ಕ್ಯಾಡ್‌ಬರಿ ಜಾಹೀರಾತಿಗೂ ಮೋದಿಗೂ ಸಂಬಂಧ..! ಟ್ವಿಟ್ಟರ್‌ನಲ್ಲಿ ಟ್ರೆಂಡ್‌ ಆದ 'Boycott Cadbury'..!

ಸಾಮಾಜಿಕ ಮಾಧ್ಯಮ ಬಳಕೆದಾರರು ಕಂಪನಿಯ ಇತ್ತೀಚಿನ ದೀಪಾವಳಿ ಜಾಹೀರಾತನ್ನು ಗುರಿಯಾಗಿಸಿಕೊಂಡಿದ್ದಕ್ಕೆ ಈ ಟ್ರೆಂಡ್‌ ಆಗುತ್ತಿದೆ.  ವಿಎಚ್‌ಪಿ ನಾಯಕಿ ಸಾಧ್ವಿ ಪ್ರಾಚಿ ಕ್ಯಾಡ್‌ಬರಿ ಜಾಹೀರಾತೊಂದನ್ನು ಹಂಚಿಕೊಂಡಿದ್ದು, ಬಡವ ದೀಪ ಮಾರಾಟಗಾರನ ಹೆಸರನ್ನು 'ದಾಮೋದರ್' ಎಂದು ಬಳಸಿರುವುದಕ್ಕೆ ತರಾಟೆಗೆ ತೆಗೆದುಕೊಂಡಿದ್ದಾರೆ. 

boycott cadbury trending as twitter users claim ad has link with pm modi ash

ಭಾನುವಾರದಿಂದ ಟ್ವಿಟ್ಟರ್‌ನಲ್ಲಿ (Twitter) ಕ್ಯಾಡ್‌ಬರಿ (Cadbury) ಉತ್ಪನ್ನಗಳ ವಿರುದ್ಧ ಹಲವು ಆರೋಪಗಳು ಕೇಳಿಬಂದಿದ್ದು, ಈ ಹಿನ್ನೆಲೆ ‘Boycott Cadbury’ ಎಂಬ ಹ್ಯಾಶ್‌ಟ್ಯಾಗ್‌ (Hashtag) ಟ್ವಿಟ್ಟರ್‌ನಲ್ಲಿ ಹೆಚ್ಚು ಟ್ರೆಂಡ್‌ ಆಗುತ್ತಿದೆ. ಭಾನುವಾರ ಕೆಲ ಕಾಲ ಈ ಹ್ಯಾಶ್‌ಟ್ಯಾಗ್‌ ನಂ. 1 ಟ್ರೆಂಡ್‌ ಆಗುತ್ತಿತ್ತು. ಕ್ಯಾಡ್ಬರಿ ಚಾಕೊಲೇಟ್‌ (Chocolate) ಉತ್ಪನ್ನಗಳಲ್ಲಿ 'ಗೋಮಾಂಸ' (Beef) ಬಳಸಲಾಗುತ್ತಿದೆ ಎಂಬ ಸಾಮಾನ್ಯ ನಕಲಿ ಹಕ್ಕುಗಳ ಹೊರತಾಗಿ, ಸಾಮಾಜಿಕ ಮಾಧ್ಯಮ ಬಳಕೆದಾರರು ಕಂಪನಿಯ ಇತ್ತೀಚಿನ ದೀಪಾವಳಿ ಜಾಹೀರಾತನ್ನು ಗುರಿಯಾಗಿಸಿಕೊಂಡಿದ್ದಕ್ಕೆ ಈ ಟ್ರೆಂಡ್‌ ಆಗುತ್ತಿದೆ.  ವಿಎಚ್‌ಪಿ ನಾಯಕಿ ಸಾಧ್ವಿ ಪ್ರಾಚಿ (Sadhvi Prachi) ಕ್ಯಾಡ್‌ಬರಿ ಜಾಹೀರಾತೊಂದನ್ನು ಹಂಚಿಕೊಂಡಿದ್ದು, ಬಡವ ದೀಪ ಮಾರಾಟಗಾರನ ಹೆಸರನ್ನು  'ದಾಮೋದರ್' (Damodar) ಎಂದು ಬಳಸಿರುವುದಕ್ಕೆ ತರಾಟೆಗೆ ತೆಗೆದುಕೊಂಡಿದ್ದಾರೆ. 

