'ನಮಸ್ಕಾರ ಮೋದಿಜಿ': ಹರಿಣಗಳ ನಾಡಿಗೆ ಆತ್ಮೀಯವಾಗಿ ಸ್ವಾಗತಿಸಿದ, ಗ್ಯಾರಿ ಕರ್ಸ್ಟನ್, ಜಾಂಟಿ ರೋಡ್ಸ್..!
ದಕ್ಷಿಣ ಆಫ್ರಿಕಾದ ಅಧ್ಯಕ್ಷರಾದ ಮಟಾಮೆಲಾ ಸಿರಿಲ್ ರಾಮಾಪೋಸಾ ಅವರು 15ನೇ ಬಿಕ್ಸ್ ಸಮ್ಮೇಳನದಲ್ಲಿ ಭಾಗವಹಿಸುವಂತೆ ಪ್ರಧಾನಿ ನರೇಂದ್ರ ಮೋದಿಯವರಿಗೆ ಆಹ್ವಾನ ನೀಡಿದ್ದರು. ಇನ್ನು ಇದೇ ವೇಳೆ ಗ್ಯಾರಿ ಕರ್ಸ್ಟನ್, ತಾವು ತಮ್ಮ ಕುಟುಂಬದ ಜತೆ ಎರಡು ವಾರಗಳ ಕಾಲ 'ಇನ್‌ಕ್ರಿಡಿಬಲ್ ಇಂಡಿಯಾ'ದ ಅನುಭವವನ್ನು ಮೆಲುಕು ಹಾಕಿದ್ದಾರೆ.
ಜೋಹಾನ್ಸ್‌ಬರ್ಗ್(ಆ.21): ಭಾರತದ ಪ್ರಧಾನಿ ನರೇಂದ್ರ ಮೋದಿ ಇದೇ ಆಗಸ್ಟ್ 22ರಿಂದ 24ರ ವರೆಗೆ ಜೋಹಾನ್ಸ್‌ಬರ್ಗ್‌ನಲ್ಲಿ ನಡೆಯಲಿರುವ 15ನೇ ಬ್ರಿಕ್ಸ್ ಸಮ್ಮೇಳನದಲ್ಲಿ ಭಾಗವಹಿಸಲು ದಕ್ಷಿಣ ಆಫ್ರಿಕಾಗೆ ಇಂದು ಪ್ರಯಾಣ ಬೆಳೆಸಲಿದ್ದಾರೆ. ಹೀಗಿರುವಾಗಲೇ ದಕ್ಷಿಣ ಆಫ್ರಿಕಾ ತಂಡದ ದಿಗ್ಗಜ ಕ್ರಿಕೆಟಿಗರಾದ ಗ್ಯಾರಿ ಕರ್ಸ್ಟನ್ ಹಾಗೂ ಜಾಂಟಿ ರೋಡ್ಸ್, ಪ್ರಧಾನಿ ಮೋದಿಯವರನ್ನು ಆತ್ಮೀಯವಾಗಿ ಸ್ವಾಗತಿಸಿದ್ದಾರೆ.
ದಕ್ಷಿಣ ಆಫ್ರಿಕಾದ ಅಧ್ಯಕ್ಷರಾದ ಮಟಾಮೆಲಾ ಸಿರಿಲ್ ರಾಮಾಪೋಸಾ ಅವರು 15ನೇ ಬಿಕ್ಸ್ ಸಮ್ಮೇಳನದಲ್ಲಿ ಭಾಗವಹಿಸುವಂತೆ ಪ್ರಧಾನಿ ನರೇಂದ್ರ ಮೋದಿಯವರಿಗೆ ಆಹ್ವಾನ ನೀಡಿದ್ದರು. ಇನ್ನು ಇದೇ ವೇಳೆ ಗ್ಯಾರಿ ಕರ್ಸ್ಟನ್, ತಾವು ತಮ್ಮ ಕುಟುಂಬದ ಜತೆ ಎರಡು ವಾರಗಳ ಕಾಲ 'ಇನ್‌ಕ್ರಿಡಿಬಲ್ ಇಂಡಿಯಾ'ದ ಅನುಭವವನ್ನು ಮೆಲುಕು ಹಾಕಿದ್ದಾರೆ. "ನಮಸ್ಕಾರ ಮೋದಿಜಿ, ಬಿಕ್ಸ್ ಸಮ್ಮೇಳನಕ್ಕೆ ತಮಗೆ ಆತ್ಮೀಯವಾದ ಸ್ವಾಗತ. ಜಾಗತಿಕ ಮಟ್ಟದಲ್ಲಿ ಅಂತಾರಾಷ್ಟ್ರೀಯ ರಾಜಕೀಯ ಹಾಗೂ ಆರ್ಥಶಾಸ್ತ್ರದಲ್ಲಿ ನೀವೊಬ್ಬರು ರೋಲ್ ಮಾಡೆಲ್ ಎನ್ನುವುದು ದಕ್ಷಿಣ ಆಫ್ರಿಕಾದವರಾದ ನಮಗೆಲ್ಲರಿಗೂ ಗೊತ್ತಿದೆ. ನಿಮ್ಮ ಒಳನೋಟಕ್ಕಾಗಿ ಧನ್ಯವಾದಗಳು ಎಂದು ಜಾಂಟಿ ರೋಡ್ಸ್ ವಿಡಿಯೋ ಸಂದೇಶ ರವಾನಿಸಿದ್ದಾರೆ.
