ಹೆಣ್ಮಕ್ಕಳ ಪಾನಿಪೂರಿ, ಗೋಲ್ಗಪ್ಪ ಲವ್ ಎಷ್ಟೆಂಬುದು ರಿವೀಲ್ ಆಯ್ತು ನೋಡಿ ವಧುವಿಗೆ ಪೂರಿಯದ್ದೇ ಕಿರೀಟ

ಇತ್ತೀಚೆಗೆ ಪಾನಿ ಪೂರಿಯೊಳಗೆ ಉಂಗುರವನ್ನು ಇರಿಸುವ ಮೂಲಕ ತನ್ನ ಗೆಳತಿಗೆ ಪ್ರಪೋಸ್ ಮಾಡಿದ ವಿಡಿಯೋ ಇಂಟರ್ನೆಟ್‌ನಲ್ಲಿ ಹರಿದಾಡುತ್ತಿತ್ತು. ಆಹಾರ ಪ್ರಿಯರು ಇದನ್ನು ಬೆಸ್ಟ್ ಪ್ರಪೋಸಲ್ ಎಂದು ಮೆಚ್ಚಿದ್ದರು. ಈಗ ಇದನ್ನೂ ಮೀರಿಸುವ ವಿಡಿಯೋ ವೈರಲ್ ಆಗಿದೆ.

ರುಚಿಕರವಾದ ಆಹಾರದ ಕಾರಣಗಳಿಗಾಗಿ ದಕ್ಷಿಣ ಭಾರತದ ವಧುವಿನ ವೀಡಿಯೊ ವೈರಲ್ ಆಗುತ್ತಿದೆ. ಪಾನಿ ಪುರಿಯಿಂದ ಮಾಡಿದ ಕಿರೀಟ, ಹೂಮಾಲೆ ಮತ್ತು ಕಂಕಣದಲ್ಲಿ ಅಲಂಕರಿಸಲ್ಪಟ್ಟ ಈ ಸ್ಟ್ರೀಟ್ ಫುಡ್ ಲವರ್ ವಧು ಆಹಾರದ ಬಗ್ಗೆ ತನ್ನ ಪ್ರೀತಿಯನ್ನು ಸಾಬೀತುಪಡಿಸಿದ್ದಾಳೆ.

ಗೋಲ್ಗಪ್ಪಗೆ ಈ ವಿಧಾನದಿಂದ ಮನೆಯಲ್ಲೇ ಮಾಡಿ ಗರಿಗರಿ ಪುರಿ!

ವೈರಲ್ ವಿಡಿಯೋವೊಂದರಲ್ಲಿ, ದಕ್ಷಿಣ ಭಾರತದ ವಧು ಪಾನಿ ಪುರಿಯ ಮೇಲಿನ ಪ್ರೀತಿಯನ್ನು ತಿಳಿಸಿದ್ದಾಳೆ. ಮದುವೆಯ ಉಡುಪು ಮತ್ತು ಆಭರಣಗಳನ್ನು ಧರಿಸಿರುವುದನ್ನು ಕಾಣಬಹುದು. ಅದರ ಜೊತೆ ಪಾನಿ ಪೂರಿಯ ಹಾರ, ಕಂಕಣವನ್ನು ಧರಿಸಿದ್ದಾಳೆ.

View post on Instagram

ವಧು ಕುಳಿತಾಗ, ಅವಳ ಮನೆಯ ಸದಸ್ಯರು ಮುಂದೆ ಬಂದು ಅವಳ ತಲೆಯ ಮೇಲೆ ಭವ್ಯವಾದ ಪಾನಿಪುರಿ ಕಿರೀಟವನ್ನು ಇಟ್ಟಿದ್ದಾರೆ. ಮುಗುಳ್ನಗುತ್ತಿರುವ ಮತ್ತು ನಗುತ್ತಿರುವ ವಧು ತನ್ನ ವಿಶೇಷ ದಿನದಂದು ತನ್ನ ನೆಚ್ಚಿನ ತಿಂಡಿ ಪ್ರಮುಖ ಪಾತ್ರ ವಹಿಸುತ್ತಿರುವುದರಿಂದ ಫುಲ್ ಖುಷ್ ಅಗಿದ್ದಾರೆ.