Asianet Suvarna News

ಸ್ಕಾರ್ಪಿಯೋ ಬಾನೆಟ್ ಮೇಲೆ ಕುಳಿತು ಮಂಟಪಕ್ಕೆ ತೆರಳಿದ ವಧು; ಮದವೆ ದಿನವೇ ಬಿತ್ತು ಕೇಸ್!

  • ಮದುವೆ ದಿನ ಮಧುವಿನ ಮೇಲೆ ಪ್ರಕರಣ ದಾಖಲು, ವರನ ಕುಟುಂಬಸ್ಥರಿಗೆ ಟೆನ್ಶನ್
  • ಸ್ಕಾರ್ಪಿಯೋ ವಾಹನದ ಬಾನೆಟ್ ಮೇಲೆ ಕುಳಿತ ಮೆರವಣಿಗೆ ಮೂಲಕ ಸಾಗಿದ ವಧು
  • ಮೋಟಾರು ವಾಹನ ನಿಯಮ ಉಲ್ಲಂಘಿಸಿದ ವಧುವಿನ ಮೇಲೆ ಕೇಸ್
Bride travells on bonnet of the car for wedding pune police booked case under motor vehicle act ckm
Author
Bengaluru, First Published Jul 14, 2021, 4:08 PM IST
  • Facebook
  • Twitter
  • Whatsapp

ಪುಣೆ(ಜು.144): ಮದುವೆಯನ್ನು ಹೆಚ್ಮು ಸ್ಮರಣೀಯವಾಗಿಸಲು ವಧು, ವರ, ಕುಟಂಬಸ್ಥರು, ಸ್ನೇಹಿತರು ಪ್ರಯತ್ನಿಸುತ್ತಾರೆ. ಇದಕ್ಕೆ ಹಲವು ಹೊಸತನಗಳನ್ನು ಅಳವಡಿಸಿಕೊಳ್ಳುತ್ತಾರೆ. ಇನ್ನು ಮಂಟಪಕ್ಕೆ ಆಗಮಿಸುವ ವೇಳೆ ವಿಂಟೇಜ್ ಕಾರು, ಸೂಪರ್ ಕಾರು, ಕುದರೆ, ಆನೆ ಮೇಲೆ ವಧು, ವರರ ಬಂದು ಅಚ್ಚರಿ ನೀಡಿದ ಸಾಕಷ್ಟು ಊದಾಹರಣೆಗಳಿವೆ. ಹೀಗೆ ಇಲ್ಲೊಂದು ಮದುವೆಯಲ್ಲಿ ಇರೋ ವಾಹನದಲ್ಲಿ ಕೊಂಚ ಡಿಫ್ರೆಂಟ್ ಆಗಿ ಮಂಟಪಕ್ಕೆ ತೆರಳಿದ ವಧುವಿಗೆ ಇದೀಗ ಸಂಕಷ್ಟ ಎದುರಾಗಿದೆ.

ಆನೆ ರಂಪಾಟದಿಂದ ಮದುವೆ ಸಮಾರಂಭ ಕ್ಯಾನ್ಸಲ್; ಅಂಬಾನಿ ಮೇಲೇರಿ ಬಂದ ಮಧುಮಗ ಎಸ್ಕೇಪ್!

ಈ ಮದುವೆ ನಡೆದಿರುವುದು ಪುಣೆಯಲ್ಲಿ. 23 ವರ್ಷದ ವಧು, ಮಂಟಪಕ್ಕೆ ತೆರಳಲು ಸ್ಕಾರ್ಪಿಯೋ ವಾಹನದ ಬಾನೆಟ್ ಮೇಲೆ ಕುಳಿತಿದ್ದಾಳೆ. ಬಳಿಕ ಸಾರ್ವಜನಿಕ ರಸ್ತೆ ಮೂಲಕ ಸಾಗಿದ್ದಾರೆ. ಈ ವಿಡಿಯೋ ಕ್ಷಣಾರ್ಧದಲ್ಲಿ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗಿತ್ತು. ತಕ್ಷಣ ಎಚ್ಚೆತ್ತುಕೊಂಡ ಪೊಲೀಸರು, ವಾಹನ ನಂಬರ್, ಮದುವೆ ಮಾಹಿತಿ ಪಡೆದು ನೇರವಾಗಿ ಮಂಟಪಕ್ಕೆ ಆಗಮಿಸಿದ್ದಾರೆ.

ಮದುವೆ ನಡೆಯುತ್ತಿದ್ದ ವೇಳೆ ಆಗಮಿಸಿದ ಪೊಲೀಸರನ್ನು ನೋಡಿದ ಕುಟಂಬಸ್ಥರು ಗಾಬರಿಗೊಂಡಿದ್ದಾರೆ. ಆದರೆ ಮದುವೆಗೆ ಯಾವುದೇ ಅಡ್ಡಿಪಡಿಸದ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಬಳಿಕ ವಧು ಮೆರವಣಿಗೆ ಮೂಲಕ ಬಂದ ಸ್ಕಾರ್ಪಿಯೋ ವಾಹನವನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ವಧುವಿನ ಸಿಗ್ನಲ್ ನೋಡಿ ಬೆಚ್ಚಿಬಿದ್ದ ಕ್ಯಾಮಾರಮ್ಯಾನ್; ಮದುವೆ ವಿಡಿಯೋ ವೈರಲ್

ಸಾರ್ವಜನಿಕ ರಸ್ತೆಯಲ್ಲಿ ಅಪಾಯಕಾರಿಯಾಗಿ ವರ್ತಿಸಿ, ಸುರಕ್ಷತಾ ನಿಯಮ ಕಡೆಗಣಿಸಿದ ಹಾಗೂ ಮಾಸ್ಕ್ ಧರಿಸಿ ಕಾರಣಕ್ಕೆ ವಧುವಿನ ಮೇಲೆ ಪ್ರಕರಣ ದಾಖಲಿಸಿದ್ದಾರೆ. ಮೆರವಣಿಗೆಯನ್ನು ಚಿತ್ರೀಕರಿಸಿದ ವಿಡಿಯೋ ಗ್ರಾಫರ್ ಕ್ಯಾಮರವನ್ನೂ ವಶಕ್ಕೆ ಪಡೆದಿದ್ದಾರೆ.

ವಧುವನ್ನು ಮನೆಗೆ ಸೇರಿಸಿಕೊಳ್ಳುವ ದಿನವೆ ಪೊಲೀಸ್ ಕೇಸ್ ದಾಖಲಾಗಿದೆ. ಮುಂದೇನು ಗತಿ ಎಂದು ವರನ ಕುಟಂಬಸ್ಥರು ಆತಂಕ ವ್ಯಕ್ತಪಡಿಸಿದ್ದಾರೆ. 

Follow Us:
Download App:
  • android
  • ios