ಇನ್ನು ಟೀಂ ಇಂಡಿಯಾ ಮಾಜಿ ಕೋಚ್ ಗ್ಯಾರಿ ಕರ್ಸ್ಟನ್, "ದಕ್ಷಿಣ ಆಫ್ರಿಕಾಗೆ ನಿಮ್ಮನ್ನು ಸ್ವಾಗತಿಸಲು ಅವಕಾಶ ಸಿಕ್ಕಿದ್ದು ನಮ್ಮ ಸೌಭಾಗ್ಯವೆಂದು ಭಾವಿಸುತ್ತೇವೆ. ನಾನು ಓರ್ವ ಆಟಗಾರನಾಗಿ ಹಾಗೂ ಕೋಚ್ ಆಗಿ ಭಾರತದಲ್ಲಿ ಸಾಕಷ್ಟು ಒಳ್ಳೆಯ ಕ್ಷಣಗಳನ್ನು ಕಳೆದಿದ್ದೇನೆ. ನಾನು ಕೋಚ್ ಆದ ಸಂದರ್ಭದಲ್ಲಿ ಒಂದಷ್ಟು ತಮಾಷೆ ಕ್ಷಣಗಳನ್ನು ಅನುಭವಿಸಿದ್ದೇನೆ. ಅದೇ ರೀತಿ ಭಾರತದ ಜನರ ಬೆಂಬಲಕ್ಕೆ ಋಣಿಯಾಗಿದ್ದೇನೆ. ಈ ವರ್ಷ ಜಾಗತಿಕ ಕ್ರಿಕೆಟ್ ಮಟ್ಟದಲ್ಲಿ ತುಂಬಾ ವಿಶೇಷವಾದದ್ದು, ಯಾಕೆಂದರೆ ಈ ಬಾರಿ ಏಕದಿನ ವಿಶ್ವಕಪ್ ಟೂರ್ನಿಗೆ ಭಾರತ ಆತಿಥ್ಯ ವಹಿಸುತ್ತಿದೆ. ಬ್ರಿಕ್ಸ್ ಸಮ್ಮೇಳನದಲ್ಲಿ ಭಾಗವಹಿಸುತ್ತಿರುವ ಎಲ್ಲರಿಗೂ ಧನ್ಯವಾದಗಳು ಎಂದು 2011ರಲ್ಲಿ ಭಾರತ ಏಕದಿನ ವಿಶ್ವಕಪ್ ಚಾಂಪಿಯನ್ ತಂಡದ ಹೆಡ್ ಕೋಚ್ ಗ್ಯಾರಿ ಕರ್ಸ್ಟನ್ ಶುಭ ಹಾರೈಸಿದ್ದಾರೆ.
ಚಂದ್ರಯಾನ-3 ಲ್ಯಾಂಡಿಂಗ್ ಸಂಭ್ರಮಕ್ಕೆ ಇರೋದಿಲ್ಲ ಪ್ರಧಾನಿ ನರೇಂದ್ರ ಮೋದಿ!
ಜಾಂಟಿ ರೋಡ್ಸ್ ಹಾಗೂ ಗ್ಯಾರಿ ಕರ್ಸ್ಟನ್‌ಗೆ ಭಾರತದ ಜತೆ ಅವಿನಾಭಾವ ಸಂಬಂಧವಿದೆ. ಗ್ಯಾರಿ ಕರ್ಸ್ಟನ್ 2008ರಿಂದ 2011ರವರೆಗೆ ಭಾರತ ಕ್ರಿಕೆಟ್ ತಂಡದ ಹೆಡ್ ಕೋಚ್ ಆಗಿ ಕಾರ್ಯನಿರ್ವಹಿಸಿದ್ದರು. ಗ್ಯಾರಿ ಕರ್ಸ್ಟನ್ ಮಾರ್ಗದರ್ಶನದಲ್ಲಿ 2011ರಲ್ಲಿ ಟೀಂ ಇಂಡಿಯಾ 28 ವರ್ಷಗಳ ಬಳಿಕ ಏಕದಿನ ಚಾಂಪಿಯನ್ ಆಗಿ ಹೊರಹೊಮ್ಮಿತ್ತು. ಗ್ಯಾರಿ ಅಂತಹ ಬಲಿಷ್ಠ ತಂಡವನ್ನು ಕಟ್ಟುವಲ್ಲಿ ಪ್ರಮುಖ ಪಾತ್ರವಹಿಸಿದ್ದರು.
ಇನ್ನೊಂದೆಡೆ ಜಾಂಟಿ ರೋಡ್ಸ್, ಕ್ರಿಕೆಟ್ ಜಗತ್ತು ಕಂಡ ಶ್ರೇಷ್ಠ ಕ್ಷೇತ್ರರಕ್ಷಕ ಎನ್ನುವ ಹಿರಿಮೆಯನ್ನು ಸಂಪಾದಿಸಿದ್ದಾರೆ. ಜಾಂಟಿ ರೋಡ್ಸ್, ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಗುಡ್ ಬೈ ಹೇಳಿದ ಬಳಿಕ ಐಪಿಎಲ್‌ನಲ್ಲಿ ಮುಂಬೈ ಇಂಡಿಯನ್ಸ್, ಕಿಂಗ್ಸ್ ಇಲೆವನ್ ಪಂಜಾಬ್(ಈಗ ಪಂಜಾಬ್ ಕಿಂಗ್ಸ್), ಸದ್ಯ ಹಾಲಿ ಲಖನೌ ಸೂಪರ್ ಜೈಂಟ್ಸ್ ತಂಡದ ಫೀಲ್ಡಿಂಗ್ ಕೋಚ್ ಆಗಿದ್ದಾರೆ.