ಪ್ರಧಾನಿ ನರೇಂದ್ರ ಮೋದಿಯವರು ಅಸ್ಸಾಂನಲ್ಲಿ ಬ್ರಹ್ಮಪುತ್ರಾ ನದಿಯ ಮೇಲೆ ನಿರ್ಮಿಸಲಾದ 'ಕುಮಾರ ಭಾಸ್ಕರ ವರ್ಮ ಸೇತು'ವನ್ನು ಉದ್ಘಾಟಿಸಿದ್ದಾರೆ. ಈ 6 ಪಥದ ಅತ್ಯಾಧುನಿಕ ಪಿಎಸ್‌ಸಿ ಸೇತುವೆಯು ಗುವಾಹಟಿ ಮತ್ತು ಉತ್ತರ ಗುವಾಹಟಿ ನಡುವಿನ ಪ್ರಯಾಣದ ಸಮಯವನ್ನು ಗಣನೀಯವಾಗಿ ಕಡಿಮೆ ಮಾಡಲಿದೆ. 

ಗುವಾಹಟಿ (ಫೆ.15): ಅಸ್ಸಾಂ ವಿಧಾನಸಭಾ ಚುನಾವಣೆಗೆ ಕೆಲವೇ ತಿಂಗಳು ಬಾಕಿಯಿರುವಾಗಲೇ, ಪ್ರಧಾನಿ ನರೇಂದ್ರ ಮೋದಿಯವರು 3,030 ಕೋಟಿ ರು. ವೆಚ್ಚದಲ್ಲಿ ಬ್ರಹ್ಮಪುತ್ರಾ ನದಿಯ ಮೇಲೆ ನಿರ್ಮಿಸಲಾದ ಅತ್ಯಾಧುನಿಕ ಸೇತುವೆ ಸೇರಿ ವಿವಿಧ ಯೋಜನೆಗಳಿಗೆ ಶನಿವಾರ ಚಾಲನೆ ನೀಡಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಇದು ಈಶಾನ್ಯ ಭಾರತದ ಮೊದಲ ಎಕ್‌ಸ್ಟ್ರಾಡೋಸ್ಡ್‌ ಪ್ರಿಸ್ಟ್ರೆಸ್ಡ್‌ ಕಾಂಕ್ರೀಟ್‌ (ಪಿಎಸ್‌ಸಿ) ಸೇತುವೆ ಎಂಬ ಖ್ಯಾತಿ ಪಡೆದಿದೆ.ಗುವಾಹಟಿಯಿಂದ ಉತ್ತರ ಗುವಾಹಟಿಯನ್ನು ಸಂಪರ್ಕಿಸುವ ‘ಕುಮಾರ ಭಾಸ್ಕರ ವರ್ಮ ಸೇತು’ 6 ಪಥದ ಬೃಹತ್‌ ಸೇತುವೆಯಾಗಿದ್ದು, ಗುವಾಹಟಿ ನಗರ ಮತ್ತು ಉತ್ತರ ಗುವಾಹಟಿ ಸಂಚಾರ ಸಮಯವನ್ನು 7 ನಿಮಿಷಕ್ಕೆ ಇಳಿಕೆ ಮಾಡಲಿದೆ. ಇದುವರೆಗೆ ಸರೈಘಾಟ್‌ ಸೇತುವೆ ಮೂಲಕ ಸಂಚರಿಸಲು 30 ನಿಮಿಷ ಬೇಕಾಗಿತ್ತು.

ಏನಿದು ಪಿಎಸ್‌ಸಿ ಸೇತುವೆ?

ಎಕ್‌ಸ್ಟ್ರಾಡೋಸ್ಡ್‌ ಪ್ರಿಸ್ಟ್ರೆಸ್ಡ್‌ ಕಾಂಕ್ರೀಟ್‌ (ಪಿಎಸ್‌ಸಿ) ಎಂದರೆ ಒಳಗೆ ಟೊಳ್ಳಾಗಿರುವ, ಪೆಟ್ಟಿಗೆ ಆಕಾರದಲ್ಲಿರುವ ಕಾಂಕ್ರೀಟ್‌ ಮತ್ತು ಕೇಬಲ್‌ ಸಂಪರ್ಕವನ್ನು ಹೊಂದಿರುವ ಅತ್ಯಾಧುನಿಕ ಸೇತುವೆ.ಈ ಪ್ರದೇಶದ ಹೆಚ್ಚಿನ ಭೂಕಂಪನವನ್ನು ಪರಿಗಣಿಸಿ, ಸೇತುವೆಯ ಮೇಲೆ ಬೇರಿಂಗ್‌ಗಳನ್ನು ಬಳಸಿಕೊಂಡು ಬೇಸ್ ಐಸೊಲೇಷನ್ ತಂತ್ರಜ್ಞಾನವನ್ನು ಅಳವಡಿಸಲಾಗಿದೆ. ಇದು ಭೂಕಂಪನ ರಕ್ಷಣಾ ವಿಧಾನವಾಗಿದ್ದು, ಬೇರಿಂಗ್‌ಗಳು ಅಥವಾ ಪ್ಯಾಡ್‌ಗಳ ಮೂಲಕ ಸೇತುವೆಯನ್ನು ಅಡಿಪಾಯಕ್ಕೆ ಜೋಡಿಸಲಾಗುತ್ತದೆ. ಇದು ಭೂಮಿ ಕಂಪಿಸಿದಾಗಲೂ ಸೇತುವೆ ಸ್ಥಿರವಾಗಿರಲು ಅನುವು ಮಾಡಿಕೊಡುತ್ತದೆ. ಜೊತೆಗೆ ಆರಂಭಿಕ ಹಾನಿ ಪತ್ತೆ, ಸೇತುವೆಯ ಹೆಚ್ಚುವರಿ ಸುರಕ್ಷತೆ ಮತ್ತು ಆರೋಗ್ಯ ಮೇಲ್ವಿಚಾರಣಾ ವ್ಯವಸ್ಥೆಯನ್ನು ಸಹ ಅಳವಡಿಸಲಾಗಿದೆ.

YouTube video player