Asianet Suvarna News Asianet Suvarna News

ಮದುವೆ ಬೆನ್ನಲ್ಲೇ ಮಾರ್ಶಿಯಲ್ ಆರ್ಟ್ಸ್ ಪ್ರದರ್ಶಿಸಿದ ವಧು; ಬೆಚ್ಚಿಬಿದ್ದ ವರ!

  • ತಾಳಿ ಕಟ್ಟಿದ ಬೆನ್ನಲ್ಲೇ ಮಾರ್ಶಿಯಲ್ ಆರ್ಟ್ಸ್ ಪ್ರದರ್ಶಿಸಿದ ವಧು
  • ವಧುವಿನ ಕಸರತ್ತಿಗೆ ಚಪ್ಪಾಳೆ, ಶಿಳ್ಳೆಯ  ಪ್ರೋತ್ಸಾಹ ನೀಡಿದ ಕುಟುಂಬ
  • ಮದುವೆ ಬೆನ್ನಲ್ಲೇ ಮಾರ್ಶಿಯಲ್ ಆರ್ಟ್ಸ್ ಕಸರತ್ತಿನಿಂದ ಬೆಚ್ಚಿ ಬಿದ್ದ ವರ
Bride decided to entertain guests with her martial arts skills during her wedding Tamil nadu ckm
Author
Bengaluru, First Published Jul 1, 2021, 3:51 PM IST

ತಮಿಳುನಾಡು(ಜು.01):  ಮದುವೆ ಮಂಟಪದಲ್ಲಿ ವಧು-ವರ ಡ್ಯಾನ್ಸ್ ಮಾಡಿರುವುದು, ಹಾಡು ಸೇರಿದಂತೆ ತಮ್ಮ ಪ್ರತಿಭೆಗಳ ಮೂಲಕ ಕುಟುಂಬಸ್ಥರನ್ನು ನೆರೆದಿದ್ದವರಿಗೆ ಸರ್ಪ್ರೈಸ್ ನೀಡಿದ ಹಲವು ಊದಾಹರಣೆಗಳಿವೆ. ಇಲ್ಲೊಂದು ಮದುವೆಯಲ್ಲಿ ಇದೀ ರೀತಿ ತಾನು ಪಳಗಿರುವ ಕ್ಷೇತ್ರವಾದ ಮಾರ್ಶಿಯಲ್ ಆರ್ಟ್ಸ್ ಪ್ರದರ್ಶಿಸಿದ್ದಾಳೆ. ಕುಟುಂಬಸ್ಥರೆಲ್ಲಾ ಚಪ್ಪಾಳೆ ಹೊಡದು ವಧುವನ್ನು ಪ್ರೋತ್ಸಾಸಿದ್ದಾರೆ. ಆದೆರ ವರನಿಗೆ ಈಗಲೇ ಆತಂಕ ಶುರುವಾಗಿದೆ. 

ಮಾಡರ್ನ್ ಸೀತಾ ಸ್ವಯಂವರ: ಧನಸ್ಸು ಮುರಿದು ಮದುವೆಯಾದ ಯುವಕ

ತಮಿಳುನಾಡಿನಲ್ಲಿ ಕೊರೋನಾ ತಗ್ಗಿದ ಪರಿಣಾಮ ಕೆಲ ಜಿಲ್ಲೆಗಳಲ್ಲಿ ಮದುವೆ ಸಮಾರಂಭಕ್ಕೆ ಅವಕಾಶ ಮಾಡಿಕೊಡಲಾಗಿದೆ. ಹೀಗೆ ತಿರುಕೋಲುರ ಗ್ರಾಮದಲ್ಲಿ ನಡೆದ ಮದುವೆ ಸಮಾರಂಭದಲ್ಲಿ ತಾಳಿ ಕಟ್ಟಿದ ಬೆನ್ನಲ್ಲೇ ವಧು ಪಿ ನಿಶಾ, ಸೀರೆ ಹಾಗೂ ಹೂವಿನ ಮಾಲೆಯೊಂದಿಗೆ ಮಾರ್ಶಲ್ ಆರ್ಟ್ಸ್ ಪ್ರದರ್ಶಿಸಿದ್ದಾರೆ.

