ಉತ್ತರಖಂಡ(ಜೂ.22): ಭಾರತ ಹಾಗೂ ಚೀನಾ ಗಡಿ ಬಳಿಯ ಸೇತುವೆ ಮೇಲೆ ಭಾರಿ ಗಾತ್ರದ ಲಾರಿಯೊಂದು ದಾಟುವ ಪ್ರಯತ್ನ ಮಾಡಿದೆ. ಇನ್ನೇನು ದಡ ಸೇರಬೇಕು ಅನ್ನುವಷ್ಟರಲ್ಲೇ ಭಾರ ತಡೆಯಲಾರದೆ ಸೇತುವೆ ಕುಸಿದಿದೆ. ಇದರಿಂದ ಮೂವರು ಗಂಭೀರ ಗಾಯಗೊಂಡಿದ್ದಾರೆ. ಸ್ಥಳೀಯರು ಮೂವರನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ.

ದ್ವೀಪ ನಮ್ಮದೆಂದು ಶಿಪ್ ಕಳಿಸಿದ ಚೀನಾಕ್ಕೆ ಜಪಾನ್ ಕೊಟ್ಟ 'ಬಹುಮಾನ'!..

ಉತ್ತರಖಂಡದ ಬಳಿ ಚೀನಾ ಜೊತೆ ಗಡಿ ಹಂಚಿಕೊಂಡಿರುವ ಲೀಲಂ ಜೋಹರ್ ವ್ಯಾಲಿಯ ಮಿಲಂ ರೋಡ್‌ನಲ್ಲಿ ಈ ಅಪಘಾತ ನಡೆದಿದೆ. ಕಾಮಗಾರಿಗಾಗಿ ಜೆಸಿಬಿ ಹೊತ್ತ ಲಾರಿ ಸೇತುವೆ ಬಳಿ ನಿಧಾನವಾಗಿ ದಾಟಲು ಪ್ರಯತ್ನ ಮಾಡಿದೆ. ಬಹುತೇಕ ಸೇತುವೆ ದಾಟಿದ ಲಾರಿ, ಇನ್ನೊಂದು ನಿಮಿಷದಲ್ಲಿ ಸಂಪೂರ್ಣ ಸೇತುವೆ ದಾಟಿ ದಡ ಸೇರುತ್ತಿತ್ತು. ಆದರೆ ಭಾರ ತಡೆಯಲಾಗದೆ ಸೇತುವೆ ಕುಸಿದಿದೆ.

 

ಘಟನೆಯಲ್ಲಿ ಲಾರಿ ಚಾಲಕ, ಲಾರಿ ಕ್ಲೀನರ್ ಹಾಗೂ ಲಾರಿ ಹಿಂಬಾಗದಲ್ಲಿ ನಡೆದುಕೊಂಡು ಬಂದ ಲಾರಿ ಸಿಬ್ಬಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಸೇತುವೆ ಕುಸಿದ ಕಾರಣ ಲಾರಿ ಕಂದಕ್ಕೆ ಉರುಳಿದೆ. ಸ್ಥಳೀಯರು ತಕ್ಷಣವೇ ನೆರವಿಗೆ ಧಾವಿಸಿದ್ದಾರೆ. ಹೀಗಾಗಿ ಗಂಭೀರ ಗಾಯಗೊಂಡ ಮೂವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದ್ದಾರೆ.