Asianet Suvarna News Asianet Suvarna News

ಅತ್ಯಾಚಾರ ಆರೋಪಿಯಿಂದಲೇ ಲಂಚ ಪಡೆದ ಮಹಿಳಾ PSI ಅರೆಸ್ಟ್

ಅತ್ಯಾಚಾರ ಆರೋಪಿಯಿಂದ ಲಂಚ ಸ್ವೀಕಾರ/ ಮಹಿಳಾ ಪಿಎಸ್‌ಐ ಬಂಧನ/ ಹೆಚ್ಚುವರಿ ಹಣಕ್ಕೆ ಬೇಡಿಕೆ ಇಟ್ಟ ಲೇಡಿ ಪೊಲೀಸ್/ಆರೋಪಿಯ ಸಹೋದರ ನೀಡಿದ ದೂರಿನ ಆಧಾರದಲ್ಲಿ ಬಂಧನ

Woman sub-inspector arrested for taking Rs 20 lakh bribe
Author
Bengaluru, First Published Jul 5, 2020, 4:29 PM IST

ಅಹಮದಾಬಾದ್​ (ಜೂ. 05)  ಅತ್ಯಾಚಾರದ ಕೇಸ್ ಎದುರಿಸುತ್ತಿದ್ದ ವ್ಯಕ್ತಿಯಿಂದ  20  ಲಕ್ಷ ರೂ. ಲಂಚ ಪಡೆದ ಆರೋಪದ ಮೇಲೆ ಗುಜರಾತ್​ನ ಅಹಮದಾಬಾದ್​ನಲ್ಲಿ ಮಹಿಳಾ ಪೊಲೀಸ್​ ಸಬ್​ಇನ್ಸ್​ಪೆಕ್ಟರ್ ಒಬ್ಬರನ್ನು ಬಂಧಿಸಲಾಗಿದೆ.

ಸಾಮಾಜಿಕ ವಿರೋಧಿ ಚಟುವಟಿಕೆ ತಡೆ ಕಾಯ್ದೆಯಡಿ ಪ್ರಕರಣ ದಾಖಲಿಸದೇ ಇರಲು ಅತ್ಯಾಚಾರಿ ಆರೋಪಿಯೊಬ್ಬನಿಂದ ಲಂಚ ಪಡೆದ ಆರೋಪದಲ್ಲಿ  ಮಹಿಳಾ ಪಿಎಸ್​ಐ
ಶ್ವೇತಾ ಜಡೇಜಾ ಮೇಲೆ ಬಂದಿದೆ.

ಪಶ್ಚಿಮ ಅಹಮದಾಬಾದ್​ನ ಮಹಿಳಾ ಪೊಲೀಸ್​ ಠಾಣೆಯ ಉಸ್ತುವಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದರು. 2019ರಲ್ಲಿ ದಾಖಲಾದ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸುತ್ತಿದ್ದ ಶ್ವೇತಾ, ಆರೋಪಿ ಕೆನಾಲ್​ ಶಾ ಸಹೋದರನ ಬಳಿ 20 ಲಕ್ಷ ರೂ. ಲಂಚ ಬೇಡಿಕೆ ಇಟ್ಟಿದ್ದರು  ಎಂಬ ಆರೋಪ ಕೇಳಿ ಬಂದಿದೆ.

ವಿರಾಟ್ ಕೊಹ್ಲಿಯನ್ನು ಬಿಡದ ಕ್ರಿಕೆಟ್ ಲೋಕದ ಲಂಚ ಕರ್ಮಕಾಂಡ

ಸಾಮಾಜಿಕ ವಿರೋಧಿ ಚಟುವಟಿಕೆ ತಡೆ ಕಾಯ್ದೆಯಡಿ (ಪಿಎಎಸ್​ಎ) ಪ್ರಕರಣ ದಾಖಲಿಸದಿರಲು ಲಂಚಕ್ಕೆ ಬೇಡಿಕೆ ಇಟ್ಟಿದ್ದರು.  ಪೊಲೀಸರು ಆರೋಪಿಯನ್ನು ಜಿಲ್ಲಾ ಕಾರಾಗೃಹದಿಂದ ಹೊರಗಿನ ಜೈಲಿಗೆ ಸ್ಥಳಾಂತರ ಮಾಡುವುದನ್ನು ತಡೆಯಲು ಪಿಎಸ್​ಐ ಶ್ವೇತಾ ಮುಂದಾಗಿದ್ದರು.

 20 ಲಕ್ಷ ರೂ.  ಪಡೆದು, ಹೆಚ್ಚುವರಿಯಾಗಿ 15 ಲಕ್ಷ ರೂ.ಗೆ ಅತ್ಯಾಚಾರ ಆರೋಪಿ ಬಳಿ ಬೇಡಿಕೆ ಇಟ್ಟಿದ್ದರು. 20 ಲಕ್ಷ ರೂ. ಪಡೆದಿದ್ದಲ್ಲದೆ, ಹೆಚ್ಚುವರಿ ಹಣ ನೀಡುವಂತೆ ಪೀಡಿಸುತ್ತಿದ್ದಕ್ಕೆ ಅತ್ಯಾಚಾರ ಆರೋಪಿ ನೀಡಿದ ದೂರಿನ ಆಧಾರದ ಮೇಲೆ ಭ್ರಷ್ಟಾಚಾರ ತಡೆ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ಶ್ವೇತಾ ಅತ್ಯಾಚಾರದ ಆರೋಪಿ ಸಹೋದರ ಕೇನಾಲ್ ಶಾರಿಂದ ಕಳೆದ ಫೆಬ್ರವರಿಯಲ್ಲೇ ಹಣ ಪಡೆದಿದ್ದು ಹೆಚ್ಚಿನ ಹಣಕ್ಕೆ ಬೇಡಿಕೆ ಇಟ್ಟಿದ್ದರು.  ಅಹಮದಾಬಾದ್ನ ಕಂಪನಿಯೊಂದರ ಎಂಡಿ ಆಗಿರುವ ಶಾ ಸಹೋದರ ಅತ್ಯಾಚಾರದ ಜತೆ ಇನ್ನೊಂದು ಕ್ರಿಮಿನಲ್ ಪ್ರಕರಣವನ್ನು ಎದುರಿಸುತ್ತಿದ್ದಾನೆ. 

Follow Us:
Download App:
  • android
  • ios