ಕೇರಳ(ಜು. 26) ಮದುವೆ ಸಮಾರಂಭದಲ್ಲಿ ಎಚ್ಚರಿಕೆಯಿಂದ ಭಾಗವಹಿಸಿ ಎಂದು ಸರ್ಕಾರಗಳು ಮೇಲಿಂದ ಮೇಳೆ ಹೇಳಿಕೊಂಡೆ ಬಂದಿವೆ.  ಮದುಮಗ-ಮದುಮಗಳು ಸೇರಿ ಈ ಮದುವೆಯಲ್ಲಿ ಭಾಗವಹಿಸಿದ್ದ 43 ಜನರಿಗೆ ಕೊರೋನಾ ದೃಢವಾಗಿದೆ.

ಕೇರಳದ ಕಾಸರಗೋಡು ಜಿಲ್ಲೆ ಚೆಂಗಾಲಾದ ಮದುವೆ ಕೊರೋನಾ ಹಬ್ಬಲು ಕಾರಣವಾಗಿದೆ.  ಮದುವೆಯಲ್ಲಿ ಭಾಗವಹಿಸಿದ್ದ ಎಲ್ಲರೂ ಕ್ವಾರಂಟೈನ್ ಆಗುವಂತೆ ಕಾಸರಗೋಡು ಡಿಸಿ ತಿಳಿಸಿದ್ದಾರೆ.  ಜುಲೈ 17  ರಂದು ನಡೆದಿದ್ದ ಮದುವೆ ಕೊರೋನಾ ಹಾಟ್ ಸ್ಪಾಟ್ ಆಗಿ ಬದಲಾಗಿದೆ.

ಮಾಸ್ಕ್ ಧರಿಸದವರಿಗೆ ಕಿಮ್ ಶಾಕ್..ಅಬ್ಬಬ್ಬಾ

ಮದುವೆಯಲ್ಲಿ ಒಟ್ಟು ಎಷ್ಟು ಜನ ಭಾಗವಹಿಸಿದ್ದರು ಎಂಬ ಮಾಹಿತಿ ಕಲೆಹಾಕಲಾಗುತ್ತಿದೆ.  50 ಕ್ಕಿಂತ ಹೆಚ್ಚಿನ ಜನರು ಪಾಲ್ಗೊಳ್ಳಬಾರದು ಎಂಬ ನಿಯಮವನ್ನು ಇಲ್ಲಿ ಉಲ್ಲಂಘಿಸಿದಂತೆ ಕಂಡುಬರುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಮದುವೆ ಸಮಾರಂಭಕ್ಕೆ ಸಂಬಂಧಿಸಿ ಪ್ರಕರಣ ದಾಖಲಿಸಿ ಮತ್ತು 10  ಸಾವಿರ ರೂ. ದಂಡ ವಿಧಿಸಿ ಎಂದು ಜಿಲ್ಲಾಧಿಕಾರಿ ಸೂಚನೆ ನೀಡಿದ್ದು ದಯವಿಟ್ಟು ಇಂಥ ಸಮಾರಂಭಗಳನ್ನು ಆದಷ್ಟು ದಿನ ಮುಂದಕ್ಕೆ ಹಾಕಿ ಎಂದು ಕೋರಿಕೊಂಡಿದ್ದಾರೆ.