Asianet Suvarna News Asianet Suvarna News

ಧರ್ಮ, ಸಂಸ್ಕೃತಿ ಉಳಿಸುತ್ತಿರುವ ಬಾಹ್ಮಣರಿಗೆ ಕಲ್ಯಾಣ ಮಂಡಳಿ ಸ್ಥಾಪನೆ, ಸಿಎಂ ಚವ್ಹಾಣ್ ಘೋಷಣೆ!

ದೇವಸ್ಥಾನದ ಯಾವುದೇ ಚುಟವಟಿಕೆಯಲ್ಲಿ ಸರ್ಕಾರ ಮೂಗು ತೂರಿಸಲ್ಲ. ಇದರ ಸಂಪೂರ್ಣ ಹಕ್ಕು ದೇವಸ್ಥಾನ, ಅಲ್ಲಿನ ಅರ್ಚಕರು, ಆಡಳಿಕ ಮಂಡಳಿಗೆ ಸೇರಿದ್ದು. ಧರ್ಮ ,ಸಂಸ್ಕೃತಿ ಉಳಿಸುತ್ತಿರುವ ಬ್ರಾಹ್ಮಣರಿಗಾಗಿ ಕಲ್ಯಾಣ ಮಂಡಳಿ ಸ್ಥಾಪನೆ ಮಾಡುವುದಾಗಿ ಸಿಎಂ ಚವ್ಹಾಣ್ ಘೋಷಿಸಿದ್ದಾರೆ.
 

Brahmins protects religious and culture of India MP CM shivraj singh chouhan announces setup Welfare board ckm
Author
First Published Apr 23, 2023, 7:35 PM IST

ಭೋಪಾಲ್(ಏ.23): ದೇವಸ್ಥಾನಗಳು, ಮಂದಿರಗಳು ಸರ್ಕಾರದ ನಿಯಂತ್ರಣದಲ್ಲಿ ಯಾಕಿರಬೇಕು ಅನ್ನೋ ಚರ್ಚೆ ಕಳೆದ ಕೆಲ ವರ್ಷಗಳಿಂದ ನಡೆಯುತ್ತಿದೆ. ಇದಕ್ಕಾಗಿ ತೀವ್ರ ಹೋರಾಟವೂ ನಡೆದಿದೆ. ಇದರ ಬೆನ್ನಲ್ಲೇ ಮಧ್ಯಪ್ರದೇಶ ಸರ್ಕಾರ ಮಹತ್ವದ ನಿರ್ಣಯ ತೆಗೆದುಕೊಂಡಿದೆ. ದೇವಸ್ಥಾನದ ಯಾವುದೇ ಚಟುವಟಿಕೆಯಲ್ಲಿ ಸರ್ಕಾರ, ಮೂಗುು ತೂರಿಸಲ್ಲ ಎಂದು ಘೋಷಿಸಿದ್ದಾರೆ. ಸರ್ಕಾರದ ಇಲಾಖೆ, ಜಿಲ್ಲಾಧಿಕಾರಿಗಳು ದೇವಸ್ಥಾನದ ಚುಟವಟಿಕೆ ಕುರಿತು ಯಾವುದೇ ನಿರ್ಧಾರ ತೆಗೆದುಕೊಳ್ಳುವುದು. ಇದು ದೇವಸ್ಥಾನದ ಅರ್ಚಕರು ನಿರ್ಧರಿಸಲಿದ್ದಾರೆ ಎಂದು ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚವ್ಹಾಣ್ ಹೇಳಿದ್ದಾರೆ. 

ಭೋಪಾಲದಲ್ಲಿ ಪರಶುರಾಮ ಜಯಂತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಸಿಎಂ ಚವ್ಹಾಣ್, ಮಹತ್ವದ ಘೋಷಣೆ ಮಾಡಿದ್ದಾರೆ. ದೇವಸ್ಥಾನದ ಎಲ್ಲಾ ಚಟುವಟಿಕೆ, ದೇವಸ್ಥಾನದ ಜಮೀನು ಹರಾಜು, ದೇವಸ್ಥಾನದ ಪೂಜೆ ಸೇರಿದಂತೆ ಎಲ್ಲಾ ಚಟುವಟಿಕೆಗಳನ್ನು ಸರ್ಕಾರ ನಿಯಂತ್ರಿಸುವುದಿಲ್ಲ. ಜಿಲ್ಲಾಧಿಕಾರಿಗಳು ಈ ಕುರಿತು ತಲೆಹಾಕಲ್ಲ. ಅರ್ಚಕರು, ಆಡಳಿತ ಮಂಡಳಿ ಈ ಎಲ್ಲಾ ವಿಚಾರಗಳ ಜವಾಬ್ದಾರಿ ವಹಿಸಲಿದೆ ಎಂದು ಚವ್ಹಾಣ್ ಹೇಳಿದ್ದಾರೆ.

Hindu Culture : ಪೂಜಾರಿ ಜುಟ್ಟು ಬಿಡಲು ಕಾರಣವೇನು ಗೊತ್ತಾ?

