Asianet Suvarna News Asianet Suvarna News

ನಿಪ್ಪಾ ವೈರಸ್‌ಗೆ ಬಲಿಯಾದ ಬಾಲಕ.. ತಕ್ಷಣವೇ ಕೇರಳಕ್ಕೆ ಕೇಂದ್ರ ತಂಡ

* ಕೇರಳದಲ್ಲಿ ಮತ್ತೆ ಕಾಣಿಸಿಕೊಂಡ ನಿಪ್ಪಾ ವೈರಸ್
* 2018 ರಲ್ಲಿ ನಿಪ್ಪಾ  ಹದಿನಾರು ಜನರಲ್ಲಿ ಕಾಣಿಸಿಕೊಂಡಿತ್ತು
* ನಿಪ್ಪಾ ವೈರಸ್ ಗೆ ಬಾಲಕ ಬಲಿ, ಕೇಂದ್ರ ತಂಡಕ್ಕೆ ಮಾಹಿತಿ

Boy dies of Nipah Virus in Kozhikode Centre rushes team to Kerala mah
Author
Bengaluru, First Published Sep 5, 2021, 8:55 PM IST

ಕೊಚ್ಚಿ(ಸೆ. 05)  ಕೇರಳದಲ್ಲಿ ಕೊರೋನಾ ವೈರಸ್ ಮಿತಿ ಮೀರಿ ಕಾಟ ಕೊಡುತ್ತಿರುವಾಗಲೇ ನಿಪ್ಪಾ ಹಾವಳಿಯೂ ಕಾಣಿಸಿಕೊಂಡಿದೆ. ಕೇರಳದ ಕೋಝಿಕ್ಕೋಡ್  ಜಿಲ್ಲೆಯಲ್ಲಿ 2018 ರಲ್ಲಿ ನಿಪ್ಪಾ ವೈರಸ್ ಪ್ರಕರಣ  ಕಂಡುಬಂದಿತ್ತು. 

ಇದೀಗ ಕೇರಳದ ಕೋಝಿಕ್ಕೋಡ್   ಮತ್ತು ಮಲಪ್ಪುರಂ ಜಿಲ್ಲೆಯಲ್ಲಿ ಹೈ ಅಲರ್ಟ್ ಘೋಷಣೆ ಮಾಡಲಾಗಿದೆ. ಇದಕ್ಕೆ ಕಾರಣ 12 ವರ್ಷದ ಬಾಲಕ ನಿಪ್ಪಾ ಸೋಂಕಿನಿಂದ ಮೃತಪಪಟ್ಟಿದ್ದಾನೆ.  ಭಾನುವಾರ ಮುಂಜಾನೆ ಬಾಲಕ ಮೃತಪಟ್ಟಿದ್ದು ಕೇಂದ್ರ ಸಹ ತಂಡ ಕಳುಹಿಸಿಕೊಟ್ಟಿದೆ.

ಕೊರೋನಾ ನಡುವೆ ಗಣೇಶ ಹಬ್ಬಕ್ಕೆ ಷರತ್ತು ಬದ್ಧ ಅನುಮತಿ; ಮಾರ್ಗಸೂಚಿ ಇಲ್ಲಿದೆ

ಆರೋಗ್ಯ ಇಲಾಖೆ ಮುನ್ನೆಚ್ಚರಿಕೆ ತೆಗೆದುಕೊಂಡಿದ್ದು ಬಾಲಕನ ಅತಿ ಹತ್ತಿರದ ಐವರು ಸಂಬಂಧಿಗಳ ಮೇಲೆ ನಿಗಾ ವಹಿಸಲಾಗಿದೆ.  ಬಾಲಕನ ಜತೆ ಸಂಪರ್ಕದಲ್ಲಿ ಇದ್ದು ಎಂಬ ಹನ್ನೆರಡು ಜನರನ್ನು ಆಬ್ಸರ್ ವೇಶನ್ ನಲ್ಲಿ ಇಡಲಾಗಿದೆ.

ಈ ಬಗ್ಗೆ ಮಾಹಿತಿ ನೀಡಿರುವ ಆರೋಗ್ಯ ಮಂತ್ರಿ ವೀಣಾ ಜಾರ್ಜ್ ಕೇರಳದಿಂದ ಮೂರು ಸ್ಯಾಂಪಲ್ ಗಳನ್ನು ಕಳುಹಿಸಿ ಕೊಡಲಾಗಿತ್ತು. ಅದರಲ್ಲೊಂದು  ಪಾಸಿಟಿವ್ ಬಂದಿದೆ ಎಂದಿದ್ದಾರೆ.

ಜನರು ಆತಂಕಕ್ಕೆ ಒಳಗಾಗುವ ಅಗತ್ಯ ಇಲ್ಲ.. ಸರ್ಕಾರ ಎಲ್ಲ ಸುರಕ್ಷತಾ ಕ್ರಮ ತೆಗೆದುಕೊಂಡಿದೆ. ಜ್ವರ ಮತ್ತು ಮಿದುಳಿಗೆ ಸಂಬಂಧಿಸಿದ ತೊಂದರೆ ಯಿಂದ ಬಾಲಕ ನಾಲ್ಕು ದಿನಗಳ ಹಿಂದೆ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದ ಎಂದು ತಿಳಿಸಿದ್ದಾರೆ. ತಜ್ಞರ ತಂಡ ಮಾಹಿತಿ ಕಲೆಹಾಕಿದ್ದು ವೀಣಾ ಸಹ ಉನ್ನತ ಅಧಿಕಾರಿಗಳ ಸಭೆ ನಡೆಸಿದ್ದಾರೆ. 2018 ರಲ್ಲಿ ನಿಪ್ಪಾ ಕಾಣಿಸಿಕೊಂಡಾಗ ಹದಿನಾರು ಪ್ರಕರಣ ದಾಖಲಾಗಿ ಅದರಲ್ಲಿ ಏಳು ಜನರು ಅಸುನೀಗಿದ್ದರು. 

Follow Us:
Download App:
  • android
  • ios