 

ತಮಿಳುನಾಡಿನ ಕೆಲ ಗ್ರಾಮದಲ್ಲಿರುವ ಸಾಂಪ್ರಾದಾಯಿಕ ಕಲೆ ಸಿಲಂಬಂ(ಮಾರ್ಶಿಯಲ್ ಆರ್ಟ್ಸ್) ಪ್ರದರ್ಶಿಸಿದ ವಧು ನಿಶಾ ಇದೀಗ ಸಾಮಾಜಿಕ ತಾಲತಾಣದಲ್ಲಿ ವೈರಲ್ ಆಗಿದ್ದಾಳೆ. ತನ್ನ ತಾಯಿಯಿಂದ ಈ ಕಲೆ ಕಲಿತುಕೊಂಡಿದ್ದು, ತಮಿಳುನಾಡಿನ ಎಲ್ಲಾ ಹೆಣ್ಮು ಮಕ್ಕಳು ಮಾರ್ಶಿಯಲ್ ಆರ್ಟ್ಸ್ ಕರಗತ ಮಾಡಿಕೊಂಡಿರುವ ಬೇಕು. ಆರೋಗ್ಯದ ಜೊತೆಗೆ ರಕ್ಷಣೆಗೂ ಇದು ಉತ್ತಮ ಎಂದು ಪಿ ನಿಶಾ ಹೇಳಿದ್ದಾರೆ.

ಗಡಿ ತೀರದ ಗ್ರಾಮ, ಗಡಿಯಾಚೆಗಿನ ಪ್ರೇಮ; ಮದ್ವೆಯಾದ ನವ ಜೋಡಿ ಅರೆಸ್ಟ್!

ಮದುವೆಯಾದ ಬೆನ್ನಲ್ಲೇ ಮಾರ್ಶಿಯಲ್ ಆರ್ಟ್ಸ್ ಪ್ರದರ್ಶನ ಮಾಡಿರುವುದು ವರ ಕುಟುಂಬಸ್ಥರಲ್ಲಿ ಕೊಂಚ ಆತಂಕ ಮೂಡಿಸಿದೆ. ಮದುವೆ ದಿನವೇ ಕೋಲು ಹಿಡಿದ ವಧು, ಮುಂದಿನ ದಿನದಲ್ಲಿ ನಮ್ಮ ವರನ ಪಾಡು ಕಷ್ಟ ಇದೆ ಎಂದು ಹುಡುಗನ ಕುಟುಂಬಸ್ಥರು ಆತಂಕ ವ್ಯಕ್ತಪಡಿಸಿದ್ದಾರೆ. 

ವಧು ಮಾರ್ಶಿಯಲ್ ಆರ್ಟ್ಸ್‌ನಲ್ಲಿ ಪಳಗಿರುವುದನ್ನು ಅರಿತ ವರ ರಾಜ್ ಕುಮಾರ್, ಮದುವೆ ದಿನವೆ ಮಾರ್ಶಿಯಲ್ ಆರ್ಟ್ಸ್ ಪ್ರದರ್ಶಿಸಲು ಮನವಿ ಮಾಡಿದ್ದಾನೆ. ಭಾವಿ ಪತ್ನಿ ಮನವಿ ಸ್ವೀಕರಿಸಿದ ವಧು, ಪಿ ನಿಶಾ ಮಾರ್ಶಿಯಲ್ ಆರ್ಟ್ಸ್ ಪ್ರದರ್ಶನ ನೀಡಿದ್ದಾಳೆ. ಆಕೆಯ ಕಲೆಯನ್ನು ಪ್ರೋತ್ಸಾಹಿಸಲು ಈ ಪ್ರದರ್ಶನಕ್ಕೆ ಒತ್ತಾಯಿಸಿದ್ದೆ ಎಂದು ರಾಜ್ ಕುಮಾರ್ ಹೇಳಿದ್ದಾರೆ. ಈ ಪ್ರದರ್ಶನ ಇದೀಗ ವೈರಲ್ ಆಗಿದೆ.

Follow Us:
Download App:
  • android
  • ios