ಅರ್ಚಕರು ದೇವಸ್ಥಾನದ ಪಾವಿತ್ಯತೆ ಕಾಪಾಡುತ್ತಿದ್ದಾರೆ. ಬ್ರಾಹ್ಮಣ ಸಮುದಾಯ ಈ ದೇಶದ ಧರ್ಮ ಹಾಗೂ ಸಂಸ್ಕೃತಿಯನ್ನು ಉಳಿಸುವ ಕೆಲಸವಾಗುತ್ತಿದೆ. ಹೀಗಾಗಿ ಮಧ್ಯಪ್ರದೇಶದಲ್ಲಿ ಬಾಹ್ಮಣ ಕಲ್ಯಾಣ ಮಂಡಳಿ ಸ್ಥಾಪಿಸುವುದಾಗಿ ಶಿವರಾಜ್ ಸಿಂಗ್ ಚವ್ಹಾಣ್ ಘೋಷಿಸಿದ್ದಾರೆ. 

ಶಿವರಾಜ್ ಸಿಂಗ್ ಚವ್ಹಾಣ್ ಕರ್ನಾಟಕ ವಿಧಾಸಭಾ ಚುನಾವಣೆಗೆ ಬಿಜೆಪಿ ಸ್ಟಾರ್ ಪ್ರಚಾರಕರಾಗಿದ್ದಾರೆ. ಈಗಾಗಲೇ ಹೊಸಪೇಟೆಯಲ್ಲಿ ಅಬ್ಬರ ಪ್ರಚಾರ ಮಾಡಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರು ನವ ಭಾರತದ ನಿರ್ಮಾಣಕ್ಕೆ ಪಣ ತೊಟ್ಟಿದ್ದಾರೆ. ಡಬಲ್‌ ಎಂಜಿನ್‌ ಸರ್ಕಾರ ಕರ್ನಾಟಕದ ಅಭಿವೃದ್ಧಿಗೂ ಸಹಕಾರಿಯಾಗಲಿದ್ದು, ವಿಧಾನಸಭೆ ಚುನಾವಣೆಯಲ್ಲಿ ಮತ್ತೊಮ್ಮೆ ಬಿಜೆಪಿ ಸರ್ಕಾರವನ್ನು ಅಧಿಕಾರಕ್ಕೆ ತರಬೇಕು. ಕಾಂಗ್ರೆಸ್‌ ಯಾವತ್ತೂ ವಿನಾಶ ಪಾರ್ಟಿಯಾಗಿದೆ ಎಂದು ಮಧ್ಯಪ್ರದೇಶದ ಮುಖ್ಯಮಂತ್ರಿ ಶಿವರಾಜ್‌ ಸಿಂಗ್‌ ಚೌಹಾಣ್‌ ಹೇಳಿದ್ದರು. 

 

ದೇಗುಲಗಳ ತಸ್ತೀಕ್‌ ಹಣ 60000ಕ್ಕೆ ಏರಿಸಿ ಸರ್ಕಾರ ಆದೇಶ

ಬಿಜೆಪಿ ವಿಜಯ ಸಂಕಲ್ಪಯಾತ್ರೆ ಹಿನ್ನೆಲೆ ನಗರದ ವಡಕರಾಯ ದೇವಾಲಯದಿಂದ ಗುರುವಾರ ಬೃಹತ್‌ ರೋಡ್‌ ಶೋ ನಡೆಸಿ, ವಾಲ್ಮೀಕಿ ವೃತ್ತದಲ್ಲಿ ಮಾತನಾಡಿದ ಅವರು, ಈ ಹಿಂದೆ ಕರ್ನಾಟಕದ ಆಡಳಿತ ಹೇಗಿತ್ತು, ಯಡಿಯೂರಪ್ಪ ಸರ್ಕಾರ ಹಾಗೂ ಬಸವರಾಜ ಬೊಮ್ಮಾಯಿ ಸರ್ಕಾರದಲ್ಲಿ ಕರ್ನಾಟಕ ಅಭಿವೃದ್ಧಿಪಥದತ್ತ ಸಾಗಿದೆ. ಈ ವ್ಯತ್ಯಾಸವನ್ನು ಜನರು ಪರಿಗಣಿಸಿ, ಮತ್ತೊಮ್ಮೆ ಬಿಜೆಪಿಯನ್ನು ಅಧಿಕಾರಕ್ಕೆ ತರಬೇಕು ಎಂದಿದ್ದರು.ಹೊಸಪೇಟೆ ರಸ್ತೆಯಲ್ಲಿ ಮಾತ್ರವಲ್ಲದೆ, ದೇಶಾದ್ಯಂತ ಮೋದಿ ಪರ ಘೋಷಣೆ ಇದೆ. ನಮ್ಮ ದೇಶದಲ್ಲಿ ಅಷ್ಟೇ ಅಲ್ಲ, ಪಾಕಿಸ್ತಾನದಲ್ಲೂ ಮೋದಿ ಪರ ಘೋಷಣೆ ಮೊಳಗಿಸುತ್ತಾರೆ. ಪ್ರಧಾನಿ ಮೋದಿ ಅವರು ವಿಶ್ವದ ಸಮರ್ಥ ನಾಯಕರಾಗಿದ್ದಾರೆ. ಮೋದಿ ಅವರ ಕೈಬಲಪಡಿಸಲು ಕರ್ನಾಟಕದಲ್ಲಿ ಮತ್ತೊಮ್ಮೆ ಬಿಜೆಪಿಗೆ ಮತ ಚಲಾಯಿಸಬೇಕು ಎಂದರು.
 

Follow Us:
Download App:
  • android
  • ios