"ಪ್ರಧಾನಿ ನರೇಂದ್ರ ಮೋದಿ ಅವರ ತಂದೆಯ ಹೆಸರನ್ನು ಹೊಂದಿರುವ ಜನರನ್ನು ಕೆಟ್ಟ ರೀತಿಯಲ್ಲಿ ತೋರಿಸಲು ಈ ಜಾಹೀರಾತು ಮಾಡಲಾಗಿದೆ’’ ಎಂದು ಎಚ್‌ಪಿ ನಾಯಕಿ ಸಾಧ್ವಿ ಪ್ರಾಚಿ ಹೇಳಿದ್ದಾರೆ. "ಚಾಯ್‌ವಾಲೆ ಕೆ ಬಾಪ್ ದಿಯೇವಾಲಾ" (ಚಹಾ ಮಾರುವವರ ತಂದೆ) ಎಂದು ಸಾಧ್ವಿ ಪ್ರಾಚಿ ಮೊದಲು ಟ್ವೀಟ್ ಮಾಡಿದ್ದು, ನಂತರ ಭಾರತದಲ್ಲಿ ಕ್ಯಾಡ್‌ಬರಿ ಉತ್ಪನ್ನಗಳನ್ನು ಬಹಿಷ್ಕರಿಸುವಂತೆ ಅನೇಕರು ಟ್ವೀಟ್ ಮಾಡಲು ಪ್ರಾರಂಭಿಸಿದರು. ಈ ಹಿನ್ನೆಲೆ,  ‘Boycott Cadbury’ ಎಂಬ ಟ್ರೆಂಡ್‌ ಆಗಲು ಪ್ರಾರಂಭಿಸಿತು.  

ಇದನ್ನು ಓದಿ: ಗೋಡೌನ್‌ನಿಂದ 17 ಲಕ್ಷ ರೂಪಾಯಿ ಮೌಲ್ಯದ ಕ್ಯಾಡ್ಬರಿ ಚಾಕೊಲೇಟ್‌ ಕಳ್ಳತನ..!

ಇನ್ನು, ಕ್ಯಾಡ್‌ಬರಿ ಚಾಕೊಲೇಟ್‌ ಕಂಪನಿ,  ಭಾರತೀಯ ಟ್ವಿಟ್ಟರ್ ಬಳಕೆದಾರರ ಆಕ್ರೋಶಕ್ಕೆ ಒಳಗಾಗಿದ್ದು ಇದೇ ಮೊದಲಲ್ಲ. 2021 ರಲ್ಲಿ, ಇದೇ ರೀತಿಯ ಬಹಿಷ್ಕಾರದ ಕರೆಯನ್ನು ನೀಡಲಾಗಿತ್ತು. ಹಲಾಲ್‌ (Halal) ಪ್ರಮಾಣೀಕೃತ ಬೀಫ್‌ ಅನ್ನು ಚಾಕೊಲೇಟ್‌ನಲ್ಲಿ ಬಳಕೆ ಮಾಡಲಾಗುತ್ತಿದೆ ಎಂಬ ಆರೋಪ ಕೇಳಿಬಂದಿತ್ತು. ಇದಕ್ಕೆ ಪ್ರತಿಕ್ರಿಯೆ ನೀಡಲು ಭಾರತದಲ್ಲಿ ತನ್ನ ಎಲ್ಲಾ ಉತ್ಪನ್ನಗಳು 100% ಸಸ್ಯಾಹಾರಿ ಎಂದು ಸ್ಪಷ್ಟಪಡಿಸುವ ಹೇಳಿಕೆಯನ್ನು ಕಂಪನಿ ಸ್ಪಷ್ಟನೆ ನೀಡಿತ್ತು. ಮತ್ತು ಚಾಕೊಲೇಟ್‌ ಕವರ್‌ ಮೇಲಿನ ಹಸಿರು ಚುಕ್ಕೆ ಅದನ್ನು  ಸೂಚಿಸುತ್ತದೆ ಎಂದೂ ಹೇಳಿಕೆ ನೀಡಿತ್ತು. 

