ಮದುವೆ ಸಂದರ್ಭದ ಮುದ್ದಾದ ವಿಡಿಯೋ ವರನ ನೋಡಿ ಕಿಟಕಿಯಿಂದಲೇ ವಧುವಿನ ಡಾನ್ಸ್
ಮುಂಬೈ(ಜ. 2): ಸಾಮಾಜಿಕ ಜಾಲತಾಣದಲ್ಲಿ ಮದುವೆ ಸಂದರ್ಭದ ಮುದ್ದಾದ ವಿಡಿಯೋವೊಂದು ವೈರಲ್ ಆಗಿದೆ. ಈ ವಿಡಿಯೋದಲ್ಲಿ ಕಾಣಿಸುತ್ತಿರುವಂತೆ ವರ ಮದುವೆ ಮಂಟಪಕ್ಕೆ ಮೆರವಣಿಗೆ ಮೂಲಕ ಸಾಗಿ ಬರುತ್ತಿರುವುದು ಕಾಣಿಸುತ್ತಿದೆ. ಇದನ್ನು ಕಿಟಕಿಯಲ್ಲಿ ನೋಡಿದ ವಧು ಅಲ್ಲಿಂದಲೇ ವರನನ್ನು ನೋಡಿ ಡಾನ್ಸ್ ಮಾಡಲು ಶುರು ಮಾಡುತ್ತಾಳೆ. ಇದನ್ನು ನೋಡಿ ಕುದುರೆ ಮೇಲಿದ್ದ ವರ ಕೂಡ ಅಲ್ಲಿಂದಲೇ ವಧುವಿಗೆ ಡಾನ್ಸ್ ಮೂಲಕ ಪ್ರತಿಕ್ರಿಯಿಸುತ್ತಾನೆ. ಈ ವಿಡಿಯೋ ಹಿನ್ನೆಲೆಯಲ್ಲಿ ಸೋನಿ ನಿಗಮ್ (Sonu Nigam) ಹಾಗೂ ಅಲ್ಕಾ ಯಾಗ್ನಿಕ್ (Alka Yagnik) ಹಾಡಿದ ಚಲ್ ಪ್ಯಾರ್ ಕರೆಗಿ ಹಾಡು ಕೇಳಿ ಬರುತ್ತದೆ.
ಒಂದು ದಿನದ ಹಿಂದಷ್ಟೇ ಈ ವಿಡಿಯೋ ಇನ್ಸ್ಟಾಗ್ರಾಮ್‌ನಲ್ಲಿ witty_wedding ಹೆಸರಿನಿಂದ ಪೋಸ್ಟ್ ಆಗಿದೆ. ಒಳ್ಳೆದು, ವಧು ವರನನ್ನು ನೋಡಲು ಕಾತುರಳಾಗಿದ್ದು, ಆಕೆಗೆ ಕಾಯಲಾಗುತ್ತಿಲ್ಲ ಎಂದು ಬರೆದು ಪೋಸ್ಟ್ ಮಾಡಲಾಗಿದೆ. ಈ ವಿಡಿಯೋದಲ್ಲಿ ಸುಂದರವಾದ ಕೆಂಪು ಬಣ್ಣದ ಮದುವೆ ಸಂದರ್ಭದಲ್ಲಿ ಧರಿಸುವ ಲೆಹೆಂಗಾ ಧರಿಸಿದ್ದಾಳೆ. ಮದುವೆ ಮೆರವಣಿಗೆ ಬರುವುದು ತಿಳಿಯುತ್ತಿದ್ದಂತೆ ತಾನಿರುವ ಕೋಣೆಯ ಕಿಟಕಿ ಬಳಿ ಓಡಿ ಬರುವ ವಧು ಅಲ್ಲಿಂದಲ್ಲೇ ವರನನ್ನು ನೋಡಿ ಡಾನ್ಸ್ ಮಾಡಲು ಶುರು ಮಾಡುತ್ತಾಳೆ. ಇತ್ತ ವರ ಶೆರ್ವಾನಿ ಧರಿಸಿದ್ದು, ಕುದುರೆ ಮೇಲೆ ಕುಳಿತು ಬರುತ್ತಿದ್ದು ಅಲ್ಲಿಂದಲೇ ತನ್ನ ವಧುವಿನ ಕಡೆ ಪ್ರೀತಿಯ ನೋಟ ಬೀರುತ್ತಾನೆ. ಈ ವಿಡಿಯೋಗೆ ನೆಟ್ಟಿಗರು ಮೆಚ್ಚುಗೆ ಸೂಚಿಸಿದ್ದು ಅವರಿಬ್ಬರು ಪರಸ್ಪರ ಪ್ರೀತಿಸುತ್ತಿರುವುದು ವಿಡಿಯೋದಲ್ಲಿ ಕಾಣುತ್ತಿದೆ ಎಂದು ಕಾಮೆಂಟ್ ಮಾಡಿದ್ದಾರೆ.
