ಮಾಸ್ಕ್ ಧರಿಸದವರಿಗೆ ಶಾಕ್: ಕಿಮ್ ಆದೇಶಕ್ಕೆ ಜನರು ಗಾಬರಿ!
ತನ್ನ ದೇಶದಲ್ಲಿ ಕೊರೋನಾ ಪ್ರಕರಣಗಳೇ ಇಲ್ಲ ಎಂದು ವಾದಿಸುತ್ತಾ ಬಂದಿದ್ದ ಉತ್ತರ ಕೊರಿಯಾದಲ್ಲಿ ಮೊದಲ ಬಾರಿ ಕೊರೋನಾ ಶಂಕಿತ ಪ್ರಕರಣ ದಾಖಲಾಗಿದೆ ಎಂಬ ವರದಿಯೂ ಸದ್ದು ಮಾಡಿದೆ. ಇದರ ಬೆನ್ನಲ್ಲೇ ಕಿಮ್ ತನ್ನ ದೇಶದಲ್ಲಿ ಕೊರೋನಾ ನಿಯಂತ್ರಿಸಲು ಜಾರಿಗೆ ತಂದ ಕಠಿಣ ಕ್ರಮವೂ ಭಾರೀ ಸದ್ದು ಮಾಡಿದೆ. ಮಾಸ್ಕ್ ಸಂಬಂದಿಸಿದಂತೆ ಈ ಸರ್ವಾಧಿಕಾರಿ ಜಾರಿಗೊಳಿಸಿರುವ ಈ ಹೊಸ ರೂಲ್ ಜನರನ್ನೂ ನಡುಗಿಸಿದೆ.
ಅಮೆರಿಕೆಯ ನ್ಯೂಜ್ ಸೈಟ್ ರೇಡಿಯೋ ಫ್ರೀ ಏಷಿಯಾದ ವರದಿಯನ್ವಯ ಉತ್ತರ ಕೊರಿಯಾದಲ್ಲಿ ಕೋರೋನಾ ತಡೆಗಟ್ಟಲು ಬಹಳ ತುಂಬಾ ಕಠಿಣ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ.
ವಿಶ್ವದ ಬಹುತೇಕ ಎಲ್ಲಾ ರಾಷ್ಟ್ರಗಳಿಗೂ ಕೊರೋನಾ ವ್ಯಾಪಿಸಿದರೂ ಉತ್ತರ ಕೊರಿಯಾ ಮಾತ್ರ ಯಾವುದೇ ಕೊರೋನಾ ಪ್ರಕರಣ ವರದಿಯಾಗಿಲ್ಲ ಎನ್ನುತ್ತಲೇ ಬಂದಿತ್ತು.
ಆದರೆ ಇಂದು ಭಾನುವಾರ ಇಲ್ಲಿ ಕೊರೋನಾ ಶಂಕಿತ ಪ್ರಕರಣ ದಾಖಲಾಗಿರುವುದಾಗಿ ಅಲ್ಲಿನ ಮಾಧ್ಯಮಗಳು ವರದಿ ಮಾಡಿವೆ.
ಇದರ ಬೆನ್ನಲ್ಲೇ ಕಿಮ್ ಜಾಂಗ್ ಉನ್ ಕಠಿಣ ಕ್ರಮಗಳನ್ನು ಜಾರಿಗೊಳಿಸಲಾರಂಭಿಸಿದ್ದಾರೆ.
ಈಗಾಗಲೇ ತುರ್ತು ಪರಿಸ್ಥಿತಿಯಂತಹ ಲಾಕ್‌ಡೌನ್ ಹೇರಲು ಕಿಮ್ ಆದೇಶಿಸಿದ್ದಾರೆ ಎಂದೂ ವರದಿಯಲ್ಲಿ ಉಲ್ಲೇಖಿಸಲಾಗಿದೆ.
ಇದರ ಬೆನ್ನಲ್ಲೇ ಮಾಸ್ಕ್ ಧರಿಸುವ ವಿಚಾರದಲ್ಲೂ ಅಧಿಕಾರಿಗಳು ಕಟ್ಟು ನಿಟ್ಟಿನ ಕ್ರಮ ಹಾಗೂ ಉಲ್ಲಂಘಿಸಿದವರಿಗೆ ಕಠಿಣ ಶಿಕ್ಷೆಯನ್ನೂ ಜಾರಿಗೊಳಿಸಿದ್ದಾರೆನ್ನಾಗಿದೆ.
ಉತ್ತರ ಕೊರಿಯಾದಲ್ಲಿ ಮಾಸ್ಕ್ ಧರಿಸದ ಯಾರೇ ಇದ್ದರೂ ಅವರಿಗೆ 3 ತಿಂಗಳುಗಳ ವರೆಗೆ ಕೂಲಿ ಕಾರ್ಮಿಕನಂತೆ ದುಡಿಯುವ ಕಠಿಣ ಶಿಕ್ಷೆ ಕೊಡಲಾಗುವುದು ಎಂದು ಕಿಮ್ ಶಿಸಿದ್ದಾರೆನ್ನಲಾಗಿದೆ.
ಸರ್ವಾಧಿಕಾರಿ ಕಿಮ್ ಜಾಂಗ್ ನ ಈ ಆದೇಶದಿಂದ ಜನರಲ್ಲಿ ಆತಂಕ ಮೂಡಿದೆ.
ಉತ್ತರ ಕೊರಿಯಾದಲ್ಲಿ ಸದ್ಯಕ್ಕೆ ಈ ಆದೇಶ ಜಾರಿಯಲ್ಲಿ ತರಲು ಪೊಲೀಸರ ಜೊತೆಗೆ ಕಾಲೇಜ್ ಹಾಗೂ ಹೈಸ್ಕೂಲ್ ವಿದ್ಯಾರ್ಥಿಗಳ ತಂಡವನ್ನು ನೇಮಕ ಮಾಡಲಾಗಿದೆ.