ ಹೇಳಿಕೆಗಳನ್ನು ಎರಡು ಬಾರಿ ದಾಖಲಿಸಲಾಗಿದೆ. ಈ ವಿಷಯದ ಮುಂದಿನ ವಿಚಾರಣೆ ಜುಲೈ 4 ರಂದು ನಡೆಯಲಿದೆ. ಬ್ರಿಜ್ ಭೂಷಣ್ ವಿರುದ್ಧದ ಪ್ರಕರಣವು POCSO ಕಾಯ್ದೆಯಡಿಯಲ್ಲಿ ಮುಂದುವರಿಯುತ್ತದೆಯೇ ಅಥವಾ ಇಲ್ಲವೇ ಎಂಬುದನ್ನು ನ್ಯಾಯಾಲಯ ನಿರ್ಧರಿಸುತ್ತದೆ.

ಲೈಂಗಿಕ ಕಿರುಕುಳ ಆರೋಪಿ ಬ್ರಿಜ್‌ಭೂಷಣ್ ವಿರುದ್ಧ ಇಂದು ಚಾರ್ಜ್‌ಶೀಟ್‌?

ಕುಸ್ತಿಪಟುಗಳ ಪ್ರತಿಭಟನೆಯ ಬಳಿಕ, ಬ್ರಿಜ್‌ ಭೂಷಣ್‌ ವಿರುದ್ಧದ ಆರೋಪಗಳಿಗೆ ಜೂನ್‌ 15ರ ಒಳಗಾಗಿ ತನಿಖೆ ನಡೆಸಿ ಚಾರ್ಜ್‌ಶೀಟ್‌ ಸಲ್ಲಿಕೆ ಮಾಡಲಾಗುವುದು ಎಂದು ಕೇಂದ್ರ ಕ್ರೀಡಾ ಇಲಾಖೆ ತಿಳಿಸಿತ್ತು. ಅದರೊಂದಿಗೆ ಜೂನ್‌ 30 ರಂದು ಕುಸ್ತಿ ಫೆಡರೇಷನ್‌ನ ಚುನಾವಣೆ ಕೂಡ ನಿಗದಿಯಾಗಿದೆ. ಡಬ್ಲ್ಯುಎಫ್‌ಐನಲ್ಲಿ ಮಹಿಳಾ ಅಧ್ಯಕ್ಷರ ನೇತೃತ್ವದಲ್ಲಿ ಆಂತರಿಕ ದೂರು ಸಮಿತಿ ರಚಿಸುವ ಕುರಿತು ಚರ್ಚೆ ನಡೆದಿದೆ. ಡಬ್ಲ್ಯುಎಫ್‌ಐ ಚುನಾವಣೆಯವರೆಗೆ, ಐಒಎಯ ಅಡ್ಹಾಕ್ ಸಮಿತಿಯಲ್ಲಿ 2 ತರಬೇತುದಾರರ ಹೆಸರನ್ನು ಪ್ರಸ್ತಾಪಿಸಲು ಮತ್ತು ಫೆಡರೇಶನ್‌ನ ಚುನಾವಣೆಯಲ್ಲಿ ಆಟಗಾರರಿಂದ ಅಭಿಪ್ರಾಯವನ್ನು ತೆಗೆದುಕೊಳ್ಳಲು ಒಪ್ಪಿಗೆ ನೀಡಲಾಯಿತು. ಅದರೊಂದಿಗೆ ನಿರ್ಗಮಿತ ಅಧ್ಯಕ್ಷ ಬ್ರಿಜ್ ಭೂಷಣ್ ಸಿಂಗ್ ಮತ್ತು ಅವರ ಸಂಬಂಧಿಕರು ಚುನಾವಣೆಯ ನಂತರ ಫೆಡರೇಷನ್‌ಗೆ ಬರಬಾರದು, ಇದು ಕುಸ್ತಿಪಟುಗಳ ಬೇಡಿಕೆಯಾಗಿತ್ತು. ಮಹಿಳಾ ಆಟಗಾರರಿಗೆ ಅವರ ಅಗತ್ಯಕ್ಕೆ ಅನುಗುಣವಾಗಿ ಭದ್ರತೆ ನೀಡಬೇಕು. ಆಟಗಾರರು, ಅಖಾಡಾಗಳು ಅಥವಾ ತರಬೇತುದಾರರ ವಿರುದ್ಧ ಪ್ರಕರಣಗಳಿವೆ ಅದನ್ನು ಹಿಂಪಡೆಯಲು ಬೇಡಿಕೆ ಇತ್ತು. ಇವುಗಳಿಗೆ ಕ್ರೀಡಾ ಇಲಾಖೆ ಒಪ್ಪಿಗೆ ನೀಡಿದೆ.

ಪೊಲೀಸ್‌ ತನಿಖೆ ಬಗ್ಗೆ ಮತ್ತೆ ರೆಸ್ಲ​ರ್‌​ಗಳ ಅಪ​ಸ್ವ​ರ! ರಾಜಿಯಾಗುವಂತೆ ಒತ್ತ​ಡ​: ಸಾಕ್ಷಿ ಮಲಿಕ್ ಗಂಭೀರ ಆರೋಪ