ಭಾರತೀಯ ಮದುವೆಗಳು ಹಾಡು ಹಾಗೂ ಸಂಗೀತಾ ಇವುಗಳಿಲ್ಲದೇ ಎಂದಿಗೂ ಕೊನೆಗೊಳ್ಳುವುದೇ ಇಲ್ಲ. ನಾವು ಬೇರೆಯವರ ಮದುವೆಗೆ ಅತಿಥಿಗಳಾಗಿ ಹೋಗುವುದಾದರೆ ಅದೊಂದು ಎಲ್ಲಾ ಚಿಂತೆಗಳನ್ನು ಮರೆತು ಆರಾಮವಾಗಿ ಸಂಭ್ರಮಿಸಲು ಇರುವ ಒಂದು ಉತ್ತಮ ಅವಕಾಶ. ಮದುವೆಯಲ್ಲಿ ಜನರು ಡಾನ್ಸ್ ಮಾಡುವ ದೃಶ್ಯಾವಳಿಗಳನ್ನು ನಾವು ಈಗಾಗಲೇ ಬೇಕಾದಷ್ಟು ನೋಡಿದ್ದೇವೆ. ಆದರೆ ಇತೀಚೆಗೆ ಮದುವೆಯ ಕೇಂದ್ರ ಬಿಂದುವಾಗಿರುವ ವಧು ಹಾಗೂ ವರರೇ ಬಿಂದಾಸ್ ಆಗಿ ಸ್ಟೆಪ್ ಹಾಕುವ ಮೂಲಕ ಮದುವೆ ಮಂಟಪ ಪ್ರವೇಶಿಸಿ ತಮ್ಮ ಮದುವೆಯನ್ನು ಸ್ಮರಣೀಯವಾಗಿಸುತ್ತಿದ್ದಾರೆ. ಎಲ್ಲಕ್ಕೂ ಹೆಚ್ಚು ಇದು ಅವರ ಬದುಕಿನ ವಿಶೇಷ ದಿನವಾಗಿರುತ್ತದೆ. ಇದೇ ರೀತಿ ವಧು ಹಾಗೂ ವರ ಬಿಂದಾಸ್ ಆಗಿ ತಮ್ಮ ಮದುವೆ ದಿನ ಮಾಡಿದ ಡಾನ್ಸ್ ಈ ಹಿಂದೆಯೂ ಒಮ್ಮೆ ಇನ್ಸ್ಟಾಗ್ರಾಮ್‌ನಲ್ಲಿ ವೈರಲ್ ಆಗಿತ್ತು. ಬಾಲಿವುಡ್ (Bollywood)ನ ಸೇ ಶವ ಶವ ಹಾಡಿಗೆ ಜೋಡಿಯೊಂದು ಡಾನ್ಸ್ ಮಾಡಿತ್ತು.
ಹೂ ಹಾರ ಹಾಕೋ ಮೊದಲು ಕಿಸ್ ಕೇಳಿದ ವರ, ಕೊಟ್ಲಾ ವಧು?
ಆ ವಿಡಿಯೋದಲ್ಲಿರುವ ವಧು ವರರನ್ನು ವಧು ಪ್ರಗ್ಯಾ ( Pragya) ಹಾಗೂ ವರ ಅನಂತ್ ( Anant) ಎಂದು ಗುರುತಿಸಲಾಗಿತ್ತು. ನಟ ಶಾರೂಕ್ ಖಾನ್ (Shahrukh Khan,) ಹೃತಿಕ್ ರೋಷನ್ (Hrithik Roshan), ಕಾಜೋಲ್ (Kajol), ಕರೀನಾ ಕಪೂರ್ (Kareena Kapoor) ಅಭಿನಯದ ಬಾಲಿವುಡ್‌ನ ಕಭಿ ಖುಷಿ ಕಭಿ ಗಮ್ (Kabhi Khushi Kabhi Gum) ಸಿನಿಮಾದ ಪ್ರಸಿದ್ಧ ಹಾಡಿಗೆ ಈ ಜೋಡಿ ಸಖತ್ ಆಗಿ ಸ್ಟೆಪ್ ಹಾಕಿದ್ದರು. ಇವರ ಸೂಪರ್ ಎನಿಸಿದ ಸ್ಟೆಪ್‌ಗಳು ನವ ದಂಪತಿಗೆ ಹೊಸ ಕಪಲ್ ಗೋಲ್‌ನ್ನು ಸೃಷ್ಟಿ ಮಾಡಿದ್ದವು.
Bride Groom Dance: ಇನ್ಸ್ಟಾಗ್ರಾಮ್‌ನಲ್ಲಿ ವೈರಲ್ ಆಯ್ತು ವಧು ವರನ ಜಬರ್‌ದಸ್ತ್ ಡಾನ್ಸ್