‘Boycott Cadbury’ ಎಂಬ ಟ್ರೆಂಡ್‌ ಮಾಡಿದ ಟ್ವಿಟ್ಟರ್‌ ಬಳಕೆದಾರರು ಆಸ್ಟ್ರೇಲಿಯದ ಕ್ಯಾಡ್‌ಬರಿ ವೆಬ್‌ಸೈಟ್‌ನ ಉತ್ಪನ್ನ ವಿವರಣೆ ಪೇಜ್‌ ಸ್ಕ್ರೀನ್‌ಶಾಟ್ ಅನ್ನು ಹಂಚಿಕೊಂಡಿದ್ದಾರೆ. ಅದರಲ್ಲಿ, "ದಯವಿಟ್ಟು ಗಮನಿಸಿ, ನಮ್ಮ ಯಾವುದೇ ಆಸ್ಟ್ರೇಲಿಯನ್ ಉತ್ಪನ್ನಗಳಲ್ಲಿ ಪದಾರ್ಥಗಳಲ್ಲಿ ಜಿಲಾಟಿನ್ ಇದ್ದರೆ, ನಾವು ಬಳಸುವ ಜಿಲಾಟಿನ್ ಹಲಾಲ್ ಪ್ರಮಾಣೀಕರಿಸಲ್ಪಟ್ಟಿದೆ ಮತ್ತು ಗೋಮಾಂಸದಿಂದ ಪಡೆಯಲಾಗಿದೆ." ಎಂದು ವಿವರಣೆ ನೀಡಲಾಗಿದೆ.

ಇದನ್ನೂ ಓದಿ: ದೀಪಾವಳಿ ಪ್ರಯುಕ್ತ ಶಾರುಖ್ ಹೊಸ ಜಾಹೀರಾತು : ಸಾಮಾಜಿಕ ಜಾಲತಾಣದಲ್ಲಿ ವೈರಲ್!

ಗೋಮಾಂಸ ಆರೋಪದ ಸತ್ಯವೇನು?
ಕ್ಯಾಡ್ಬರಿ ಉತ್ಪನ್ನಗಳಲ್ಲಿ ಗೋಮಾಂಸವಿದೆ ಎಂದು ಹೇಳುವ ವೈರಲ್ ಸ್ಕ್ರೀನ್‌ಶಾಟ್ ಭಾರತದದಲ್ಲ. ಈ ಹಿಂದೆ ಕ್ಯಾಡ್‌ಬರಿ ಡೈಲಿ ಮಿಲ್ಕ್ ಅನ್ನು ತಯಾರಿಸುವ ಕ್ಯಾಡ್‌ಬರಿ, ಮೊಂಡೆಲೆಜ್ ಇಂಡಿಯಾ ವಿರುದ್ಧ ಇದೇ ರೀತಿಯ ಆರೋಪಗಳನ್ನು ಮಾಡಿದಾಗ, ತನ್ನ ಭಾರತೀಯ ಉತ್ಪನ್ನಗಳು 100% ಸಸ್ಯಾಹಾರಿಯಾಗಿದೆ ಎಂದು ಕ್ಯಾಡ್‌ಬರಿ ಚಾಕೊಲೇಟ್‌ ಕಂಪನಿ ಸ್ಕ್ರೀನ್‌ಶಾಟ್‌ ಹಂಚಿಕೊಂಡಿತ್ತು. 

ಇದನ್ನೂ ಓದಿ: ನೆಟ್ಟಿಗರ ಮನಗೆದ್ದ ಕ್ಯಾಡ್‌ಬರಿ ಜಾಹೀರಾತು..! ಅಷ್ಟಕ್ಕೂ ಏನಿದೆ ಇದರಲ್ಲಿ ?

Latest Videos
Follow Us:
Download App:
  • android
  • ios